IND vs ENG: ಧ್ರುವ್-ಶುಭ್ಮನ್ ಆಟಕ್ಕೆ ಮಂಡಿಯೂರಿದ ಇಂಗ್ಲೆಂಡ್: 4ನೇ ಟೆಸ್ಟ್’ನಲ್ಲೂ ಟೀಂ ಇಂಡಿಯಾಗೆ ಭರ್ಜರಿ ಜಯ- ಸರಣಿ ಕೈವಶ

India vs England 4th Test Day 4: ಎರಡನೇ ಇನ್ನಿಂಗ್ಸ್‌’ನಲ್ಲಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 55 ರನ್, ಶುಭ್ಮನ್ ಗಿಲ್ ಔಟಾಗದೆ 52 ರನ್ ಹಾಗೂ ಧ್ರುವ್ ಜುರೆಲ್ 39 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.

Written by - Bhavishya Shetty | Last Updated : Feb 26, 2024, 02:16 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ
    • ಟೀಂ ಇಂಡಿಯಾ 5 ವಿಕೆಟ್‌’ಗಳಿಂದ ಗೆದ್ದು, ಸರಣಿ ಕೈವಶ ಮಾಡಿಕೊಂಡಿದೆ.
    • ಭಾರತ ತಂಡದ ಸ್ಪಿನ್ನರ್‌’ಗಳು ಇಂಗ್ಲೆಂಡ್‌’ನ ಬ್ಯಾಟ್ಸ್‌ಮನ್‌’ಗಳ ಮೇಲೆ ಪ್ರಾಬಲ್ಯ ಮೆರೆದರು
IND vs ENG: ಧ್ರುವ್-ಶುಭ್ಮನ್ ಆಟಕ್ಕೆ ಮಂಡಿಯೂರಿದ ಇಂಗ್ಲೆಂಡ್: 4ನೇ ಟೆಸ್ಟ್’ನಲ್ಲೂ ಟೀಂ ಇಂಡಿಯಾಗೆ ಭರ್ಜರಿ ಜಯ- ಸರಣಿ ಕೈವಶ  title=
India vs England Test Series

India vs England 4th Test Day 4: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯಲ್ಲಿ ನಡೆದಿದೆ. ಈ ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್‌’ಗಳಿಂದ ಗೆದ್ದು, ಸರಣಿ ಕೈವಶ ಮಾಡಿಕೊಂಡಿದೆ. ಅಂದಹಾಗೆ ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿನ ಹೀರೋಗಳಾಗಿ ಮಿಂಚಿದ್ದು ಆರ್ ಅಶ್ವಿನ್, ಧ್ರುವ್ ಜುರೆಲ್ ಮತ್ತು ಶುಭ್ಮನ್ ಗಿಲ್.

ಇದನ್ನೂ ಓದಿ: Hair Care: ಉದ್ದ ಮತ್ತು ದಪ್ಪ ಕೂದಲು ನಿಮ್ಮದಾಗಬೇಕಾ? ಹಾಗಿದ್ರೆ ಈ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿ! 

ಎರಡನೇ ಇನ್ನಿಂಗ್ಸ್‌’ನಲ್ಲಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 55 ರನ್, ಶುಭ್ಮನ್ ಗಿಲ್ ಔಟಾಗದೆ 52 ರನ್ ಹಾಗೂ ಧ್ರುವ್ ಜುರೆಲ್ 39 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.

ರಾಂಚಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಬಳಿಕ ಇಂಗ್ಲೆಂಡ್ ತಂಡ ಪಂದ್ಯ ಗೆಲ್ಲಬಹುದು ಎಂದನಿಸಿತ್ತು. ಆದರೆ ಮೂರನೇ ದಿನ ಭಾರತ ತಂಡ ಭರ್ಜರಿ ಕಮ್ ಬ್ಯಾಕ್ ಮಾಡಿ, ಆಂಗ್ಲರ ಬಗ್ಗುಬಡಿದಿದ್ದು ಸುಳ್ಳಲ್ಲ  ಮೂರನೇ ದಿನ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌’ನಲ್ಲಿ ಕೇವಲ 145 ರನ್‌’ಗಳಿಗೆ ಆಲೌಟ್ ಆಗಿತ್ತು. ಜ್ಯಾಕ್ ಕ್ರಾಲಿ ಎರಡನೇ ಇನ್ನಿಂಗ್ಸ್‌’ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ 60 ರನ್ ಗಳಿಸಿದರೆ, ಜಾನಿ ಬೈರ್‌ಸ್ಟೋ 30 ರನ್ ಗಳಿಸಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮನ್ನೂ ರಾಹುಲ್ ಗಾಂಧಿಯಂತೆ ತಿಳಿದುಕೊಳ್ಳಬೇಕಾಗುತ್ತದೆ: ಪ್ರಹ್ಲಾದ್ ಜೋಶಿ

ಎರಡನೇ ಇನ್ನಿಂಗ್ಸ್‌’ನಲ್ಲಿ ಭಾರತ ತಂಡದ ಸ್ಪಿನ್ನರ್‌’ಗಳು ಇಂಗ್ಲೆಂಡ್‌’ನ ಬ್ಯಾಟ್ಸ್‌ಮನ್‌’ಗಳ ಮೇಲೆ ಪ್ರಾಬಲ್ಯ ಮೆರೆದರು. ಇಡೀ ಇಂಗ್ಲೆಂಡ್ ತಂಡ ಭಾರತದ ಸ್ಪಿನ್ ಬೌಲರ್’ಗಳ ದಾಳಿಗೆ ತತ್ತರಿಸಿದ್ದು, ಆರ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿದರು. ಅಶ್ವಿನ್ 5 ವಿಕೆಟ್ ಕಿತ್ತರೆ, ಕುಲದೀಪ್ ಯಾದವ್ 4 ವಿಕೆಟ್ ಪಡೆದರು. ಇದಲ್ಲದೆ ರವೀಂದ್ರ ಜಡೇಜಾ ಕೂಡ ಒಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News