India vs Sri Lanka, 1st T20I: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿದ ಶ್ರೀಲಂಕಾ

Written by - Zee Kannada News Desk | Last Updated : Feb 24, 2022, 10:00 PM IST
  • ಲಕ್ನೋದಲ್ಲಿ ಶ್ರೀಲಂಕಾ ತಂಡದ ವಿರುದ್ಧ ನಡೆಯುತ್ತಿರುವ ಮೊದಲನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಭಾರತ ತಂಡವನ್ನು 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 199 ರನ್ ಗಳಿಗೆ ನಿಯಂತ್ರಿಸಿತು.
 India vs Sri Lanka, 1st T20I: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿದ ಶ್ರೀಲಂಕಾ  title=

ನವದೆಹಲಿ: ಲಕ್ನೋದಲ್ಲಿ ಶ್ರೀಲಂಕಾ ತಂಡದ ವಿರುದ್ಧ ನಡೆಯುತ್ತಿರುವ ಮೊದಲನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡವು ಭಾರತ ತಂಡವನ್ನು 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 199 ರನ್ ಗಳಿಗೆ ನಿಯಂತ್ರಿಸಿತು.

ಇದನ್ನೂ ಓದಿ : PM Ujjwala Yojana : 9 ಕೋಟಿ ಜನತೆಗೆ ಉಚಿತ LPG ಸಂಪರ್ಕ : ನೀವು ಲಾಭ ಪಡೆಯಬಹುದು! ಹೇಗೆ? ಇಲ್ಲಿದೆ ನೋಡಿ

ಭಾರತದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಕೇವಲ 32 ಎಸೆತಗಳಲ್ಲಿ 44 ರನ್ ಗಳಿಸಿದರೆ, ಇಶಾನ್ ಕಿಶನ್ ಅವರು 56 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದಾಗಿ 89 ರನ್ ಗಳಿಸಿ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಕೂಡ ಕೇವಲ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದಾಗಿ 57 ರನ್ ಗಳಿಸುವ ಮೂಲಕ ಭಾರತ ತಂಡವು 190 ರ ಗಡಿಯನ್ನು ದಾಟುವಲ್ಲಿ ನೆರವಾದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡವು ಈಗ ಐದು ವಿಕೆಟ್ ನಷ್ಟಕ್ಕೆ 12.5 ಓವರ್ ಗಳಲ್ಲಿ 67 ರನ್ ಗಳಿಸಿದೆ.ಶ್ರೀಲಂಕಾದ ಪರವಾಗಿ ಚರಿತ್ ಅಸಲಾಂಕಾ ಅವರು 26 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.ಭಾರತದ ಪರವಾಗಿ ಭುವನೇಶ್ವರ್ ಕುಮಾರ್ ಅವರು ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇದನ್ನೂ ಓದಿ : ಟ್ರಾಫಿಕ್ ದಂಡದ ಮೇಲೂ ಬಂಪರ್ ಡಿಸ್ಕೌಂಟ್, 1000 ರೂಪಾಯಿ ಫೈನ್ ಹಾಕಿದರೆ ಪಾವತಿ ಮಾಡಬೇಕಾಗಿರುವುದು ಕೇವಲ 250 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News