IND vs ZIM: ಇಂಡೋ-ಜಿಂಬಾಬ್ವೆ ಅಂತಿಮ ಹಣಾಹಣಿ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

India vs Zimbabwe: ಸದ್ಯ ಭಾರತ ತಂಡದಲ್ಲಿ ಸಂಭಾವ್ಯ ಆಟಗಾರರಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ ಇರಲಿದ್ದಾರೆ.

Written by - Bhavishya Shetty | Last Updated : Nov 6, 2022, 01:05 PM IST
IND vs ZIM: ಇಂಡೋ-ಜಿಂಬಾಬ್ವೆ ಅಂತಿಮ ಹಣಾಹಣಿ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ title=
india zimbabwe

India vs Zimbabwe: ಇಂದು ಮುಂಜಾನೆ ನಡೆದ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾದ ಆಘಾತಕಾರಿ ಸೋಲು ಭಾರತವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇಲ್ಲ ಎಂದು ಖಚಿತಪಡಿಸಿದೆ. ದಕ್ಷಿಣ ಆಫ್ರಿಕಾದ ನಿರ್ಗಮನದ ಪರಿಣಾಮವಾಗಿ ರೋಹಿತ್ ಶರ್ಮ ನೇತೃತ್ವದ ತಂಡ ಈಗಾಗಲೇ ಅಂತಿಮ ನಾಲ್ಕಕ್ಕೆ ತಲುಪಿದ್ದಾರೆ. ನವೆಂಬರ್ 10 ರಂದು ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: Ind vs Zim : ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ-ಜಿಂಬಾಬ್ವೆ ಮುಖಾಮುಖಿ!

ಇನ್ನು ಇದೀಗ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿದಿರುವ ಭಾರತ ಮೆಲ್ಬರ್ನ್ ನಲ್ಲಿ ಆಡಲಿದೆ. ಸದ್ಯ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.

ಸದ್ಯ ಭಾರತ ತಂಡದಲ್ಲಿ ಸಂಭಾವ್ಯ ಆಟಗಾರರಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ ಇರಲಿದ್ದಾರೆ.

ಇನ್ನು ಜಿಂಬಾಬ್ವೆ ತಂಡದಲ್ಲಿ ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ಕ್ಯಾಪ್ಟನ್), ರೆಗಿಸ್ ಚಕಬ್ವಾ (ವಿ.ಕೀ), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ರಿಚರ್ಡ್ ನ್ಗರವಾಯ್ , ಬ್ಲೆಸ್ಸಿಂಗ್ ಮುಜರಬಾನಿ ಇದ್ದಾರೆ.

ಇದನ್ನೂ ಓದಿ: T20 World Cup 2022ರಲ್ಲಿ ವಿರಾಟ್ ಕಾರುಬಾರು: ಅಬ್ಬಬ್ಬಾ.. ಕೊಹ್ಲಿ ಹೆಸರಲ್ಲಿದೆ ಇಷ್ಟೊಂದು ದಾಖಲೆಗಳು!

ಪಿಚ್ ಕಂಡೀಷನ್:

ವಿಶ್ವಕಪ್‌ನಲ್ಲಿ ಇದುವರೆಗೆ ಮೆಲ್ಬೋರ್ನ್‌ನಲ್ಲಿ ನಡೆದ ಐದು ಪಂದ್ಯಗಳಲ್ಲಿ ಮೊದಲ ಪಂದ್ಯ ಮಾತ್ರ ಮಳೆಯಿಂದ ಪ್ರಭಾವಿತವಾಗಿಲ್ಲ. ಕೊನೆಯ ಮೂರು ಪಂದ್ಯ ಕೂಡ ಮಳೆಗೆ ಆಹುತಿಯಾಗಿತ್ತು. ಅದಕ್ಕಿಂತ ಮೊದಲು ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಪಂದ್ಯವನ್ನು ಮೊಟಕುಗೊಳಿಸಲಾಯಿತು. ಅದೃಷ್ಟವಶಾತ್, ಇಂದು ಮಳೆಯ ಮುನ್ಸೂಚನೆ ಇಲ್ಲ. ಇದು ತಾಜಾ ಪಿಚ್ ಆಗಿರುವುದರಿಂದ ಸೀಮರ್‌ಗಳಿಗೆ ಸ್ವಲ್ಪ ಸಹಾಯವನ್ನು ನಿರೀಕ್ಷಿಸಬಹುದು, ಆದರೆ ಬ್ಯಾಟರ್‌ಗಳು ಕಷ್ಟ ಅನುಭವಿಸುವ ಸಾಧ್ಯತೆಯಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News