BCCI: ವಿರಾಟ್ ಕೊಹ್ಲಿ ಅಂಡ್ ಟೀಂಗೆ ಬಿಗ್ ರಿಲೀಫ್ ನೀಡಿದ ಬಿಸಿಸಿಐ

ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತ ತಂಡವು ಇಂಗ್ಲೆಂಡ್‌ನಲ್ಲಿ ಸುಮಾರು ಮೂರೂವರೆ ತಿಂಗಳು ಕಳೆಯಬೇಕಾಗಿದೆ.

Written by - Yashaswini V | Last Updated : May 13, 2021, 01:40 PM IST
  • ವಿರಾಟ್ ಕೋಹ್ಲಿ ಮತ್ತವರ ತಂಡ ಸುಮಾರು ಮೂರುವರೆ ತಿಂಗಳು ಬ್ರಿಟನ್ ನಲ್ಲಿ ಕಾಲ ಕಳೆಯಬೇಕಿದೆ‌
  • ಭಾರತೀಯ ತಂಡಕ್ಕೆ ಸ್ವದೇಶದಲ್ಲಿ ಎಂಟು ದಿನಗಳ ಹೋಟೆಲ್ ಐಸೋಲೇಷನ್ ಮಾಡಲಾಗುತ್ತದೆ
  • ಬಳಿಕ ಆಟಗಾರರಿಗೆ ಆರ್ ಟಿ ಪಿಸಿಆರ್ (RT- PCR) ಪರೀಕ್ಷೆ ಮಾಡಲಾಗುತ್ತದೆ
BCCI: ವಿರಾಟ್ ಕೊಹ್ಲಿ ಅಂಡ್ ಟೀಂಗೆ ಬಿಗ್ ರಿಲೀಫ್ ನೀಡಿದ ಬಿಸಿಸಿಐ title=
File Image

ನವದೆಹಲಿ: ಕೋವಿಡ್ -19 (Covid 19) ಕಷ್ಟ ಕಾಲದಲ್ಲಿ ಕುಟುಂಬದವರನ್ನು ಬಿಟ್ಟು ದೂರದ ಇಂಗ್ಲೆಂಡಿಗೆ (England) ಹೋಗಿ ಬಯೋ-ಬಬಲ್‌ನಲ್ಲಿ (Bio-Bubble) ಇದ್ದು ಬಳಿಕ ಕ್ರಿಕೆಟ್ ಸರಣಿ ಆಡಬೇಕಿರುವ ಭಾರತೀಯ ಕ್ರಿಕೆಟಿಗರಿಗೆ (Team India)ಗೆ ಬಿಸಿಸಿಐ (BCCI) ರಿಲೀಫ್ ನೀಡಿದೆ. ಇಂಗ್ಲೆಂಡ್‌ಗೆ ಹೋಗುವ ಕ್ರಿಕೆಟಿಗರು ತಮ್ಮ ಕುಟುಂಬದವರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತೀಯ ಕ್ರಿಕೆಟ್ ತಂಡವು (Team India) ಜೂನ್ 18 ರಿಂದ 22ರವರೆಗೆ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ. ನಂತರ ಒಂದು ತಿಂಗಳ ವಿಶ್ರಾಂತಿಯ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಇದನ್ನೂ ಓದಿ- BCCI ಎಚ್ಚರಿಕೆ : ಕೊರೋನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಸರಣಿಯಿಂದಲೇ ಔಟ್..!

ಭಾರತೀಯ ತಂಡದ ಆಟಗಾರರು ಮೇ 25ರಂದು ಮುಂಬೈ  ಮೂಲಕ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅಲ್ಲಿ ಬಿಸಿಸಿಐ (BCCI) ರಚಿಸಿದ ಬಯೋ-ಬಬಲ್‌ನಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಜೂನ್ 2ರಂದು ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಭಾರತೀಯ ತಂಡ ಬ್ರಿಟನ್‌ಗೆ ತಲುಪಿದ ನಂತರ 10 ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ. ವಿರಾಟ್ ಕೋಹ್ಲಿ ಮತ್ತವರ ತಂಡ ಸುಮಾರು ಮೂರುವರೆ ತಿಂಗಳು ಬ್ರಿಟನ್ ನಲ್ಲಿ ಕಾಲ ಕಳೆಯಬೇಕಿದೆ‌. ಭಾರತೀಯ ತಂಡಕ್ಕೆ ಸ್ವದೇಶದಲ್ಲಿ ಎಂಟು ದಿನಗಳ ಹೋಟೆಲ್ ಐಸೋಲೇಷನ್ (Hotel Isolation) ಮಾಡಲಾಗುತ್ತದೆ. ಬಳಿಕ ಆಟಗಾರರಿಗೆ ಆರ್ ಟಿ ಪಿಸಿಆರ್ (RT- PCR) ಪರೀಕ್ಷೆ  ಮಾಡಲಾಗುತ್ತದೆ. ನಕಾರಾತ್ಮಕ (Negetive) ವರದಿ ಬಂದವರಿಗೆ ಎರಡನೇ, ನಾಲ್ಕನೇ ಮತ್ತು ಏಳನೇ ದಿನಗಳಲ್ಲಿ ಮಾತ್ರ ಹೊರಹೋಗಲು ಅವಕಾಶವಿರುತ್ತದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ (PTI) ತಿಳಿಸಿದ್ದಾರೆ.

ಇದನ್ನೂ ಓದಿ - IPL 2021: ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲೇ ನಡೆಸಬಹುದು!

"ನಾವು ಒಂದು ಬಯೋ-ಬಬಲ್‌ನಿಂದ ಇನ್ನೊಂದೆಡೆಗೆ ಚಲಿಸಬೇಕಾಗಿದೆ. ಆದ್ದರಿಂದ 10 ದಿನಗಳ ಕ್ವಾರೆಂಟೈನ್‌ ಅವಧಿಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಆದಾಗ್ಯೂ, ಆಟಗಾರರು ಕ್ವಾರೆಂಟೈನ್‌ ಸಮಯದಲ್ಲಿ ಅಭ್ಯಾಸಕ್ಕೆ ಹೋಗಬಹುದು. ಸುದೀರ್ಘ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಆಟಗಾರರಿಗೆ ಕುಟುಂಬಗಳನ್ನು ಜೊತೆಯಲ್ಲಿ ಯುಕೆಗೆ ಕರೆದೊಯ್ಯಲು ಅನುಮತಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News