India vs England, 4th Test: ಬಷೀರ್, ಹಾರ್ಟ್ಲಿ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ 

ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 219 ರನ್ ಗಳಿಗೆ ಏಳು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Written by - Zee Kannada News Desk | Last Updated : Feb 24, 2024, 06:43 PM IST
  • ಟೀಮ್ ಇಂಡಿಯಾದ ಪರವಾಗಿ ಜೈಸ್ವಾಲ್ ಅವರು 73 ಹಾಗೂ ಶುಭ್ಮನ್ ಗಿಲ್ 38 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು.
  • ಸದ್ಯ ಟೀಮ್ ಇಂಡಿಯಾ ಏಳು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ.
  • ಕ್ರಿಸ್ ನಲ್ಲಿ ಧ್ರುವ್ ಜುರೆಲ್ 30 ಹಾಗೂ ಕುಲದೀಪ್ ಯಾದವ್ 17 ರನ್ ಗಳಿಸಿ ಆಟವಾಡುತ್ತಿದ್ದಾರೆ.
India vs England, 4th Test: ಬಷೀರ್, ಹಾರ್ಟ್ಲಿ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ  title=

ರಾಂಚಿ: ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 219 ರನ್ ಗಳಿಗೆ ಏಳು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ನಿನ್ನೆ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ಪಡೆ 353 ರನ್ ಗಳಿಗೆ ಆಲೌಟ್ ಆಯಿತು.ಇಂಗ್ಲೆಂಡ್ ತಂಡದ ಪರವಾಗಿ ರೂಟ್ ಅಜೇಯ 122 ರನ್ ಗಳಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.ಭಾರತದ ಪರವಾಗಿ ರವಿಂದ್ರ ಜಡೇಜಾ ನಾಲ್ಕು ಹಾಗೂ ಆಕಾಶ್ ದೀಪ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಇದನ್ನೂ ಓದಿ: ಲೋಕ ಲೆಕ್ಕಾಚಾರ: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಸ್ಥಿತಿಗತಿ?

ಈ ಹಂತದಲ್ಲಿ ಮೊದಲ ಇನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ತಂಡದ ಮೊತ್ತ ನಾಲ್ಕು ರನ್ ಗಲಾಗುವಷ್ಟರಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರು 82 ರನ್ ಗಳ ಜೊತೆಯಾಟವನ್ನು ಆಡುವ ಮೂಲಕ ಸುಸ್ಥಿತಿಗೆ ತಂದಿದ್ದರು. ಇದೇವೇಳೆ ಟೀಮ್ ಇಂಡಿಯಾ ಗೆ ಮಾರಕವಾಗಿ ಪರಿಣಮಿಸಿದ ಬಷೀರ್ ನಾಲ್ಕು ಹಾಗೂ ಹಾರ್ಟ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾವನ್ನು ನಿಯಂತ್ರಕ್ಕೆ ತಂದರು.

ಟೀಮ್ ಇಂಡಿಯಾದ ಪರವಾಗಿ ಜೈಸ್ವಾಲ್ ಅವರು 73 ಹಾಗೂ ಶುಭ್ಮನ್ ಗಿಲ್ 38 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು. ಸದ್ಯ ಟೀಮ್ ಇಂಡಿಯಾ ಏಳು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ.ಕ್ರಿಸ್ ನಲ್ಲಿ ಧ್ರುವ್ ಜುರೆಲ್ 30 ಹಾಗೂ ಕುಲದೀಪ್ ಯಾದವ್ 17 ರನ್ ಗಳಿಸಿ ಆಟವಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News