ಭುವನೇಶ್ವರ್ (ಒಡಿಶಾ) : ಏ. 8 ಮತ್ತು 9 ರಂದು ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಟೂರ್ನಿಯಲ್ಲಿ ವಿಶ್ವ ನಂ.1 ನೆದರ್ಲೆಂಡ್ಸ್ ತಂಡವನ್ನು ಭಾರತ ಮಹಿಳಾ ತಂಡ ಎದುರಿಸಲಿದೆ. ಇದೀಗ ಈ ಪಂದ್ಯಾಟದಲ್ಲಿ ಭಾಗವಹಿಸಲಿರುವ 22 ಸದಸ್ಯರ ತಂಡವನ್ನು ಹಾಕಿ ಇಂಡಿಯಾ(Hockey India) ಪಟ್ಟಿ ಮಾಡಿದೆ.
ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿ ತಂಡ ಐತಿಹಾಸಿಕ ಸಾಧನೆಗೈದು ನಾಲ್ಕನೇ ಸ್ಥಾನದಲ್ಲಿ ಮುನ್ನಡೆದಿದ್ದರು. ಇನ್ನು ತಂಡದ ಕುರಿತು ಮಾತನಾಡಿದ ಮುಖ್ಯ ಕೋಚ್ ಜನ್ನೆಕೆ ಸ್ಕೋಪ್‌ಮನ್, "ನೆದರ್ಲ್ಯಾಂಡ್ಸ್ ವಿರುದ್ಧ ಆಡಲು ನಾವು ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದೇವೆ. ಹೊಸ ಮುಖಗಳು ಈ ಬಾರಿ ಅಂಗಣಕ್ಕೆ ಕಾಲಿಡುತ್ತಿದ್ದು, ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ. ಇನ್ನು ನೆದರ್ಲ್ಯಾಂಡ್ಸ್ ಅಸಾಧಾರಣ ಎದುರಾಳಿ. ಹೀಗಾಗಿ ನಾವು ಸಹ ಆಶಾದಾಯಕವಾಗಿ ಪ್ರದರ್ಶನ ನೀಡಲು ಸಿದ್ಧರಿದ್ದೇವೆ" ಎಂದರು.
ಇದನ್ನು ಓದಿ: RR vs RCB, IPL 2022: ಇಂದು ರಾಯಲ್ಸ್ ಗೆ 'ರಾಯಲ್' ಚಾಲೆಂಜ್..!
ಭಾರತ ಮಹಿಳಾ ತಂಡವು ಪ್ರಸ್ತುತ ಪೂಲ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳನ್ನು ಗೆದ್ದು ಒಂದು ಅಂಕವನ್ನು ಗಳಿಸಿದ್ದಾರೆ. ಮತ್ತೊಂದೆಡೆ, ನೆದರ್ಲ್ಯಾಂಡ್ಸ್ ಆಡಿರುವ ಆರು ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ ಮತ್ತು ಶೂಟ್ ಔಟ್ ಗೆಲುವಿನಿಂದ ಹೆಚ್ಚುವರಿ ಪಾಯಿಂಟ್ ಗಳಿಸಿದೆ.
ಭಾರತ ಮಹಿಳಾ ಹಾಕಿ ತಂಡ:
ಗೋಲ್ ಕೀಪರ್‌ಗಳು: ಸವಿತಾ (ನಾಯಕಿ) ಮತ್ತು ರಜನಿ ಎಟಿಮಾರ್ಪು
ಡಿಫೆಂಡರ್‌ಗಳು: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ರಶ್ಮಿತಾ ಮಿಂಜ್ ಮತ್ತು ಸುಮನ್ ದೇವಿ ತೌಡಮ್
ಮಿಡ್‌ಫೀಲ್ಡರ್‌ಗಳು: ನಿಶಾ, ಸುಶೀಲಾ ಚಾನು ಪುಖ್ರಂಬಮ್, ಜ್ಯೋತಿ, ನವಜೋತ್ ಕೌರ್, ಮೋನಿಕಾ, ನಮಿತಾ ಟೊಪ್ಪಾ, ಸೋನಿಕಾ, ನೇಹಾ ಮತ್ತು ಮಹಿಮಾ ಚೌಧರಿ
ಫಾರ್ವರ್ಡ್‌ಗಳು: ಐಶ್ವರ್ಯಾ ರಾಜೇಶ್ ಚವಾಣ್, ನವನೀತ್ ಕೌರ್, ರಾಜ್‌ವಿಂದರ್ ಕೌರ್, ರಾಣಿ ಮತ್ತು ಮರಿಯಾನಾ ಕುಜೂರ್
ಸ್ಟ್ಯಾಂಡ್‌ಬೈ: ಉಪಾಸನಾ ಸಿಂಗ್, ಪ್ರೀತಿ ದುಬೆ ಮತ್ತು ವಂದನಾ ಕಟಾರಿಯಾ
ಇದನ್ನು ಓದಿ: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಗೆಲುವಿನ ಶುಭಾರಂಭಗೈದ ಲಕ್ಷ್ಯ ಸೇನ್