ಬುಮ್ರಾ, ಶಮಿಗಿಂತಲೂ ಅಪಾಯಕಾರಿ ಬೌಲರ್ ಟೀಂ ಇಂಡಿಯಾಗೆ ಎಂಟ್ರಿ ! ಬಡತನದಲ್ಲೇ ಬೆಳೆದು ಬಂದ ಪ್ರತಿಭೆ

IND vs WI 2nd Test:ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗಿಂತ ಅಪಾಯಕಾರಿ ವೇಗದ ಬೌಲರ್ ನ ಎಂಟ್ರಿ ಟೀಂ ಇಂಡಿಯಾದಲ್ಲಾಗಿದೆ. ಭಾರತದ ಈ ವೇಗದ ಬೌಲರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್  ಪಾಲಿಗೆ ಸಿಂಹ ಸ್ವಪ್ನವಾಗಲಿದ್ದಾರೆ. 

Written by - Ranjitha R K | Last Updated : Jul 21, 2023, 12:12 PM IST
  • ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್ ಎಂಟ್ರಿ
  • ಬಡತನದಲ್ಲಿ ಅರಳಿದ ಪ್ರತಿಭೆ
  • ಬಿಹಾರದೊಂದಿಗೆ ಆಳವಾದ ಸಂಬಂಧ
ಬುಮ್ರಾ, ಶಮಿಗಿಂತಲೂ ಅಪಾಯಕಾರಿ ಬೌಲರ್ ಟೀಂ ಇಂಡಿಯಾಗೆ ಎಂಟ್ರಿ ! ಬಡತನದಲ್ಲೇ ಬೆಳೆದು ಬಂದ ಪ್ರತಿಭೆ   title=

IND vs WI 2nd Test : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗಿಂತ ಅಪಾಯಕಾರಿ ವೇಗದ ಬೌಲರ್ ನ ಎಂಟ್ರಿ ಟೀಂ ಇಂಡಿಯಾದಲ್ಲಾಗಿದೆ. ಭಾರತದ ಈ ವೇಗದ ಬೌಲರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್  ಪಾಲಿಗೆ ಸಿಂಹ ಸ್ವಪ್ನವಾಗಲಿದ್ದಾರೆ. 

ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್  ಎಂಟ್ರಿ : 
ಟೀಮ್ ಇಂಡಿಯಾ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗಿಂತಲೂ  ವೇಗದ ಬೌಲರ್ ಅನ್ನು ಪಡೆದುಕೊಂಡಿದೆ. ಕೈ ತಪ್ಪುವ ಆಟವನ್ನು ಕೂಡಾ ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಈ ಆಟಗಾರ.ಆ ಆಟಗಾರ ಬೇರೆ ಯಾರೂ ಅಲ್ಲ,  ಐಪಿಎಲ್ ಋತುವಿನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿರುವ ಮುಖೇಶ್ ಕುಮಾರ್. ಹೌದು , ಐಪಿಎಲ್ ನಲ್ಲಿ  ದೆಹಲಿ ಕ್ಯಾಪಿಟಲ್ಸ್ ಪರ ಆಡಿರುವ ಮುಖೇಶ್ ಕುಮಾರ್, ಅದ್ಭುತ ಪ್ರದರ್ಶನ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ  ಇವರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ.  

ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ! ರಿಕಿ ಪಾಂಟಿಂಗ್ ನ ಈ ಬೃಹತ್ ದಾಖಲೆ ಮುರಿದ ರೋಹಿತ್ ಶರ್ಮಾ

ಬಡತನದಲ್ಲಿ ಅರಳಿದ ಪ್ರತಿಭೆ : 
ಮುಖೇಶ್ ಕುಮಾರ್ ಅವರು ಬಂಗಾಳದ ಪರ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 21.55 ರ ಅತ್ಯುತ್ತಮ ಬೌಲಿಂಗ್ ಸರಾಸರಿಯಲ್ಲಿ 149 ವಿಕೆಟ್ ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಮುಖೇಶ್ ಕುಮಾರ್ 6 ಇನ್ನಿಂಗ್ಸ್ ಗಳಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 8 ಇನ್ನಿಂಗ್ಸ್‌ಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಮುಕೇಶ್ ಕುಮಾರ್ ಮೊದಲು ಗೋಪಾಲಗಂಜ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದರು.  ಅವರು ಬಿಹಾರ ಪರ ಅಂಡರ್ 19 ಕ್ರಿಕೆಟ್ ಆಡಿದ್ದರು. ಇದಾದ ಬಳಿಕ ತಂದೆ ಉದ್ಯೋಗ ನಿಮಿತ್ತ ಕೋಲ್ಕತ್ತಾಗೆ ಕರೆಸಿದ್ದರು. ಮುಖೇಶ್ ತಂದೆ ಕೋಲ್ಕತ್ತಾದಲ್ಲಿ ಆಟೋ ಓಡಿಸುತ್ತಿದ್ದರು. ಮುಖೇಶ್ ಕುಮಾರ್ ಅವರು CRPF (ಕೇಂದ್ರ ಮೀಸಲು ಪೊಲೀಸ್ ಪಡೆ) ಪ್ರವೇಶಕ್ಕಾಗಿ ಶ್ರಮಿಸುತ್ತಿದ್ದರು. ಆದರೆ ಮೂರು ಬಾರಿ ವೈದ್ಯಕೀಯ ಪರೀಕ್ಷೆಯಲ್ಲಿ ವಿಫಲರಾದರು. ಇದಾದ ಬಳಿಕ ಕೋಲ್ಕತ್ತಾ ತಲುಪಿ ಕ್ರಿಕೆಟ್ ಆಡಲು ಆರಂಭಿಸಿದರು.

ಬಿಹಾರದೊಂದಿಗೆ ಆಳವಾದ ಸಂಬಂಧ : 
ಮುಖೇಶ್ ಕುಮಾರ್ ಬಲಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್‌ಮನ್. ಬಿಹಾರದ ಸಾಮಾನ್ಯ ಕುಟುಂಬಕ್ಕೆ ಸೇರಿದ ಮುಖೇಶ್ ಕುಮಾರ್ ಅವರನ್ನು ಐಪಿಎಲ್ 2023 ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್ 5.50 ಕೋಟಿ ರೂ.ಗೆ ಖರೀದಿಸಿತು. ಅವರ ಮೂಲ ಬೆಲೆ ಕೇವಲ 20 ಲಕ್ಷ ರೂಪಾಯಿಗಳಾಗಿದ್ದರೂ, ಮೂಲ ಬೆಲೆಗಿಂತ ಸುಮಾರು 28 ಪಟ್ಟು ಹೆಚ್ಚು  ನೀಡಿ  ದೆಹಲಿ ಕ್ಯಾಪಿಟಲ್ಸ್ ಮುಖೇಶ್ ಅವರನ್ನು ಖರೀದಿಸಿತ್ತು. 

ಇದನ್ನೂ ಓದಿ : ICC World Cup 2023: ಐಸಿಸಿ ವಿಶ್ವಕಪ್ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News