Kevin Pietersen: ಟೀಮ್ ಇಂಡಿಯಾ ಸ್ಪಿನ್ನರ್‌ಗಳ ತಾಕತ್ತಿಗೆ ಬೆಚ್ಚಿ ಬಿದ್ದ ಕೆವಿನ್ ಪೀಟರ್ಸನ್!

ಬ್ಯಾಟಿಂಗ್‌ಗೆ ಹೇಳಿಮಾಡಿಸಿದ್ದ ಪಿಚ್‌ನಲ್ಲೂ ರನ್‌ಗಳಿಸಲು ತಿಣುಕಾಡಿದ ಪ್ರವಾಸಿ ಇಂಗ್ಲೆಂಡ್‌ ತಂಡ

Last Updated : Mar 4, 2021, 09:34 PM IST
  • ಬ್ಯಾಟಿಂಗ್‌ಗೆ ಹೇಳಿಮಾಡಿಸಿದ್ದ ಪಿಚ್‌ನಲ್ಲೂ ರನ್‌ಗಳಿಸಲು ತಿಣುಕಾಡಿದ ಪ್ರವಾಸಿ ಇಂಗ್ಲೆಂಡ್‌ ತಂಡ
  • ಬ್ಯಾಟ್ಸ್‌ಮನ್‌ಗಳು ಆತಿಥೇಯ ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಮೋಡಿಗೆ ಸಲ್ಯೂಟ್‌ ಹೊಡೆದು ಪೆವಿಲಿಯನ್ ಪರೇಡ್‌ ನಡೆಸಿದ್ದಾರೆ.
  • ಈ ಹಿಂದಿನ ಎರಡು ಪಂದ್ಯಗಳಿಗೆ ಭಾರತ ತಂಡ ಸ್ಪಿನ್ ಸ್ನೇಹಿ ಪಿಚ್‌ ನೀಡಿದೆ ಎಂದೆಲ್ಲಾ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರು ಟೀಕೆಗಳ ಸುರಿಮಳೆಗೈದಿದ್ದರು
Kevin Pietersen: ಟೀಮ್ ಇಂಡಿಯಾ ಸ್ಪಿನ್ನರ್‌ಗಳ ತಾಕತ್ತಿಗೆ ಬೆಚ್ಚಿ ಬಿದ್ದ ಕೆವಿನ್ ಪೀಟರ್ಸನ್! title=

ಅಹ್ಮದಾಬಾದ್: ಬ್ಯಾಟಿಂಗ್‌ಗೆ ಹೇಳಿಮಾಡಿಸಿದ್ದ ಪಿಚ್‌ನಲ್ಲೂ ರನ್‌ಗಳಿಸಲು ತಿಣುಕಾಡಿದ ಪ್ರವಾಸಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಆತಿಥೇಯ ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಮೋಡಿಗೆ ಸಲ್ಯೂಟ್‌ ಹೊಡೆದು ಪೆವಿಲಿಯನ್ ಪರೇಡ್‌ ನಡೆಸಿದ್ದಾರೆ.

ಇಲ್ಲಿನ ಮೊಟೆರಾದಲ್ಲಿ ನಿರ್ಮಸಲಾಗಿರುವ ನೂತನ ನರೇಂದ್ರ ಮೋದಿ ಸ್ಟೇಡಿಯಂ(Narendra Modi Stadium)ನಲ್ಲಿ ಗುರುವಾರ ಆರಂಭಗೊಂಡ ನಾಲ್ಕು ಟೆಸ್ಟ್‌ಗಳ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಬೃಹತ್‌ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

India vs England, 4th Test: ಮಿಂಚಿದ ಆಶ್ವಿನ್, ಆಕ್ಸರ್ ಪಟೇಲ್, 205 ಕ್ಕೆ ಇಂಗ್ಲೆಂಡ್ ಆಲೌಟ್

ಆದರೆ ಅಕ್ಷರ್‌ ಪಟೇಲ್‌ (68ಕ್ಕೆ 4), ರವಿಚಂದ್ರನ್ ಅಶ್ವಿನ್(Ravichandran Ashwin) (47ಕ್ಕೆ 3) ಮತ್ತು ವಾಷಿಂಗ್ಟನ್ ಸುಂದರ್ (14ಕ್ಕೆ 1) ಅವರ ಮನಮೋಹಕ ಸ್ಪಿನ್‌ ದಾಳಿಯ ಎದುರು ತಬ್ಬಿಬ್ಬಾದ ಇಂಗ್ಲೆಂಡ್‌ 75.5 ಓವರ್‌ಗಳಲ್ಲಿ 205 ರನ್‌ಗಳ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡಿತು.

WATCH: West Indies vs Sri Lanka, 1st T20I: ಕಿರನ್ ಪೋಲ್ಲಾರ್ಡ್ 6,6,6,6,6,6...!

ಈ ಹಿಂದಿನ ಎರಡು ಪಂದ್ಯಗಳಿಗೆ ಭಾರತ ತಂಡ(India Team) ಸ್ಪಿನ್ ಸ್ನೇಹಿ ಪಿಚ್‌ ನೀಡಿದೆ ಎಂದೆಲ್ಲಾ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರು ಟೀಕೆಗಳ ಸುರಿಮಳೆಗೈದಿದ್ದರು. ಆದರೆ, ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ್ದಂತ್ತಿದ್ದ ಪಿಚ್‌ನಲ್ಲೂ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಭಾರತೀಯ ಸ್ಪಿನ್ನರ್‌ಗಳ ಎದುರು ಪರದಾಟ ನಡೆಸಿದರು. ಇದನ್ನು ಕಂಡ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್‌ ಬೆಕ್ಕಸ ಬೆರಗಾಗಿದ್ದು, ಭಾರತೀಯ ಸ್ಪಿನ್ನರ್‌ಗಳ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ.

ICC T20 ಕ್ರಿಕೆಟ್ ರಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಕನ್ನಡಿಗ ಕೆ.ಎಲ್ ರಾಹುಲ್!

ಇಂಗ್ಲೆಂಡ್‌ ತಂಡ 205 ರನ್‌ಗಳಿಗೆ ಆಲ್‌ಔಟ್‌ ಆಗುತ್ತಿದ್ದಂತೆಯೇ ಟ್ವೀಟ್‌(Tweet) ಮಾಡಿದ ಪೀಟರ್ಸನ್‌, "ಭಾರತೀಯ ಸ್ಪಿನ್ನರ್‌ಗಳು ಅದ್ಭುತ," ಎಂದು ಗುಣಗಾನ ಮಾಡಿದ್ದಾರೆ. ಅಕ್ಷರ್‌ ಪಟೇಲ್‌ ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ, ಇನಿಂಗ್ಸ್‌ ಮಧ್ಯದಲ್ಲಿ ಅಪಾಯಕಾರಿ ಜೊತೆಯಾಟ ಕಟ್ಟಿದ್ದ ಓಲ್ಲೀ ಪೋಪ್ ಮತ್ತು ಡ್ಯಾನ್‌ ಲಾರೆನ್ಸ್‌ ಅವರನ್ನು ಆರ್‌ ಅಶ್ವಿನ್‌ ಬೇರ್ಪಡಿಸಿದರು. 55 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ಗೆ ವಾಷಿಂಗ್ಟನ್ ಸುಂದರ್ ಪೆವಿಲಿಯನ್‌ ದಾರಿ ತೋರಿಸಿದರು.

ನೀವು ಆಟವನ್ನು ಗೆಲ್ಲಲು ಆಡುತ್ತೀರೋ ಅಥವಾ 5 ದಿನಗಳ ವರೆಗೆ ತಗೆದುಕೊಂಡು ಹೋಗುತ್ತಿರೋ?

ಇದಕ್ಕೂ ಮುನ್ನ ಮತ್ತೊಂದು ಟ್ವೀಟ್‌ ಮಾಡಿದ್ದ ಪೀಟರ್ಸನ್‌ ಪಿಚ್‌ ಬ್ಯಾಟಿಂಗ್‌ಗೆ ಸೂಕ್ತವಾಗಿದೆ ಎಂದಿದ್ದರು. ಅಷ್ಟೇ ಅಲ್ಲದೆ ಡ್ಯಾನ್‌ ಲಾರೆನ್ಸ್(Dan Lawrence)‌, ಓಲ್ಲೀ ಪೋಪ್ ಮತ್ತು ಬೆನ್‌ ಫೋಕ್ಸ್‌ ತಂಡಕ್ಕೆ 275 ರನ್‌ಗಳನ್ನು ತಂದುಕೊಡಬಲ್ಲರು ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರತೀಯ ಸ್ಪಿನ್ನರ್‌ಗಳು ಈ ಭವಿಷ್ಯವನ್ನು ಸುಳ್ಳಾಗಿಸಿದರು.

IND vs ENG: ಪಿಚ್ ವಿವಾದದ ಬಗ್ಗೆ ಮೌನ ಮುರಿದ Virat Kohli

ಮಧ್ಯಮ ಕ್ರಮಾಂಕದಲ್ಲಿ ಓಲ್ಲೀ ಪೋಪ್ 867 ಎಸೆತಗಳಲ್ಲಿ 29 ರನ್ ಮತ್ತು ಡ್ಯಾನ್‌ ಲಾರೆನ್ಸ್‌ 74 ಎಸೆತಗಳಲ್ಲಿ 46 ರನ್‌ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಬ್ಯಾಟ್(Batting)‌ ಮಾಡಿದ ಜಾನಿ ಬೈರ್‌ ಸ್ಟೋವ್‌ (29) ಮತ್ತು ಬೆನ್‌ ಸ್ಟೋಕ್ಸ್‌ (55) ಮಾತ್ರವೇ ತಂಡದ ಪರ ಎರಡಂಕಿಯ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳೆನಿಸಿದರು. ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಸ್ಕೋರ್‌ಗೆ ತೃಪ್ತಿಪಟ್ಟರು.

ಮದುವೆ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಂದ್ರಾ ಬುಮ್ರಾ...!

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿ ಜಯ ದಾಖಲಿಸಿದ್ದ ಇಂಗ್ಲೆಂಡ್‌ ತಂಡ(England Team) ಬಳಿಕ, 2ನೇ ಮತ್ತು 3ನೇ ಟೆಸ್ಟ್‌ನಲ್ಲಿ ಆಡಿದ ಒಟ್ಟು ನಾಲ್ಕೂ ಇನಿಂಗ್ಸ್‌ಗಳಲ್ಲಿ 200 ರನ್‌ಗಳ ಗಡಿ ಮುಟ್ಟಲು ವಿಫಲವಾಗಿತ್ತು.

ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್ 75.5 ಓವರ್‌ಗಳಿಗೆ 205/10 ( ಜಾನಿ ಬೈರ್‌ಸ್ಟೋವ್‌ 28, ಬೆನ್‌ ಸ್ಟೋಕ್ಸ್‌ 55, ಓಲ್ಲೀ ಪೋಪ್ 29, ಡೇನಿಯಲ್‌ ಲಾರೆನ್ಸ್ 46 ; ಅಕ್ಷರ್‌ ಪಟೇಲ್‌ 68ಕ್ಕೆ 4, ಆರ್‌ ಅಶ್ವಿನ್ 47ಕ್ಕೆ 3, ಮೊಹಮ್ಮದ್‌ ಸಿರಾಜ್‌ 45ಕ್ಕೆ 2, ವಾಷಿಂಗ್ಟನ್‌ ಸುಂದರ್‌ 14ಕ್ಕೆ 1)

IPL 2021: ಐಪಿಎಲ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಡೇಲ್ ಸ್ಟೇನ್...!

ಭಾರತ: ಮೊದಲ ಇನಿಂಗ್ಸ್‌ 12 ಓವರ್‌ಗಳಲ್ಲಿ 24ಕ್ಕೆ 1 (ರೋಹಿತ್ ಶರ್ಮಾ ಅಜೇಯ 8, ಚೇತೇಶ್ವರ್‌ ಪೂಜಾರ ಅಜೇಯ 15; ಜೇಮ್ಸ್‌ ಆಂಡರ್ಸನ್ 0ಕ್ಕೆ 1).

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News