IND vs AFG: ಮೊದಲ ಟಿ20 ಪಂದ್ಯ ಗೆದ್ದ ಭಾರತ… ಈ ಆಟಗಾರನ ಎಂಟ್ರಿಯಿಂದಲೇ ಗೆಲುವು ಕಂಡ ಟೀಂ ಇಂಡಿಯಾ!

IND vs AFG T20 Highlights: ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಯುವ ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಜಿತೇಶ್ ಸಂಪೂರ್ಣವಾಗಿ ಬಳಸಿಕೊಂಡು, ಕ್ರಮಾಂಕ 5ರಲ್ಲಿ ಕಣಕ್ಕಿಳಿದ ಅವರು 20 ಎಸೆತಗಳಲ್ಲಿ 31 ರನ್ ಸೇರಿಸಿದರು.

Written by - Bhavishya Shetty | Last Updated : Jan 11, 2024, 11:21 PM IST
    • ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು
    • 40 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದ ಶಿವಂ ದುಬೆ
    • ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿತ್ತು
IND vs AFG: ಮೊದಲ ಟಿ20 ಪಂದ್ಯ ಗೆದ್ದ ಭಾರತ… ಈ ಆಟಗಾರನ ಎಂಟ್ರಿಯಿಂದಲೇ ಗೆಲುವು ಕಂಡ ಟೀಂ ಇಂಡಿಯಾ! title=
India vs Afghanistan

IND vs AFG T20 Highlights: ಮೊಹಾಲಿಯಲ್ಲಿ ಗುರುವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಭಾರತಕ್ಕೆ ಅಫ್ಘಾನಿಸ್ತಾನ ನೀಡಿದ್ದ 159 ರನ್‌’ಗಳ ಗುರಿಯನ್ನು ಆತಿಥೇಯರು 17.3 ಓವರ್‌’ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಾಧಿಸಿದರು. ಶಿವಂ ದುಬೆ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌’ಗಳ ನೆರವಿನಿಂದ ಅಜೇಯ 60 ರನ್ ಗಳಿಸಿದರು. ರಿಂಕು ಸಿಂಗ್ ಕೂಡ 9 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಗಳಿಸಿ ಅಜೇಯ ಇನಿಂಗ್ಸ್ ಆಡಿದರು.

ಇದನ್ನೂ ಓದಿ: ಶುಭ್ಮನ್ ಮಾಡಿದ ತಪ್ಪಿಗೆ ಮೊದಲ ಎಸೆತದಲ್ಲೇ ರೋಹಿತ್ ಔಟ್! ಲೈವ್’ನಲ್ಲೇ ಬಾಯಿಗೆ ಬಂದಂತೆ ಬೈದ ನಾಯಕ

ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಯುವ ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಜಿತೇಶ್ ಸಂಪೂರ್ಣವಾಗಿ ಬಳಸಿಕೊಂಡು, ಕ್ರಮಾಂಕ 5ರಲ್ಲಿ ಕಣಕ್ಕಿಳಿದ ಅವರು 20 ಎಸೆತಗಳಲ್ಲಿ 31 ರನ್ ಸೇರಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇನ್ನು ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಬೌಲಿಂಗ್ ಮಾಡಿದರು. ಅರ್ಷದೀಪ್, ಮುಖೇಶ್ ಮತ್ತು ಅಕ್ಷರ್ ತಲಾ 4 ಓವರ್ ಬೌಲ್ ಮಾಡಿದರೆ, ಸುಂದರ್ ಮತ್ತು ಬಿಷ್ಣೋಯ್ ತಲಾ 3 ಓವರ್ ಬೌಲ್ ಮಾಡಿದರು. ಇನ್ನು ಶಿವಂ ದುಬೆ 2 ಓವರ್ ಬೌಲ್ ಮಾಡಿ 9 ರನ್ ನೀಡಿ 1 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 23 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿಯಾದರೆ, ಮುಖೇಶ್ ಕೂಡ 2 ವಿಕೆಟ್ ಪಡೆದರು. ಅಂದಹಾಗೆ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಕಾರಣದಿಂದ ಟೀಂ ಇಂಡಿಯಾಗೆ ಜಯ ಲಭಿಸಿದೆ

ಇದನ್ನೂ ಓದಿ: ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು?

ಇನ್ನು ಅಫ್ಘಾನಿಸ್ತಾನದ ಅನುಭವಿ ಆಲ್‌’ರೌಂಡರ್ ಮೊಹಮ್ಮದ್ ನಬಿ ಬ್ಯಾಟಿಂಗ್ ಮೂಲಕ ಉತ್ತಮ ಕೊಡುಗೆ ನೀಡಿದರು. 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌’ಗಳ ನೆರವಿನಿಂದ 42 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, 3 ನೇ ಕ್ರಮಾಂಕದಲ್ಲಿ ಬಂದ ಅಜ್ಮತುಲ್ಲಾ ಉಮರ್ಜಾಯ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 29 ರನ್ ಸೇರಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ 23 ರನ್ ಮತ್ತು ನಾಯಕ ಇಬ್ರಾಹಿಂ ಜದ್ರಾನ್ 25 ರನ್ ಕೊಡುಗೆ ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News