IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್

IND vs ENG 5th Test: ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ವಿರಾಟ್‌ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಅಂತಾ ಜೇಮ್ಸ್​ ಅ್ಯಂಡರ್ಸನ್ ಹೇಳಿದ್ದಾರೆ. ​

Written by - Puttaraj K Alur | Last Updated : Mar 3, 2024, 10:04 PM IST
  • ವಿರಾಟ್​ ಕೊಹ್ಲಿ ಟೆಸ್ಟ್​ ಸರಣಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ
  • ಚರ್ಚೆಗೆ ಗ್ರಾಸವಾದ ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಅ್ಯಂಡರ್ಸನ್ ಹೇಳಿಕೆ
  • ಟೆಸ್ಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ 41 ವರ್ಷದ ಜೇಮ್ಸ್​ ಅ್ಯಂಡರ್ಸನ್
IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್ title=
IND vs ENG 5th Test

ನವದೆಹಲಿ: ವಿರಾಟ್​ ಕೊಹ್ಲಿ ಟೆಸ್ಟ್​ ಸರಣಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಅ್ಯಂಡರ್ಸನ್ ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್​ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯವು ಮಾರ್ಚ್​ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ. ಸಂದರ್ಶವೊಂದರಲ್ಲಿ ಕೊಹ್ಲಿ ಬಗ್ಗೆ ಅ್ಯಂಡರ್ಸನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. 

ಟೆಸ್ಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಅ್ಯಂಡರ್ಸನ್ ಅವರು 37 ಏಕದಿನ ಪಂದ್ಯಗಳಲ್ಲಿ ಒಟ್ಟು 10 ಬಾರಿ ಕೊಹ್ಲಿಯನ್ನು ಔಟ್​ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 25 ಪಂದ್ಯಗಳಲ್ಲಿ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೊಹ್ಲಿಯವರು ಆರಂಭಿಕ 2 ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದಿದ್ದರು. 3ನೇ ಪಂದ್ಯದಲ್ಲಿ ಅವರು ತಂಡ ಸೇರಲಿದ್ದಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ 3ನೇ ಪಂದ್ಯದ ಆರಂಭಕ್ಕೂ ಮುನ್ನವೇ ಕೊಹ್ಲಿ ಸರಣಿಯ ಎಲ್ಲಾ ಪಂದ್ಯಗಳಿಂದ ಹಿಂದೆ ಸರಿದಿರುವ ನಿರ್ಧಾರವನ್ನು ತಿಳಿಸಿದ್ದರು.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್’ನಲ್ಲಿ ಧೋನಿ ಡ್ಯಾನ್ಸ್; ಸಾಥ್ ಕೊಟ್ಟ ಪತ್ನಿ ಸಾಕ್ಷಿ, ಕ್ರಿಕೆಟಿಗ ಡ್ವೇನ್ ಬ್ರಾವೋ

ಖಾಸಗಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅ್ಯಂಡರ್ಸನ್​, ʼಕಳೆದ ಹಲವು ವರ್ಷಗಳಲ್ಲಿ ತನಗೆ ಕಠಿಣ ಸ್ಪರ್ಧೆಯಾಗಿದ್ದ ವಿರಾಟ್‌ ಕೊಹ್ಲಿಯ ಸವಾಲನ್ನು ಈ ಬಾರಿ ಎದುರಿಸಲು ಸಾಧ್ಯವಾಗಿಲ್ಲ. ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆʼ ಅಂತಾ ಹೇಳಿದ್ದಾರೆ. 

41 ವಯಸ್ಸಾದರೂ ಸಹ ಯುವ ಆಟಗಾರರನ್ನು ನಾಚಿಸುವಂತ ಫಿಟ್​ನೆಸ್​ ಕಾಪಾಡಿಕೊಂಡಿರುವ ಅ್ಯಂಡರ್ಸನ್ ಅತ್ಯುತ್ತಮ ಬೌಲಿಂಗ್​ ಕೌಶಲ್ಯವನ್ನು ಹೊಂದಿರುವ ಇಂಗ್ಲೆಂಡ್​ ತಂಡದ ಪ್ರಧಾನ ವೇಗಿಯಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್ ಪಡೆಯಲು ಅವರಿಗೆ ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ನಲ್ಲಿ ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಅ್ಯಂಡರ್ಸನ್ ಭಾರತದ ನೆಲದಲ್ಲೇ 700 ವಿಕೆಟ್‌ಗಳ​ ಸಾಧನೆ ಮಾಡುತ್ತೇನೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ

ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ ಅ್ಯಂಡರ್ಸನ್ 2 ವಿಕೆಟ್​ ಕಿತ್ತರೆ 700 ವಿಕೆಟ್‌ಗಳ ಕ್ಲಬ್‌ಗೆ ಸೇರಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 3ನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ 700 ಟೆಸ್ಟ್​ ವಿಕೆಟ್​ ಕಿತ್ತ ಸಾಧಕರಾಗಿದ್ದಾರೆ. 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅ್ಯಂಡರ್ಸನ್, 2003ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅ್ಯಂಡರ್ಸನ್ 186 ಟೆಸ್ಟ್​ ಪಂದ್ಯಗಳನ್ನು ಆಡಿದ್ದು, 698 ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದು, 3 ಬಾರಿ 10 ವಿಕೆಟ್​ ಪಡೆದ ಸಾಧಕರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News