ಇಮ್ರಾನ್ ಖಾನ್ ಪಾಕಿಸ್ತಾನವನ್ನು 'ಏಷ್ಯಾದ ಟೈಗರ್' ಆಗಿ ಬದಲಿಸಲಿದ್ದಾರೆ-ಶೋಯೆಬ್ ಅಖ್ತರ್

    

Last Updated : Jul 29, 2018, 11:23 AM IST
ಇಮ್ರಾನ್ ಖಾನ್ ಪಾಕಿಸ್ತಾನವನ್ನು 'ಏಷ್ಯಾದ ಟೈಗರ್' ಆಗಿ ಬದಲಿಸಲಿದ್ದಾರೆ-ಶೋಯೆಬ್ ಅಖ್ತರ್ title=

ನವದೆಹಲಿ:ಪಾಕಿಸ್ತಾನದದ ವೇಗದ ಬೌಲರ್ ಶೋಯೆಬ್ ಅಖ್ತರ್ ಇಮ್ರಾನ್ ಖಾನ್ ಪಾಕಿಸ್ತಾನವನ್ನು 'ಏಷ್ಯಾದ ಟೈಗರ್' ಪರಿವರ್ತಿಸುವ  ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಎಕ್ಸ್ಪ್ರೆಸ್ ಟ್ರಿಬ್ಯೂನ್ ಉಲ್ಲೇಖಿಸಿರುವ ಹೇಳಿಕೆಯಂತೆ ಇಮ್ರಾನ್ ಖಾನ್ ಪಾಕಿಸ್ತಾನವನ್ನು ಏಷ್ಯಾದ ಹುಲಿಯನ್ನಾಗಿ ಪರಿವರ್ತಿಸಲಿದ್ದಾರೆ ಎನ್ನುವ ನಂಬಿಕೆ ಇದೆ,ಆದರೆ ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗಳಲ್ಲಿ 115 ಸ್ಥಾನಗಳನ್ನು ಗೆದ್ದಿರುವ ಇಮ್ರಾನ್ ಖಾನ್ ರಪಾಕಿಸ್ತಾನ್ ತೆಹರಿಕ್ -ಇ-ಇನ್ಸಾಫ್ (ಪಿಟಿಐ) ಪಕ್ಷ  ಚುನಾವಣೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಇದಾದ ನಂತರ ಅಖ್ತರ್  ಇಮ್ರಾನ್ ಖಾನ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ "ಇಮ್ರಾನ್ ಭಾಯಿ ಪಾಕಿಸ್ತಾನದ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ತಲುಪುವನೆಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.

1992 ರಲ್ಲಿ ಪಾಕಿಸ್ತಾನದ ಕ್ರಿಕೆಟ್ ವಿಶ್ವ ಕಪ್ ವಿಜಯದ ನಾಯಕತ್ವ ವಹಿಸಿದ್ದ ಇಮ್ರಾನ್ ಖಾನ್, 1996 ರಲ್ಲಿ ಪಿಟಿಐ ಪಕ್ಷವನ್ನು ಸ್ಥಾಪಿಸಿ 1997 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.  ಖಾನ್ ದೇಶದಾದ್ಯಂತ ಏಳು ಕ್ಷೇತ್ರಗಳಲ್ಲಿ ನಿಂತರು ಕೂಡ  ಬಹುಮತವನ್ನು ಪಡೆಯಲು ಸಾಧ್ಯವಾಗಿರಲಿಲ್ಲ ಆದರೆ  2013 ಸಾರ್ವತ್ರಿಕ ಚುನಾವಣೆಯಲ್ಲಿ  ಪಿಟಿಐ ಎರಡನೇ ಅತಿ ದೊಡ್ಡ ಪಕ್ಷವಾದ ಬಿಲಾವಾಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ  ಮುನ್ನಡಿ ಇಟ್ಟಿತ್ತು.

Trending News