ಏಕದಿನ ವಿಶ್ವಕಪ್‌ ಗೆಲ್ಲದಿದ್ದರೂ ಭಾರತದ ಖಜಾನೆ ಸೇರಿದೆ ಕೋಟಿ ಕೋಟಿ ಆದಾಯ! ODI ವರ್ಲ್ಡ್‌ ಕಪ್‌ʼನಿಂದ ದೇಶಕ್ಕೆ ಬಂದ Income ಎಷ್ಟು ಗೊತ್ತಾ?

World Cup Income for India: ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವಕಪ್ ನಡೆದಿದ್ದು, ಭಾರತದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳ ಜಮಾವಣೆ ಕಂಡುಬಂದಿತ್ತು. 10 ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೆಗಾ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಐಸಿಸಿ ವರದಿ ಪ್ರಕಾರ ಈ ಅವಧಿಯಲ್ಲಿ 25 ಲಕ್ಷ ಪ್ರೇಕ್ಷಕರು ಕ್ರಿಕೆಟ್ ನೋಡಲು ಬಂದಿದ್ದರು.

Written by - Bhavishya Shetty | Last Updated : Sep 11, 2024, 08:21 PM IST
    • 2023 ರ ODI ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದ ವಿಷಾದವನ್ನು ಕೊನೆಗೊಳಿಸಿತ್ತು
    • ಟೀಂ ಇಂಡಿಯಾ ಟ್ರೋಫಿ ಗೆಲ್ಲದಿದ್ದರೂ ಭರ್ಜರಿ ಆದಾಯವನ್ನು ಪಡೆದಿದೆ
    • ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವಕಪ್ ನಡೆದಿತ್ತು
ಏಕದಿನ ವಿಶ್ವಕಪ್‌ ಗೆಲ್ಲದಿದ್ದರೂ ಭಾರತದ ಖಜಾನೆ ಸೇರಿದೆ ಕೋಟಿ ಕೋಟಿ ಆದಾಯ! ODI ವರ್ಲ್ಡ್‌ ಕಪ್‌ʼನಿಂದ ದೇಶಕ್ಕೆ ಬಂದ Income ಎಷ್ಟು ಗೊತ್ತಾ? title=
File Photo

ಭಾರತವು 2024ರ T20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ಮೂಲಕ 2023 ರ ODI ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದ ವಿಷಾದವನ್ನು ಕೊನೆಗೊಳಿಸಿತ್ತು. ಆ ವಿಶ್ವಕಪ್‌ʼನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆಲ್ಲದಿದ್ದರೂ ಭರ್ಜರಿ ಆದಾಯವನ್ನು ಪಡೆದಿದೆ ಎಂದು ಐಸಿಸಿ ವರದಿ ಮಾಡಿದೆ.

ಇದನ್ನೂ ಓದಿ: ತೆಂಗಿನೆಣ್ಣೆಗೆ ಈ ವಸ್ತು ಬೆರೆಸಿ ತಲೆಗೆ ಹಚ್ಚಿದ 10 ನಿಮಿಷಕ್ಕೆ ಬೇರಿನಿಂದಲೇ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು! ಒಮ್ಮೆ ಟ್ರೈ ಮಾಡಿ ನೋಡಿ

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವಕಪ್ ನಡೆದಿದ್ದು, ಭಾರತದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳ ಜಮಾವಣೆ ಕಂಡುಬಂದಿತ್ತು. 10 ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೆಗಾ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಐಸಿಸಿ ವರದಿ ಪ್ರಕಾರ ಈ ಅವಧಿಯಲ್ಲಿ 25 ಲಕ್ಷ ಪ್ರೇಕ್ಷಕರು ಕ್ರಿಕೆಟ್ ನೋಡಲು ಬಂದಿದ್ದರು.

ವಿಶ್ವಕಪ್ 2023 ಅನ್ನು ಆಯೋಜಿಸುವ ಮೂಲಕ, ದೇಶವು ಭಾರತೀಯ ನಗರಗಳಲ್ಲಿ ಪ್ರವಾಸೋದ್ಯಮ, ವಸತಿ, ಪ್ರಯಾಣ ಮತ್ತು ಆಹಾರ ಇತ್ಯಾದಿಗಳಿಂದ ರೂ 861.4 ಮಿಲಿಯನ್ ಲಾಭವನ್ನು ಪಡೆದುಕೊಂಡಿದೆ. 11,637 ಕೋಟಿ ಗಳಿಕೆಯಿಂದ ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಮೆಗಾ ಈವೆಂಟ್‌ʼನಿಂದ ಸಾವಿರಾರು ಉದ್ಯೋಗಗಳು ಸಹ ಸೃಷ್ಟಿಯಾಗಿದ್ದು, ಈ ಎಲ್ಲದರ ಸಹಾಯದಿಂದ, 281.2 ಮಿಲಿಯನ್ ಡಾಲರ್ ಖಜಾನೆ ಸೇರಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: "ನನಗೆ ಬೇಕಿರೋದು ಅಷ್ಟೇ...": ಅಭಿಷೇಕ್- ಐಶ್ವರ್ಯಾ ಡಿವೋರ್ಸ್‌ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್‌ ಶಾಕಿಂಗ್‌ ಹೇಳಿಕೆ

ವಿಶ್ವಕಪ್ ಆತಿಥ್ಯದಲ್ಲಿ 48 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದ್ದು, ಇದರಿಂದಾಗಿ ಆರ್ಥಿಕತೆಯಲ್ಲಿ 18 ಮಿಲಿಯನ್ ಡಾಲರ್ ಲಾಭ ಕಂಡುಬಂದಿದೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡೈಸ್ ಪ್ರಕಾರ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ರಿಕೆಟ್‌ʼನಲ್ಲಿ ಭಾರತವು US $ 1.39 ಶತಕೋಟಿ ಲಾಭವನ್ನು ಗಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News