2023 ರ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತದ ಆತಿಥ್ಯ

ಈ ವರ್ಷದ ಕೊನೆಯ ಸಭೆಯಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ನ (ಎಫ್‌ಐಹೆಚ್) ಕಾರ್ಯನಿರ್ವಾಹಕ ಮಂಡಳಿಯು 2023 ರ ಎಫ್‌ಐಹೆಚ್ ಹಾಕಿ ಪುರುಷರ ವಿಶ್ವಕಪ್‌ ಗೆ ಭಾರತ ಆತಿಥ್ಯ ವಹಿಸಲಿದೆ ಎಂದು ತಿಳಿಸಿದೆ.  

Last Updated : Nov 8, 2019, 05:57 PM IST
2023 ರ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತದ ಆತಿಥ್ಯ title=

ನವದೆಹಲಿ: ಈ ವರ್ಷದ ಕೊನೆಯ ಸಭೆಯಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ನ (ಎಫ್‌ಐಹೆಚ್) ಕಾರ್ಯನಿರ್ವಾಹಕ ಮಂಡಳಿಯು 2023 ರ ಎಫ್‌ಐಹೆಚ್ ಹಾಕಿ ಪುರುಷರ ವಿಶ್ವಕಪ್‌ ಗೆ ಭಾರತ ಆತಿಥ್ಯ ವಹಿಸಲಿದೆ ಎಂದು ತಿಳಿಸಿದೆ.  

2022 ರ ಜುಲೈ 1-17 ರಿಂದ ನಡೆಯಲಿರುವ 2022 ರ ಎಫ್‌ಐಹೆಚ್ ಮಹಿಳಾ ಹಾಕಿ ವಿಶ್ವಕಪ್‌ಗೆ ಸ್ಪೇನ್ ಮತ್ತು ನೆದರ್‌ಲ್ಯಾಂಡ್ಸ್ ಸಹ-ಆತಿಥ್ಯ ವಹಿಸಲಿವೆ ಎಂದು ಎಫ್‌ಐಹೆಚ್ ಘೋಷಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಫ್‌ಐಹೆಚ್ ಸಿಇಒ ಥಿಯೆರಿ ವೇಲ್ ಈ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಆಯೋಜಿಸಲು ಎಫ್‌ಐಹೆಚ್ ಅತ್ಯುತ್ತಮ ಬಿಡ್‌ಗಳನ್ನು ಪಡೆದಿದೆ. ಆದ್ದರಿಂದ, ಇದು ಕಷ್ಟಕರ ಆಯ್ಕೆಯಾಗಿದೆ. ಎಫ್‌ಐಎಚ್‌ನ ಪ್ರಾಥಮಿಕ ಧ್ಯೇಯವೆಂದರೆ ಕ್ರೀಡೆಯನ್ನು ವಿಶ್ವಾದ್ಯಂತ ಬೆಳೆಸುವುದು ಯಾವ ಹೂಡಿಕೆಗಳನ್ನು ಮಾಡಬೇಕೆಂಬುದು ಸಹಜವಾಗಿ - ಪ್ರತಿ ಬಿಡ್‌ನ ಆದಾಯ-ಉತ್ಪಾದನಾ ಸಾಮರ್ಥ್ಯವು ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದು ಹೇಳಿದರು.  

 

Trending News