ನವದೆಹಲಿ: ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
Just as South Africa were beginning to build a partnership, Yuzvendra Chahal strikes!
Van der Dussen is bowled for 22.#TeamIndia #ProteaFire
FOLLOW #SAvIND LIVE 🔽 https://t.co/yx6Mkqsy3J pic.twitter.com/2eShD9NW8y
— Cricket World Cup (@cricketworldcup) June 5, 2019
ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಆಘಾತಕ್ಕೆ ಸಿಲುಕಿತು. ತಂಡದ ಮೊತ್ತ ೧೧ ರನ್ ಗಳಾಗುವಷ್ಟರಲ್ಲಿ ಹಸಿಂ ಆಮ್ಲಾ ಅವರ ವಿಕೆಟ್ ನ್ನು ಒಪ್ಪಿಸಿತು. ಇದಾದ ಬೆನ್ನಲ್ಲೇ ಕ್ವಿಂಟನ್ ಡಿಕಾಕ್ ಅವರ ವಿಕೆಟ್ ನ್ನು 24 ರನ್ ಗಳಾಗುವಷ್ಟರಲ್ಲಿ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡದ ಪರ ಜಸ್ಪ್ರಿತ್ ಬುಮ್ರಾ ಅವರು 5 ಓವರ್ ಗಳಲ್ಲಿ ಕೇವಲ 13 ರನ್ ನೀಡಿ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಹರಿಣಗಳ ವೇಗದ ರನ್ ಓಟಕ್ಕೆ ಕಡಿವಾಣ ಹಾಕಿದರು.
ಈಗ ಬಂದಿರುವ ವರದಿ ಪ್ರಕಾರ ದಕ್ಷಿಣ ಆಫ್ರಿಕಾ ತಂಡವು 23 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ.
Wicket number two 🔥🔥 https://t.co/lRzJ0SCgqP
— Cricket World Cup (@cricketworldcup) June 5, 2019
ಭಾರತ ತಂಡಕ್ಕೆ 2019 ರ ವಿಶ್ವಕಪ್ ಟೂರ್ನಿಯ ಮೊದಲು ಲೀಗ್ ಪಂದ್ಯವಾಗಿದ್ದು, ಈಗ ಈ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕಪ್ ಯಾನಕ್ಕೆ ಶುಭಾರಂಭ ಹಾಡಬೇಕಾಗಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತಕ್ಕೆ ಅಗ್ರಸ್ತಾನವಿದೆ. ಇತ್ತೀಚಿಗೆ ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮ್ಯಾಕ್ಲಂ ಅವರು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ವಿಶ್ವಕಪ್ ಗೆಲ್ಲುವಲ್ಲಿ ಫೆವರೆಟ್ ಎಂದು ಹೇಳಿದ್ದರು.