IND vs NZ : ಈ ಆಟಗಾರನನ್ನು ಟಿ20 ಪಂದ್ಯದಲ್ಲಿ ಓಪನರ್ ಮಾಡಿ : ದಿನೇಶ್ ಕಾರ್ತಿಕ್ ಬೇಡಿಕೆ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದಲ್ಲಿ ಆಡಿರಲಿಲ್ಲ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. 

Written by - Channabasava A Kashinakunti | Last Updated : Nov 19, 2022, 04:06 PM IST
  • ಈ ಆಟಗಾರ ಟಿ20ಯಲ್ಲಿ ಓಪನರ್
  • ಈ ಬೇಡಿಕೆಯನ್ನು ಮುಂದಿಟ್ಟ ದಿನೇಶ್ ಕಾರ್ತಿಕ್
  • ನ್ಯೂಜಿಲೆಂಡ್ ಸರಣಿಯಲ್ಲಿ ಸಿಗಲಿದೆ ಅವಕಾಶ
IND vs NZ : ಈ ಆಟಗಾರನನ್ನು ಟಿ20 ಪಂದ್ಯದಲ್ಲಿ ಓಪನರ್ ಮಾಡಿ : ದಿನೇಶ್ ಕಾರ್ತಿಕ್ ಬೇಡಿಕೆ title=

Dinesh Karthik, IND vs NZ 2nd T20 : ಟಿ20 ವಿಶ್ವಕಪ್ 2022 ರಲ್ಲಿ ಟೀಂ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಅವರಿಗೆ ಈ ಸಮಯದಲ್ಲಿ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದಲ್ಲಿ ಆಡಿರಲಿಲ್ಲ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. 

ಈ ಆಟಗಾರ ಟಿ20ಯಲ್ಲಿ ಓಪನರ್

2022 ರ ಟಿ 20 ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಕಾರಣ, ರಿಷಬ್ ಪಂತ್ ಪ್ಲೇಯಿಂಗ್ 11 ರಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದಿರಲಿಲ್ಲ. ರಿಷಬ್ ಪಂತ್ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಸ್ಥಾನ ಪಡೆಯಬೇಕು ಎಂದು ದಿನೇಶ್ ಕಾರ್ತಿಕ್ ಬೇಡಿಕೆ ಇಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಪಂತ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ವಿರಾಟ್ ಬದಲಿಗೆ ಬೌಲರ್‌ಗೆ ಚಾನ್ಸ್!

ಈ ಬೇಡಿಕೆಯನ್ನು ಮುಂದಿಟ್ಟ ದಿನೇಶ್ ಕಾರ್ತಿಕ್ 

ಕ್ರಿಕ್‌ಬಝ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, 'ನಾವು ರಿಷಭ್ ಪಂತ್ ಗೆ ಓಪನರ್ ಅವಕಾಶ ನೀಡಬಹುದು? ಏಕೆಂದರೆ ಅವರು ಆಡುವ ಸಾಮರ್ಥ್ಯ ನಮಗೆ ಗೊತ್ತಿದೆ. ಯಾವಾಗ ಪಂದ್ಯ ಆರಂಭವಾಗುತ್ತದೆಯೋ ಆ ಸಮಯದಲ್ಲಿ ಅವರಿಗೆ ಅವಕಾಶ ನೀಡಬೇಕು. ಅವರು ಪವರ್‌ಪ್ಲೇನಲ್ಲಿ ಪರಿಣಾಮಕಾರಿ ಆಟಗಾರನೆಂದು ತನನ್ನು ತಾನು ಸಾಬೀತು ಪಡಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ ರಿಷಭ್ ಓಪನರ್ ಆಗಿ ಹೋದರೆ, ಹೆಚ್ಚಿನ ಸ್ಟ್ರೈಕ್ ರೇಟ್ ಅನ್ನು ಹೊಂದುತ್ತೇವೆ. ಅಲ್ಲದೆ, ರಿಷಭ್ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸಲು ಇಷ್ಟಪಡುತ್ತಾರೆ. ಸ್ಟ್ರೋಕ್ ಆಡುವ ವಿಷಯಕ್ಕೆ ಬಂದರೆ, ಅವರು ಯಾರಿಗೂ ಎರಡನೆಯವರಲ್ಲ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಸರಣಿಯಲ್ಲಿ ಸಿಗಲಿದೆ ಅವಕಾಶ

ಈ ಸರಣಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಓಪನರ್ ಆಟಗಾರನಾಗಿ ಆಡುವ ಬೇಡಿಕೆಯನ್ನು ಹಲವು ಅನುಭವಿಗಳು ಎತ್ತಿದ್ದಾರೆ. ರಿಷಬ್ ಪಂತ್ ಓಪನರ್ ಆಗಿ ಹೆಚ್ಚು ಯಶಸ್ವಿಯಾಗದಿದ್ದರೂ ಅವರು ಟೀಂ ಇಂಡಿಯಾಕ್ಕೆ ಈ ಮೊದಲು ಓಪನರ್ ಆಗಿ ಆಡಿದ್ದಾರೆ. 2022 ರ ಟಿ 20 ವಿಶ್ವಕಪ್‌ನ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ಓಪನರ್ ಆಗಿ ಅವರನ್ನು ಮೈದಾನಕ್ಕೆ ಇಳಿಸಲಾಗಿತ್ತು, ಈ ಪಂದ್ಯಗಳಲ್ಲಿ ರಿಷಬ್ ಪಂತ್ ಯಾವುದು ಹೇಳಿಕೊಳ್ಳುವಂತ ಪ್ರದರ್ಶನ ಏನು ನೀಡಿರಲಿಲ್ಲ.

ಇದನ್ನೂ ಓದಿ : Rohit Sharma ಕೆಳಗಿಳಿಸಿ ಈ ಆಟಗಾರನಿಗೆ ನಾಯಕತ್ವ ನೀಡಲು BCCI ಮಾಸ್ಟರ್ ಪ್ಲಾನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News