ವ್ಯರ್ಥವಾದ ರೋಹಿತ್ ಶತಕ, ಭಾರತಕ್ಕೆ 34 ರನ್ ಗಳ ಸೋಲು

ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 34 ರನ್ ಗಳ ಸೋಲನ್ನು ಅನುಭವಿಸಿದೆ.  

Last Updated : Jan 12, 2019, 04:51 PM IST
ವ್ಯರ್ಥವಾದ ರೋಹಿತ್ ಶತಕ, ಭಾರತಕ್ಕೆ 34 ರನ್ ಗಳ ಸೋಲು  title=

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 34 ರನ್ ಗಳ ಸೋಲನ್ನು ಅನುಭವಿಸಿದೆ.  

ಆಸ್ಟ್ರೇಲಿಯಾ ತಂಡವು ನೀಡಿದ 289 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡವು 4 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ನಂತರ ರೋಹಿತ್ ಶರ್ಮಾ ಮತ್ತು ಧೋನಿಯ ಶತಕದಾಟ ತಂಡವನ್ನು ಸುಸ್ಥಿತಿಗೆ ತಂದಿತ್ತು, ಆದರೆ ಮಹೇಂದ್ರ ಸಿಂಗ್ ಧೋನಿ ಅರ್ಧ ಶತಕವನ್ನು ಗಳಿಸಿ ಔಟಾದರು.ಇದಾದ ಬೆನ್ನಲ್ಲಿ ದಿನೇಶ್ ಕಾರ್ತಿಕ ಮತ್ತು ರವಿಂದ್ರ ಜಡೇಜಾ ಕೂಡ ಪರಿಣಾಮಕಾರಿಯಾಗಲಿಲ್ಲ.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಹಿತ ಸರಾಗವಾಗಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ 129 ಎಸೆತಗಳಲ್ಲಿ ಶತಕವನ್ನು (133)ಗಳಿಸಿದರು ಇದರಲ್ಲಿ ಆರು ಸಿಕ್ಸರ್ ಮತ್ತು ಹತ್ತು ಬೌಂಡರಿಗಳ ಮೂಲಕ ಉತ್ತಮ ಪ್ರದರ್ಶನ ನೀಡಿದರು.ಗೆಲುವಿನ ಆಸೆ ಚಿಗುರೊಡೆದಿದ್ದ ಸಂದರ್ಭದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸುವುದರ ಮೂಲಕ ಭಾರತ ದ ಗೆಲುವಿನ ಕನಸು ನುಚ್ಚು ನೂರಾಯಿತು. 

ಆ ಮೂಲಕ ಭಾರತ ಮೊದಲ ಏಕದಿನ ಪಂದ್ಯದಲ್ಲಿ 34 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು,ಆಸಿಸ್ ಪರ ಜೆ.ರಿಚರ್ಡ್ಸನ್ ಮೂರು ಹಾಗೂ ಮಾರ್ಕಸ್ ಸ್ಟೋನಿಸ್ ಅವರು ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
  

Trending News