ನವದೆಹಲಿ: ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮೊದಲು ಕೇವಲ ಕೋಚ್ ಆಗಿರುವುದಲ್ಲದೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮೈದಾನದಲ್ಲಿ ಅವರು ಬಲಗೈ ಬ್ಯಾಟ್ಸ್ಮನ್ ಗಳಿಗೆ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿತು.ಅವರು ಸರಣಿಗೆ ಸಿದ್ಧರಾಗಲು ಬ್ಯಾಟ್ಸ್ಮನ್ ಗಳಿಗೆ ಸಹಾಯ ಮಾಡಲು ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು.
ಇದನ್ನೂ ಓದಿ: Vedio : ಬಟ್ಟೆ ಒಣಗಿಸಲು ಬಾಲ್ಕನಿಗೆ ಬಂದು 19ನೇ ಮಹಡಿಯಿಂದ ಜಾರಿ ಬಿದ್ದ ವೃದ್ದೆ ಮುಂದೆ...?
ಭಾರತದ ಮುಖ್ಯ ಕೋಚ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಳವಾಗಿ ಬಾಲ್ ಮಾಡುತ್ತಿದ್ದರು.ಹಾಗೆಂದ ಮಾತ್ರಕ್ಕೆ ಅವರಿಗೆ ಬೌಲಿಂಗ್ ಮಾಡಲು ಬರುವುದಿಲ್ಲವೆಂದರ್ಥವಲ್ಲ, ಆದರೆ ಆಗ ಅವರ ಸಹಾಯದ ಅಗತ್ಯವಿರಲಿಲ್ಲ ಆದಾಗ್ಯೂ, ದ್ರಾವಿಡ್ ಈ ಹಿಂದೆ ಭಾರತಕ್ಕೆ ಅನೇಕ ಬಾರಿ ಬೌಲಿಂಗ್ ಮಾಡಿದ್ದಾರೆ.
𝗦𝗼𝗺𝗲 𝗿𝗶𝗴𝗵𝘁-𝗮𝗿𝗺 𝗼𝗳𝗳-𝘀𝗽𝗶𝗻 𝗮𝗻𝘆𝗼𝗻𝗲? 🤔
🎥 That moment when #TeamIndia Head Coach Rahul Dravid rolled his arm over in the nets. 👍 👍#INDvNZ @Paytm pic.twitter.com/97YzcKJBq3
— BCCI (@BCCI) November 24, 2021
ಇದನ್ನೂ ಓದಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ : ಕೃಷಿ ಕಾನೂನು ಹಿಂಪಡೆಯಲು ಸಂಪುಟ ಅನುಮೋದನೆ!
ಬುಧವಾರದಂದು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರು ಬೌಲಿಂಗ್ ಮಾಡಲು ನಿರತರಾದರು, ಈ ಸಂದರ್ಭದಲ್ಲಿ ಆರ್.ಆಶ್ವಿನ್ ಅವರು ಕೂಡ ದ್ರಾವಿಡ್ ರಿಂದ ಪ್ರಭಾವಿತರಾಗಿದ್ದರು.ಮುಂಬರುವ ಟೆಸ್ಟ್ ನಲ್ಲಿ ಅವರು ಆರ್ ಆಶ್ವಿನ್ ಅವರಿಗೆ ಖಂಡಿತವಾಗಿ ಅವರು ಕೆಲವು ಸಲಹೆಗಳನ್ನು ನೀಡಬಲ್ಲರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.