ವಿಂಡೀಸ್ ವಿರುದ್ಧ 4ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು: Team India ವಿಜಯಕ್ಕೆ ಈ ಮೂವರೇ ಪ್ರಮುಖ ಕಾರಣ!

India vs West Indies 4th T20 Highlights: ಫ್ಲೋರಿಡಾದ (ಯುಎಸ್‌ಎ) ಲಾಡರ್‌’ಹಿಲ್‌’ನಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

Written by - Bhavishya Shetty | Last Updated : Aug 13, 2023, 07:17 AM IST
    • ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್
    • ಯಶಸ್ವಿ ಜೈಸ್ವಾಲ್ 84 ರನ್ ಗಳಿಸಿ ಅಜೇಯರಾಗಿ ಮರಳಿದರು.
    • ನಾಲ್ಕನೇ T20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 9 ವಿಕೆಟ್ ಗಳಿಂದ ಭಾರತ ಸೋಲಿಸಿದೆ
ವಿಂಡೀಸ್ ವಿರುದ್ಧ 4ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು: Team India ವಿಜಯಕ್ಕೆ ಈ ಮೂವರೇ ಪ್ರಮುಖ ಕಾರಣ!  title=
India vs West Indies

India vs West Indies 4th T20 Highlights: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಸರಣಿಯ ನಾಲ್ಕನೇ T20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 9 ವಿಕೆಟ್ ಗಳಿಂದ ಸೋಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 8 ವಿಕೆಟ್‌ ನಷ್ಟಕ್ಕೆ 178 ರನ್ ಗಳಿಸಿತು, ನಂತರ ಭಾರತ ತಂಡ 17 ಓವರ್‌’ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ ಗುರಿ ತಲುಪಿದ್ದು ಮಾತ್ರ ಐತಿಹಾಸಿಕ ಕ್ಷಣ ಎನ್ನಬಹುದು. ಯಶಸ್ವಿ ಜೈಸ್ವಾಲ್ 84 ರನ್ ಗಳಿಸಿ ಅಜೇಯರಾಗಿ ಮರಳಿದರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಿಂದ ನೂರಾರು ಕೋಟಿ ಗಳಿಕೆ: ವಿರಾಟ್ ಕೊಹ್ಲಿ ಹೇಳಿದ್ದೇನು?

3 ವಿಕೆಟ್ ಕಬಳಿಸಿದ ಅರ್ಷದೀಪ್:

ಫ್ಲೋರಿಡಾದ (ಯುಎಸ್‌ಎ) ಲಾಡರ್‌’ಹಿಲ್‌’ನಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಶಿಮ್ರಾನ್ ಹೆಟ್ಮೆಯರ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಇವರಲ್ಲದೆ ಶಾಯ್ ಹೋಪ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 45 ರನ್ ಸೇರಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಗರಿಷ್ಠ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.

ಗಿಲ್ ಮತ್ತು ಯಶಸ್ವಿ ರನ್ ಬೇಟೆ:

179 ರನ್‌’ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಬಲಿಷ್ಠ ಆರಂಭ ನೀಡಿದರು. ಇವರಿಬ್ಬರು 165 ರನ್‌’ಗಳ ಆರಂಭಿಕ ಜೊತೆಯಾಟವನ್ನು ಆಡಿದರು. ಗಿಲ್ 47 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಇನಿಂಗ್ಸ್‌’ನ 16ನೇ ಓವರ್‌’ನಲ್ಲಿ ರೊಮಾರಿಯೊ ಶೆಫರ್ಡ್ ಮೂರನೇ ಎಸೆತದಲ್ಲಿ ಶಾಯ್ ಹೋಪ್ ಕೈಗೆ ಗಿಲ್ ಕ್ಯಾಚ್ ನೀಡಿದಾಗ ಭಾರತ ತಂಡಕ್ಕೆ ಮೊದಲ ಹೊಡೆತ ಬಿದ್ದಿತು. ಯಶಸ್ವಿ ಜೈಸ್ವಾಲ್ ಒಂದು ತುದಿಯಲ್ಲಿ ಫ್ರೀಜ್ ಆಗಿದ್ದರು. 51 ಎಸೆತಗಳ ಅಜೇಯ ಇನ್ನಿಂಗ್ಸ್‌’ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಇನ್ನು ತಿಲಕ್ ವರ್ಮಾ 7 ರನ್ ಗಳಿಸಿ ಅಜೇಯರಾಗಿ ಮರಳಿದರು.

ಇದನ್ನೂ ಓದಿ: ODI ವಿಶ್ವಕಪ್ 2023 ಪಂದ್ಯಗಳ ಟಿಕೆಟ್‌ ಬುಕಿಂಗ್ ಹೀಗೆ ಮಾಡಿ.. ಇಲ್ಲಿದೆ ಡೈರೆಕ್ಟ್‌ ಲಿಂಕ್‌

ಅಬ್ಬರಿಸಿದ ಯಶಸ್ವಿ:

ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಜೀವನದ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪ್ರಸಕ್ತ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದ ಯಶಸ್ವಿ, ಈ ಹಿಂದೆ ಆಗಸ್ಟ್ 8 ರಂದು ನಡೆದ ಟಿ20 ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದರು. ಈಗ ಮತ್ತೆ ಅಬ್ಬರದ ಪ್ರದರ್ಶನ ನೀಡಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News