ಭಾರತೀಯ ಬ್ಯಾಟ್ಸಮನ್ ಗಳಿಗೆ ವೈಯಕ್ತಿಕ ದಾಖಲೆಗಳದ್ದೇ ಚಿಂತೆ- ಇಂಜಮಾಮ್ ಉಲ್ ಹಕ್ ಆರೋಪ

ಪಾಕಿಸ್ತಾನ ಮತ್ತು ಭಾರತದ ನಡುವಿನ ವ್ಯತ್ಯಾಸವೆಂದರೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಡುತ್ತಿದ್ದರೆ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ಆಡಿದ್ದಾರೆ ಹೊರತು ವೈಯಕ್ತಿಕ ದಾಖಲೆಗಳಿಗಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಮತ್ತು ಮುಖ್ಯ ಆಯ್ಕೆದಾರ ಇಂಜಮಾಮ್-ಉಲ್-ಹಕ್ ಆರೋಪಿಸಿದ್ದಾರೆ.

Last Updated : Apr 23, 2020, 04:39 PM IST
ಭಾರತೀಯ ಬ್ಯಾಟ್ಸಮನ್ ಗಳಿಗೆ ವೈಯಕ್ತಿಕ ದಾಖಲೆಗಳದ್ದೇ ಚಿಂತೆ- ಇಂಜಮಾಮ್ ಉಲ್ ಹಕ್ ಆರೋಪ  title=
file photo

ನವದೆಹಲಿ: ಪಾಕಿಸ್ತಾನ ಮತ್ತು ಭಾರತದ ನಡುವಿನ ವ್ಯತ್ಯಾಸವೆಂದರೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಡುತ್ತಿದ್ದರೆ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ಆಡಿದ್ದಾರೆ ಹೊರತು ವೈಯಕ್ತಿಕ ದಾಖಲೆಗಳಿಗಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಮತ್ತು ಮುಖ್ಯ ಆಯ್ಕೆದಾರ ಇಂಜಮಾಮ್-ಉಲ್-ಹಕ್ ಆರೋಪಿಸಿದ್ದಾರೆ.

ಪಾಕಿಸ್ತಾನದ ಮಾಜಿ ತಂಡದ ಸಹ ಆಟಗಾರ ರಮೀಜ್ ರಾಜಾ ಅವರೊಂದಿಗೆ ಇನ್‌ಜಮಾಮ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಆಟಗಾರರು ಪ್ರಸ್ತುತ ಸಹಜ ಪ್ರತಿಭೆಯನ್ನು ಹೊಂದಿದ್ದಾರೆ, ಆದರೆ ಕೆಲವೊಮ್ಮೆ ವೈಫಲ್ಯದ ಬಗ್ಗೆ ತುಂಬಾ ಭಯಭೀತರಾಗಿದ್ದಾರೆ ಎಂದು ರಮೀಜ್ ರಾಜಾ ಕೇಳಿದರು, ಇದರಿಂದಾಗಿ ತಂಡವು ಅಸಾಧ್ಯವಾದ ಸನ್ನಿವೇಶಗಳಿಂದ ಹಿಂದಿರುಗುವ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ.

ಇದಕ್ಕೆ ಪ್ರತಿಕ್ರಿಯಿಸಿದ ಇಂಜಮಾಮ್, ಆಟಗಾರರು ಸರಣಿ-ಸರಣಿಯ ಆಧಾರದ ಮೇಲೆ ಯೋಚಿಸುತ್ತಿದ್ದರೆ, ಅವರು ಒಂದರಲ್ಲಿ ಯಶಸ್ವಿಯಾದರೆ ಅವರಿಗೆ ಸ್ಥಾನ ಸಿಗುತ್ತದೆ ಮತ್ತು ಅವರು ವಿಫಲವಾದರೆ ಅವರನ್ನು ಕೈಬಿಡಲಾಗುತ್ತದೆ, ಅವರು ಎಂದಿಗೂ ತಮ್ಮ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಇಮ್ರಾನ್ ಖಾನ್ ಸತತ ಎರಡು ಸರಣಿ ವಿಫಲವಾದಾಗಲೂ ಕೂಡ ಅವರು ಆಟಗಾರರನ್ನು ಕೈಬಿಡದೆ ಅವಕಾಶ ನೀಡಿರುವ ಕುರಿತಾಗಿ ಹೇಳಿದರು. ಇದೇ ವೇಳೆ ಅವರು ಇದನ್ನು ಭಾರತ ತಂಡಕ್ಕೆ ಹೋಲಿಸಿ ನೋಡುವ ಪ್ರಯತ್ನ ಮಾಡಿದರು.

'ನಮ್ಮ ಸಮಯದಲ್ಲಿ, ಭಾರತವು ನಮಗಿಂತ ಬಲವಾದ ಬ್ಯಾಟಿಂಗ್ ತಂಡವನ್ನು ಹೊಂದಿತ್ತು ಎಂದು ಕಾಗದ ಮೇಲೆ ಹೇಳಲಾಗುತ್ತಿತ್ತು. ನಮ್ಮ ದಾಖಲೆ ಅವರ ಬ್ಯಾಟ್ಸ್‌ಮನ್‌ಗಳಂತೆ ಉತ್ತಮವಾಗಿರಲಿಲ್ಲ. ಆದರೆ ನಮ್ಮಲ್ಲಿ ಒಬ್ಬರು 30-40 ರನ್ ಗಳಿಸಿದರೆ, ನಾವು ಅದನ್ನು ತಂಡಕ್ಕಾಗಿ ಮಾಡಿದ್ದೇವೆ. ಒಂದು ವೇಳೆ ಭಾರತೀಯ ಆಟಗಾರನು ಶತಕ ಬಾರಿಸಿದ್ದರೇ, ಅದು ತಂಡಕ್ಕೆ ಅಲ್ಲ, ಅವನು ತಾನೇ ಆಡುತ್ತಿದ್ದಾನೆ. ಅದು ಒಂದು ವ್ಯತ್ಯಾಸವನ್ನುಂಟುಮಾಡಿತು 'ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದ್ದಾರೆ.

Trending News