India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ

ವಾಷಿಂಗ್ಟನ್ ಸುಂದರ್ ಈಗ ಬೆರಳಿನ ಗಾಯದಿಂದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಮೂಲಕ ಗಾಯಗೊಂಡಿರುವ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.

Written by - Zee Kannada News Desk | Last Updated : Jul 22, 2021, 08:06 PM IST
  • ವಾಷಿಂಗ್ಟನ್ ಸುಂದರ್ ಈಗ ಬೆರಳಿನ ಗಾಯದಿಂದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಮೂಲಕ ಗಾಯಗೊಂಡಿರುವ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.
  • ಓಪನರ್ ಶುಬ್ಮನ್ ಗಿಲ್ ಮೊಣಕಾಲಿನ ಗಾಯದಿಂದ ಮಂಗಳವಾರ (ಜುಲೈ 20) ಭಾರತಕ್ಕೆ ವಾಪಸ್ಸಾಗಿದ್ದಾರೆ.
 India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ title=
Photo Courtesy: Twitter

ನವದೆಹಲಿ: ವಾಷಿಂಗ್ಟನ್ ಸುಂದರ್ ಈಗ ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಮೂಲಕ ಗಾಯಗೊಂಡಿರುವ ಆಟಗಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.

ಇನ್ನೊಂದೆಡೆಗೆ ಡರ್ಹಾಮ್ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಅವೇಶ್ ಖಾನ್ ಕೂಡ ಗಾಯಗೊಂಡಿದ್ದಾರೆ.ಶುಬ್ ಮನ್ ಗಿಲ್ ಕೂಡ ಗಾಯಗೊಂಡು ಈಗಾಗಲೇ ಸರಣಿಯಿಂದ ಹೊರಕ್ಕೆ ಬಿದ್ದಿದ್ದಾರೆ.ಈಗ ಹೊಸದಾಗಿ ವಾಷಿಂಗ್ಟನ್ ಸುಂದರ್ (Washington Sundar) ಸೇರ್ಪಡೆಯಾಗುವ ಮೂಲಕ ಗಾಯಗೊಂಡಿರುವ ಆಟಗಾರರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ: 'ವಾಷಿಂಗ್ಟನ್ ಸುಂದರ್ ಲೆಜೆಂಡ್ ಆಗುತ್ತಾನೆ'

ಈ ಕುರಿತಾಗಿ ಸುದ್ದಿ ಸಂಸ್ಥೆ ಎಎನ್‌ಐಯೊಂದಿಗೆ ಮಾತನಾಡಿರುವ ಮೂಲಗಳು 'ಸುಂದರ್ ಅವರು ಗಾಯಗೊಂಡಿರುವುದನ್ನು ಧೃಡಪಡಿಸಿವೆ ಮತ್ತು ಅವರು ಟೆಸ್ಟ್ ಸರಣಿಯ ಭಾಗವಾಗುವುದಿಲ್ಲ ಎಂದು ಹೇಳಿವೆ."ಸುಂದರ್ ಅವರ ಬೆರಳಿಗೆ ನೋವಾಗಿದೆ ಮತ್ತು ಶೇಕಡಾ 100 ರಷ್ಟು ಸರಿಹೊಂದಲು ಆರು ವಾರಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ.ಆದ್ದರಿಂದ ಅವರು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ" ಎಂದು ಮೂಲಗಳು ತಿಳಿಸಿವೆ.

ಇನ್ನೂ ಅವೇಶ್ ಅವರ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿ "ವೇಗದ ಬೌಲರ್ ಅವೇಶ್ ಖಾನ್ ಬಿಸಿಸಿಐ ವೈದ್ಯಕೀಯ ತಂಡದ ವೀಕ್ಷಣೆಯಲ್ಲಿದ್ದಾರೆ.ಅಭ್ಯಾಸ ಪಂದ್ಯದ 2 ನೇ ದಿನ ಮತ್ತು 3 ನೇ ದಿನದಂದು ಅವರು ಮುಂದೆ ಭಾಗವಹಿಸುವುದಿಲ್ಲ”ಎಂದು ತಿಳಿಸಿದೆ.

ಇದನ್ನೂ ಓದಿ: ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್

ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕೂಡ ಶೇಕಡಾ 100 ರಷ್ಟು ಫಿಟ್ ಆಗಿಲ್ಲ ಎನ್ನಲಾಗಿದೆ.ಸೋಮವಾರ ಸಂಜೆ ತಡವಾಗಿ ಕೊಹ್ಲಿಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಂಡ ನಂತರ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ, ಉಪನಾಯಕ ರಹಾನೆ ಅವರ ಎಡ ಮೇಲ್ಭಾಗದ ಮಂಡಿರಜ್ಜು ಸುತ್ತಲೂ ಸೌಮ್ಯವಾದ ಊತ ಇದ್ದು, ಇದನ್ನು ಚುಚ್ಚುಮದ್ದಿನಿಂದ ಪರಿಹರಿಸಲಾಗಿದೆ.

ಇದನ್ನೂ ಓದಿ : YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News