ಪ್ರಧಾನಿ ಮೋದಿಯಿಂದ ಕ್ರಿಕೆಟರ್ ಕ್ರಿಸ್ ಗೇಲ್ ಗೆ ವೈಯಕ್ತಿಕ ಮೆಸೇಜ್...!

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರು ಬುಧವಾರ 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ವೈಯಕ್ತಿಕ ಸಂದೇಶವನ್ನು ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ.

Written by - Zee Kannada News Desk | Last Updated : Jan 26, 2022, 03:27 PM IST
  • ಗೇಲ್ ಪ್ರಮುಖವಾಗಿ ತಮ್ಮ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೊಂದಿಗೆ ನಿಕಟ ಸಂಬಂಧದಿಂದಾಗಿ ಭಾರತದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
  • ಗೇಲ್ ಅವರು 103 ಟೆಸ್ಟ್, 301 ಏಕದಿನ ಮತ್ತು 79 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಿದ್ದಾರೆ.ಆದರೆ ಅವರು ಇನ್ನೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ.
ಪ್ರಧಾನಿ ಮೋದಿಯಿಂದ ಕ್ರಿಕೆಟರ್ ಕ್ರಿಸ್ ಗೇಲ್ ಗೆ ವೈಯಕ್ತಿಕ ಮೆಸೇಜ್...!  title=
File Photo

ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರು ಬುಧವಾರ 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ವೈಯಕ್ತಿಕ ಸಂದೇಶವನ್ನು ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್. "ನಾನು ಅವರ 73 ನೇ ಗಣರಾಜ್ಯೋತ್ಸವದಂದು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಪ್ರಧಾನಿ ಮೋದಿ ಅವರೊಂದಿಗಿನ ನನ್ನ ನಿಕಟ ವೈಯಕ್ತಿಕ ಸಂಬಂಧಗಳನ್ನು ಮತ್ತು ಭಾರತದ ಜನರೊಂದಿಗೆ ಪುನರುಚ್ಚರಿಸುವ ವೈಯಕ್ತಿಕ ಸಂದೇಶದಿಂದ ನಾನು ಎಚ್ಚರಗೊಂಡಿದ್ದೇನೆ" ಎಂದು ಗೇಲ್ (Chris Gayle) ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!

ಗೇಲ್ ಪ್ರಮುಖವಾಗಿ ತಮ್ಮ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೊಂದಿಗೆ ನಿಕಟ ಸಂಬಂಧದಿಂದಾಗಿ ಭಾರತದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ.

42 ವರ್ಷದ ಗೇಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಪರ ಆಡಿದ್ದಾರೆ.ಅದರಲ್ಲೂ ಅವರು ಆರ್ಸಿಬಿ ಪರವಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ.91 ಪಂದ್ಯ ಗಳಲ್ಲಿ ಅವರು 154.40 ಸ್ಟ್ರೈಕ್ ರೇಟ್‌ನಲ್ಲಿ 3420 ರನ್ ಗಳಿಸಿದ್ದಾರೆ.ಅವರು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಂತರ ಆರ್ಸಿಬಿ ಪರವಾಗಿ ಅತಿ ಹೆಚ್ಚು ರನ್ ಗಳಿಸಿರುವ ಮೂರನೇ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ಖುಲಾಯಿಸಲಿದೆ ಈ ಇಬ್ಬರು ಆಟಗಾರರ ಅದೃಷ್ಟ, ಸಿಗಲಿದೆ IPLನಲ್ಲಿ ಆಡುವ ಅವಕಾಶ

ಗೇಲ್ ಅವರು 103 ಟೆಸ್ಟ್, 301 ಏಕದಿನ ಮತ್ತು 79 ಟಿ20 ಪಂದ್ಯಗಳಲ್ಲಿ  ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಿದ್ದಾರೆ.ಆದರೆ ಅವರು ಇನ್ನೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News