Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ!

ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಈ ರ‍್ಯಾಂಕಿಂಗ್ ನಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಕೇವಲ ಒಂದು ಪಂದ್ಯದ ನಂತರ ಜಡೇಜಾ ಸ್ಥಾನ ಕೆಳೆದುಕೊಂಡಿದ್ದಾರೆ. ಕಳಪೆ ಪಂದ್ಯದಿಂದಾಗಿ ರವೀಂದ್ರ ಜಡೇಜಾ ಅವರನ್ನು ಟಾಪ್ ಆಲ್‌ರೌಂಡರ್ ಪಟ್ಟಿಯಿಂದ  ತೆಗೆದುಹಾಕಲಾಗಿದೆ.

Written by - Channabasava A Kashinakunti | Last Updated : Mar 16, 2022, 06:23 PM IST
  • ಐಸಿಸಿ ಇತ್ತೀಚಿಗೆ ಟೆಸ್ಟ್ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ
  • ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ರವೀಂದ್ರ ಜಡೇಜಾಗೆ ಹಿನ್ನಡೆ
  • ಟಾಪ್ 5 ಬೌಲರ್‌ಗಳಲ್ಲಿ ಸ್ಥಾನ ಪಡೆದ ಬುಮ್ರಾ
Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ! title=

ನವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇತ್ತೀಚಿನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದ ಬಳಿಕ ಭಾರತದ ಕೆಲ ಆಟಗಾರರು ಈ ರ‍್ಯಾಂಕಿಂಗ್ ನಲ್ಲಿ ಮೇಲುಗೈ ಸಾಧಿಸಿದ್ದು, ಕೆಲ ಆಟಗಾರರು ಕೂಡ ಸೋಲು ಅನುಭವಿಸಿದ್ದಾರೆ. ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಈ ರ‍್ಯಾಂಕಿಂಗ್ ನಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಕೇವಲ ಒಂದು ಪಂದ್ಯದ ನಂತರ ಜಡೇಜಾ ಸ್ಥಾನ ಕೆಳೆದುಕೊಂಡಿದ್ದಾರೆ. ಕಳಪೆ ಪಂದ್ಯದಿಂದಾಗಿ ರವೀಂದ್ರ ಜಡೇಜಾ ಅವರನ್ನು ಟಾಪ್ ಆಲ್‌ರೌಂಡರ್ ಪಟ್ಟಿಯಿಂದ  ತೆಗೆದುಹಾಕಲಾಗಿದೆ.

ಜಡೇಜಾ ಆಳ್ವಿಕೆಗೆ ಕೊನೆ

ಶ್ರೀಲಂಕಾ ವಿರುದ್ಧ ಮೊಹಾಲಿ ಟೆಸ್ಟ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ನಂತರ ರವೀಂದ್ರ ಜಡೇಜಾ(Ravindra Jadeja) ಮಾರ್ಚ್ 8 ರಂದು ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಆಲ್‌ರೌಂಡರ್ ಆದರು. ಆದರೆ ಜಡೇಜಾ ಬೆಂಗಳೂರು ಟೆಸ್ಟ್‌ನಲ್ಲಿ ಸೋಲು ಅನುಭವಿಸಬೇಕಾಯಿತು, ಇದೀಗ ರವೀಂದ್ರ ಜಡೇಜಾ ಟೆಸ್ಟ್‌ನ ನಂಬರ್-2 ಆಲ್‌ರೌಂಡರ್ ಆಗಿದ್ದಾರೆ. ಬುಧವಾರ ಬಿಡುಗಡೆಯಾದ ಇತ್ತೀಚಿನ ಶ್ರೇಯಾಂಕದಲ್ಲಿ, ರವೀಂದ್ರ ಜಡೇಜಾ 385 ರೇಟಿಂಗ್‌ಗಳನ್ನು ಹೊಂದಿದ್ದರೆ, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ 393 ರೇಟಿಂಗ್‌ಗಳನ್ನು ಮತ್ತು ಜೇಸನ್ ಹೋಲ್ಡರ್ ನಂಬರ್-1 ಆಲ್‌ರೌಂಡರ್ ಆಗಿದ್ದಾರೆ.

ಇದನ್ನೂ ಓದಿ : IPL 2022: ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ, ಎಂಎನ್‌ಎಸ್ ಹೇಳಿದ್ದೇನು?

ಮೊಹಾಲಿ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ

ಮೊಹಾಲಿ ಟೆಸ್ಟ್‌(Mohali Test)ನ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರೆ ರವೀಂದ್ರ ಜಡೇಜಾ 175 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು. ಇದು ಜಡೇಜಾ ಅವರ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಗಿತ್ತು. ಈ ಪಂದ್ಯದಲ್ಲಿ ಜಡೇಜಾ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 9 ವಿಕೆಟ್‌ ಪಡೆದರು. ಈ ಅದ್ಭುತ ಪ್ರದರ್ಶನದ ನಂತರವೇ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಆದರು. ಇದಕ್ಕೂ ಮೊದಲು ಆಗಸ್ಟ್ 2017 ರಲ್ಲಿ, ಜಡೇಜಾ ಕೇವಲ ಒಂದು ವಾರದವರೆಗೆ ICC ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಆಲ್ ರೌಂಡರ್ ಆಗಿದ್ದರು. ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ರವೀಂದ್ರ ಜಡೇಜಾ 201 ರನ್ ಗಳಿಸಿ ಹತ್ತು ವಿಕೆಟ್ ಕಬಳಿಸಿದ್ದಾರೆ.

ಟೆಸ್ಟ್ ಶ್ರೇಯಾಂಕದಲ್ಲಿ ಬುಮ್ರಾ ಏರಿಕೆ

ಇತ್ತೀಚಿನ ಐಸಿಸಿ ಟೆಸ್ಟ್  ರ‍್ಯಾಂಕಿಂಗ್(ICC Test Rankings), ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಾಪ್ 5 ಬೌಲರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ, 830 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ತಲುಪಿದ್ದಾರೆ. ಬುಮ್ರಾ 6 ಸ್ಥಾನ ಜಿಗಿದು 830 ಅಂಕಗಳೊಂದಿಗೆ ಅಗ್ರ 5 ಸ್ಥಾನಕ್ಕೆ ತಲುಪಿದ್ದಾರೆ. ಶ್ರೀಲಂಕಾ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ, ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಮೊದಲ ಬಾರಿಗೆ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು. ಅವರು ನಾಲ್ಕನೇ ಸ್ಥಾನಕ್ಕೆ ಏರಿದ್ದು, ಪಾಕಿಸ್ತಾನದ ಶಾಹೀನ್ ಅಫ್ರಿದಿ, ಕೈಲ್ ಜೇಮ್ಸನ್, ಟಿಮ್ ಸೌಥಿ, ಜೇಮ್ಸ್ ಆಂಡರ್ಸನ್, ನೀಲ್ ವ್ಯಾಗ್ನರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ : IPL 2022: ಈ 3 ಐಪಿಎಲ್ ತಂಡಗಳು ರೋಹಿತ್ ಗಿಂತಲೂ ಅಪಾಯಕಾರಿ ಆರಂಭಿಕರನ್ನು ಹೊಂದಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News