ನಾನು ಅಮಾಯಕರ ಹತ್ಯೆಯನ್ನು ಎಂದಿಗೂ ಬೆಂಬಲಿಸಿಲ್ಲ- ಕ್ರಿಕೆಟರ್ ಮುತ್ತಯ್ಯ ಮುರಳಿದರನ್

 ಮುಂಬರುವ ಅವರ ಜೀವನಚರಿತ್ರೆ  800 ಕುರಿತ ಚಿತ್ರದ ವಿಚಾರವಾಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ  ಮುರಳಿದರನ್ ವಿವಾದದ ಕೇಂದ್ರದಲ್ಲಿದ್ದಾರೆ.ಅವರು ಮುಗ್ಧ ತಮಿಳು ಜನರ ಸಾವನ್ನು ಆಚರಿಸಿದ್ದಾರೆ ಮತ್ತು 2009 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ಆರೋಪ ಬಂದಿದೆ.

Last Updated : Oct 17, 2020, 01:32 PM IST
ನಾನು ಅಮಾಯಕರ ಹತ್ಯೆಯನ್ನು ಎಂದಿಗೂ ಬೆಂಬಲಿಸಿಲ್ಲ- ಕ್ರಿಕೆಟರ್ ಮುತ್ತಯ್ಯ ಮುರಳಿದರನ್ title=
file photo

ಚೆನ್ನೈ:  ಮುಂಬರುವ ಅವರ ಜೀವನಚರಿತ್ರೆ  800 ಕುರಿತ ಚಿತ್ರದ ವಿಚಾರವಾಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ  ಮುರಳಿದರನ್ ವಿವಾದದ ಕೇಂದ್ರದಲ್ಲಿದ್ದಾರೆ.ಅವರು ಮುಗ್ಧ ತಮಿಳು ಜನರ ಸಾವನ್ನು ಆಚರಿಸಿದ್ದಾರೆ ಮತ್ತು 2009 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ಆರೋಪ ಬಂದಿದೆ.

2009 ರಲ್ಲಿ ಯುದ್ಧದ ಅಂತ್ಯ ಮತ್ತು ಎರಡೂ ಕಡೆಗಳಲ್ಲಿನ ಪ್ರಾಣಹಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನ ಎಂದು ನಾನು ಹೇಳಿದ್ದೆ. ಇದನ್ನು 'ತಮಿಳರು ಕೊಲ್ಲಲ್ಪಟ್ಟ ದಿನ ಮತ್ತು ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವಾಗಿದೆ ಎಂದು ತಿರುಚಲಾಗುತ್ತಿದೆ.'ಮುಗ್ಧರನ್ನು ಕೊಲ್ಲುವುದನ್ನು ನಾನು ಎಂದಿಗೂ ಬೆಂಬಲಿಸಲಿಲ್ಲ ಮತ್ತು ನಾನು ಎಂದಿಗೂ ಮಾಡುವುದಿಲ್ಲ ಎಂದು ಅವರು ಹೇಳಿದರು.

ಮುರಳೀಧರನ್ ಅವರ ವಿಶಿಷ್ಟತೆಯನ್ನು ಶೇನ್ ವಾರ್ನ್ ಹೊಂದಿಲ್ಲ-ಮಹೇಲಾ ಜಯವರ್ಧನೆ

ತಮಿಳುನಾಡಿನ ಹಲವಾರು ತಮಿಳು ಗುಂಪುಗಳು ಮತ್ತು ರಾಜಕಾರಣಿಗಳು ನಟ ವಿಜಯ್ ಸೇತುಪತಿ ಮುರಳಿಧರನ್  ಚಿತ್ರವನ್ನು ಕೈ ಬಿಡಲು ಒತ್ತಾಯಿಸಿರುವುದರಿಂದ ಈಗ ಶ್ರೀ ಮುರಳೀಧರನ್ ಅವರ ಸ್ಪಷ್ಟೀಕರಣವು ಬಂದಿದೆ."ಯುದ್ಧದ ನೋವು ನನಗೆ ತಿಳಿದಿದೆ. ನಾನು 30 ವರ್ಷಗಳಿಗೂ ಹೆಚ್ಚು ಕಾಲ ಯುದ್ಧದ ಮಧ್ಯೆ ಶ್ರೀಲಂಕಾದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷದವನಿದ್ದಾಗ ನನ್ನ ತಂದೆಯನ್ನು ಥಳಿಸಲಾಯಿತು. ಅನೇಕ ಬಾರಿ ನಾವು ಬೀದಿಗಳಲ್ಲಿದ್ದೆವು" ಎಂದು ಅವರು ಹೇಳಿದರು.

ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!

ಲಂಕಾ ತಮಿಳರು ಸಾಯುತ್ತಿರುವಾಗ ಮುತ್ತಯ್ಯ ಪಿಟೀಲು ನುಡಿಸಿದರು. ತಮ್ಮ ಜನರು ಸಾಯುವಾಗ ಅವರು ನಗುವಾಗ ಕ್ರೀಡಾಪಟುವಾಗಿ ಸಾಧಿಸುವುದರಿಂದ ಏನು ಪ್ರಯೋಜನ? ನಮಗೆ ಸಂಬಂಧಪಟ್ಟಂತೆ, ನಂಬಿಕೆಗೆ ದ್ರೋಹ ಬಗೆದಿದ್ದಾರೆ" ಎಂದು ಹಿರಿಯ ನಿರ್ದೇಶಕ ಭಾರತಿರಾಜ ಹೇಳಿದ್ದಾರೆ.

ಇನ್ನೊಂದೆಡೆಗೆ ಪಿಎಂಕೆ ಮುಖ್ಯಸ್ಥ ಡಾ.ಪಿ.ರಾಮದಾಸ್, "ವಿಜಯ್ ಸೇತುಪತಿ ಈ ಚಿತ್ರವನ್ನು ತಿರಸ್ಕರಿಸಿದರೆ, ಅವರು ತಮಿಳು ಹೆಮ್ಮೆಯ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ; ಅವರು ಅದನ್ನು ಮಾಡಿದರೆ, ವಿರೋಧವನ್ನು ಧಿಕ್ಕರಿಸಿದರೆ, ಅವರು ದ್ರೋಹಿಗಳ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ" ಎಂದರು.

Trending News