ನವದೆಹಲಿ: ಟೆಸ್ಟ್ ಮತ್ತು ಟಿ-20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಬಳಿಕ ಟೀಂ ಇಂಡಿಯಾದ ಚಿತ್ತ ಏಕದಿನ ಪಂದ್ಯದತ್ತ ನೆಟ್ಟಿದೆ. ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ಅನ್ನು 3–1ರಿಂದ ಸೋಲಿಸಿತು ಮತ್ತು ಅದರ ನಂತರ ಅವರು ಟಿ 20 ಸರಣಿಯನ್ನು 3–2ರಿಂದ ವಶಪಡಿಸಿಕೊಂಡರು. ಈ ಸಮಯದಲ್ಲಿ ಎರಡೂ ಸರಣಿಗಳನ್ನು ಗೆಲ್ಲುವ ಮೂಲಕ ಭಾರತೀಯ ತಂಡದ ಆಟಗಾರರು ಏಕದಿನ ಸರಣಿಯನ್ನು ಅತ್ಯುತ್ತಮ ಮನೋಸ್ಥೈರ್ಯದಿಂದ ಪ್ರಾರಂಭಿಸಲಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ತಂಡದ ಕೆಲವು ಆಟಗಾರರು ಪ್ರಮುಖರು ಎಂದು ಸಾಬೀತುಪಡಿಸಬಹುದು. ಅಂತಹ ಕೆಲವು ಆಟಗಾರರು ಯಾರೆಂದು ತಿಳಿಯೋಣ...
* ರೋಹಿತ್ ಶರ್ಮಾ (Rohit Sharma) :
ಪ್ರಸ್ತುತ, ಇಡೀ ಏಕದಿನ ಸರಣಿಯಲ್ಲಿ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಅವರ ಮೇಲೆ ಎಲ್ಲರ ಕಣ್ಣು ಹರಿಯಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ರೋಹಿತ್. ಏಕದಿನ ಸರಣಿಯಲ್ಲಿ ತಂಡವು ರೋಹಿತ್‌ನಿಂದ ಸಾಕಷ್ಟು ಭರವಸೆ ಹೊಂದಿದೆ.
ಇದನ್ನೂ ಓದಿ - Team India: ನಿಮ್ಮ ನೆಚ್ಚಿನ ಕ್ರಿಕೆಟ್ ತಾರೆಯರ ವಿಮಾನ ಪ್ರಯಾಣ ಹೇಗಿರುತ್ತೆ, ಇಲ್ಲಿದೆ ವಿಡಿಯೋ
* ವಿರಾಟ್ ಕೊಹ್ಲಿ (Virat Kohli) :
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರತಿಯೊಬ್ಬರಿಗೂ ವಿರಾಟ್ ಕೊಹ್ಲಿ ಅವರಿಂದ ನಿರೀಕ್ಷೆ ಹೆಚ್ಚಿದೆ.
* ಹಾರ್ದಿಕ್ ಪಾಂಡ್ಯ (Hardik Pandya) :
ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಪಂದ್ಯ ವಿಜೇತ. ಪಾಂಡ್ಯ ಮತ್ತೊಮ್ಮೆ ತಂಡವು ಇನ್ನಿಂಗ್ಸ್ ಅನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಪಾಂಡ್ಯ ಕಷ್ಟದ ಸಮಯದಲ್ಲಿ ತಂಡಕ್ಕೆ ಬೌಲಿಂಗ್ ಕೂಡ ಮಾಡಬಹುದು.
ಇದನ್ನೂ ಓದಿ - "ಶಿಖರ್ ಧವನ್ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುತ್ತಾರೆ"-ವಿರಾಟ್ ಕೊಹ್ಲಿ
* ಭುವನೇಶ್ವರ್ ಕುಮಾರ್ (Bhuvaneshwar Kumar) :
ತಂಡದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಗೊಂಡ ಕೆಲವೇ ದಿನಗಳಲ್ಲಿ ಭುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುನರಾಗಮನ ಮಾಡಿದ್ದಾರೆ. ಟಿ 20 ಸರಣಿಯಲ್ಲಿ ಕೂಡ ಅವರ ಸಾಧನೆ ಉತ್ತಮವಾಗಿತ್ತು.
* ಟಿ.ನಟರಾಜನ್ (T. Natarajan) :
ಆಸ್ಟ್ರೇಲಿಯಾ ವಿರುದ್ಧ ಕೊನೆಗೊಂಡ ಸರಣಿಯಲ್ಲಿ ಟಿ ನಟರಾಜನ್ ಅದ್ಭುತ ಪ್ರದರ್ಶನ ನೀಡಿದರು. ನಟರಾಜನ್ ಕೊನೆಯ ಓವರ್‌ಗಳಲ್ಲಿ ಅದ್ಭುತ ಯಾರ್ಕರ್ ಹಾಕುವ ಕಲೆ ಹೊಂದಿದ್ದಾರೆ. ನಟರಾಜನ್ ಭುವನೇಶ್ವರ್ ಕುಮಾರ್ ಅವರಿಗೆ ಸಾಥ್ ನೀಡುವ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.