IND vs NZ: ಮುಂದಿನ ಪಂದ್ಯದಿಂದ ಡ್ರಾಪ್ ಅಗಲಿದ್ದಾರೆ Ajinkya Rahane, ಈ ಆಟಗಾರ ಆಗಲಿದ್ದಾರೆ ಉಪ ನಾಯಕ

IND vs NZ: ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಪ್ರತಿ ಪಂದ್ಯದಂತೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಇದೀಗ ಮುಂದಿನ ಟೆಸ್ಟ್‌ನಿಂದ ಈ ಬ್ಯಾಟ್ಸ್‌ಮನ್ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.   

Written by - Ranjitha R K | Last Updated : Nov 28, 2021, 01:28 PM IST
  • ರಹಾನೆ ಕೈಬಿಡುವುದು ಬಹುತೇಕ ಖಚಿತ
  • ಈ ಆಟಗಾರ ಆಗಲಿದ್ದಾರೆ ತಂಡದ ಹೊಸ ಉಪನಾಯಕ
  • ನಾಯಕತ್ವದ ಅನುಭವ ಈ ಆಟಗಾರನಿಗೆ ಇದೆ
IND vs NZ: ಮುಂದಿನ ಪಂದ್ಯದಿಂದ ಡ್ರಾಪ್ ಅಗಲಿದ್ದಾರೆ Ajinkya Rahane, ಈ ಆಟಗಾರ ಆಗಲಿದ್ದಾರೆ ಉಪ ನಾಯಕ  title=
ರಹಾನೆ ಕೈಬಿಡುವುದು ಬಹುತೇಕ ಖಚಿತ (file photo)

ನವದೆಹಲಿ : ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡದ ಸ್ಥಿತಿ ಕೊಂಚ ಹದಗೆಟ್ಟಿದೆ. ಒಂದು ಸಮಯದಲ್ಲಿ ಭಾರತ ಈ ಪಂದ್ಯವನ್ನು ಆರಾಮವಾಗಿ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ನಾಲ್ಕನೇ ದಿನ, ಕಿವೀಸ್ ಬೌಲರ್‌ಗಳು ಭಾರತದ ಎರಡನೇ ಇನ್ನಿಂಗ್ಸ್‌ನ 5 ವಿಕೆಟ್‌ಗಳನ್ನು ಕೇವಲ 50 ರನ್‌ಗಳಿಗೆ ಉರುಳಿಸಿದರು. ಎಲ್ಲಾ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಈ ಬ್ಯಾಟ್ಸ್‌ಮನ್‌ಗಳಲ್ಲಿ ತಂಡದ ಉಪನಾಯಕ ಅಜಿಂಕ್ಯ ರಹಾನೆ (Ajinkya Rahane)  ಕೂಡಾ ಒಬ್ಬರು. ಈ ಪಂದ್ಯದ ಬಳಿಕ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇನ್ನಷ್ಟು ಹೆಚ್ಚಿದೆ. 

ಅಜಿಂಕ್ಯ ರಹಾನೆ ಡ್ರಾಪ್!
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಬದಲಿಗೆ ನಾಯಕರಾಗಿದ್ದ ಅಜಿಂಕ್ಯ ರಹಾನೆ, ಅತ್ಯುತ್ತಮ ಆಟ ಪ್ರದರ್ಶಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.  ಆದರೆ ಈ ಅನುಭವಿ ಬ್ಯಾಟ್ಸ್‌ಮನ್ ಮತ್ತೊಮ್ಮೆ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 35 ರನ್ ಗಳಿಸಿದ್ದ ರಹಾನೆ  (Ajinkya Rahane), ಈ ಇನ್ನಿಂಗ್ಸ್‌ನಲ್ಲಿ ಕೇವಲ 15 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಮುಂದಿನ ಪಂದ್ಯದಲ್ಲಿ ಕೊಹ್ಲಿ ವಾಪಸಾಗುತ್ತಿದ್ದು, ಈ ದಿಗ್ಗಜ ಬ್ಯಾಟ್ಸ್‌ಮನ್‌ನ ಡ್ರಾಪ್ ಬಹುತೇಕ ಖಚಿತವಾಗಿದೆ. 

ಇದನ್ನೂ ಓದಿ : IPL 2022 : ಉತ್ತಮ ಪ್ರದರ್ಶನ ನೀಡಿದರೂ ಈ ಆಟಗಾರರನ್ನು ಉಳಿಸಿಕೊಳ್ಳದ ಫ್ರಾಂಚೈಸಿಗಳು

ಯಾರಿಗೆ ಸಿಗಲಿದೆ ಅವಕಾಶ ? :
ಆಯ್ಕೆದಾರರು ರಹಾನೆಗೆ ಪ್ರತಿಯೊಂದು ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ನೀಡುತ್ತಿದ್ದಾರೆ.  ODI ಮತ್ತು T20 ಗಳಲ್ಲಿ ಅವರನ್ನು ಕಡೆಗಣಿಸಲಾಗುತ್ತದೆ. ಆದರೆ ಇದೀಗ ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇದನ್ನು ನೋಡಿದರೆ ರಹಾನೆ ವೃತ್ತಿಜೀವನ ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ. ಅಜಿಂಕ್ಯ ರಹಾನೆ ಪ್ರಸ್ತುತ ತಮ್ಮ ವೃತ್ತಿಜೀವನದ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಶತಕ ಸಿಡಿಸಿದ್ದ ರಹಾನೆ, ನಂತರ ಆಡಲೇ ಇಲ್ಲ. ಮುಂದಿನ ದಿನಗಳಲ್ಲಿ ರಹಾನೆ ಬದಲಿಗೆ ಸೂರ್ಯಕುಮಾರ್ ಯಾದವ್ (Surya Kumar Yadav) ಅಥವಾ ಹನುಮ ವಿಹಾರಿಗೆ ಅವಕಾಶ ಸಿಗಬಹುದು. ಈ ಇಬ್ಬರೂ ಆಟಗಾರರು ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು. ಅಥವಾ ಶ್ರೇಯಸ್ ಅಯ್ಯರ್ (Shreyas Iyer) ತಂಡದಲ್ಲಿ ಖಾಯಂ ನಂಬರ್ 5 ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು. 

ಈ ಆಟಗಾರ ಹೊಸ ಉಪನಾಯಕನಾಗಬಹುದು :
ಮುಂದಿನ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಕೈಬಿಟ್ಟರೆ ಟೀಂ ಇಂಡಿಯಾಗೆ ಹೊಸ ಉಪನಾಯಕನ ಅವಶ್ಯಕತೆ ಇದೆ. ಈ ಹುದ್ದೆಯನ್ನು ರೋಹಿತ್ ಶರ್ಮಾಗೆ (Rohit Sharma) ನೀಡಬಹುದು, ಆದರೆ ಮುಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ, ಶ್ರೇಯಸ್ ಅಯ್ಯರ್ ಈ ತಂಡದ ಉಪನಾಯಕನಾಗಿ ಮೊದಲ ಬಾರಿಗೆ ನೇಮಕಗೊಳ್ಳಬಹುದು. ಅಯ್ಯರ್ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ್ದಾರೆ ಮತ್ತು ಅವರ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ಫೈನಲ್‌ನಲ್ಲಿ ಆಡಿದೆ.  

ಇದನ್ನೂ ಓದಿ : IPL 2022 Mega Auction : ಈ ಐದು ಆಟಗಾರರಲ್ಲಿ ಯಾರಾಗಬಹುದು Ahmedabad ತಂಡದ ನಾಯಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News