IND vs SA : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯಲ್ಲಿ ಕರೋನಾ ಎಂಟ್ರಿ ನೀಡಿದೆ. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದೆ. ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡ ಐದು ಟಿ20 ಪಂದ್ಯಗಳನ್ನು ಆಡಬೇಕಿದೆ. ಅಷ್ಟರಲ್ಲೆ ಈ ಘಟನೆ ಸಂಭವಿಸಿದ್ದು ಟೀಂಗೆ ಆಘಾತ ಉಂಟು ಮಾಡಿದೆ.
ಈ ಆಟಗಾರನಿಗೆ ಕೊರೊನಾ ಪಾಸಿಟಿವ್
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಏಡೆನ್ ಮಾರ್ಕ್ರಾಮ್ ಗೆ ಇಂದು ಕೋವಿಡ್ -19 ಗೆ ಪಾಸಿಟಿವ್ ಟೆಸ್ಟ್ ಬಂದಿದೆ. ಹೀಗಾಗಿ ಈ ಆಟಗಾರ ಭಾರತ ವಿರುದ್ಧದ ಆರಂಭಿಕ ಟಿ20 ಅಂತರರಾಷ್ಟ್ರೀಯ ಪಂದ್ಯದಿಂದ ಹೊರಗುಳಿದಿದ್ದಾರೆ. ಮಾರ್ಕ್ರಾಮ್ ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ನ ಭಾಗವಾಗಿದ್ದರು. ಕೋವಿಡ್-19 ಪಾಸಿಟಿವ್ ಪರೀಕ್ಷೆಯಿಂದಾಗಿ ಐದು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಆಯ್ಕೆಗೆ ಲಭ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟಾಸ್ನಲ್ಲಿ ಬಹಿರಂಗಪಡಿಸಿದರು.
ಇದನ್ನೂ ಓದಿ : India vs SA T20I series: ಕೆ.ಎಲ್.ರಾಹುಲ್, ಕುಲದೀಪ್ ಯಾದವ್ ಸರಣಿಯಿಂದ ಔಟ್
ಕ್ಯಾಪ್ಟನ್ ಬಾವುಮಾ ಹೇಳಿದುಷ್ಟು
ಕಳೆದ ವಾರ ಜೂನ್ 2 ರಂದು ದಕ್ಷಿಣ ಆಫ್ರಿಕಾ ತಂಡದೊಂದಿಗೆ ಇಲ್ಲಿಗೆ ಆಗಮಿಸಿದ ಐಡೆನ್ ಮಾರ್ಕ್ರಾಮ್, ಉಳಿದ ಆಟಗಾರರೊಂದಿಗೆ ಮೊದಲ ಸುತ್ತಿನ ತನಿಖೆಯಲ್ಲಿ ನೆಗೆಟಿವ್ ಬಂದಿತ್ತು.
ಆದ್ರೆ, ಟಾಸ್ ಸಮಯದಲ್ಲಿ ಮಾತನಾಡಿದ ಕ್ಯಾಪ್ಟನ್ ಬವುಮಾ, 'ಏಡೆನ್ ಗೆ ಕೋವಿಡ್ -19 ಪಾಸಿಟಿವ್ ಬಂದಿರುವುದರಿಂದ ಅವರು ಈ ಮ್ಯಾಚ್ ನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ಪಂತ್
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಹಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇವರಲ್ಲಿ ನಿಯಮಿತ ನಾಯಕ ರೋಹಿತ್ ಶರ್ಮಾ, ಸೂಪರ್ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸೇರಿದ್ದಾರೆ. ಕೆಎಲ್ ರಾಹುಲ್ ಗಾಯಗೊಂಡಿರುವ ಕಾರಣ ಭಾರತ ತಂಡದ ಕಮಾಂಡ್ ರಿಷಬ್ ಪಂತ್ ಕೈಯಲ್ಲಿದೆ. ತವರಿನಲ್ಲಿ ಆಫ್ರಿಕಾ ತಂಡದ ವಿರುದ್ಧ ಇಲ್ಲಿಯವರೆಗೂ ಟೀಂ ಇಂಡಿಯಾ ಸರಣಿ ಗೆದ್ದಿಲ್ಲ.
ಇದನ್ನೂ ಓದಿ : Ind vs SA : ಟಿ20 ಸರಣಿಯಲ್ಲಿ ಅನುಭವಿಗಳ ಭವಿಷ್ಯ : ಆಫ್ರಿಕನ್ ಗಳಿಗೆ ಮಾರಕವಾಗಲಿದ್ದಾರೆ ಈ ಆಟಗಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ