ನವದೆಹಲಿ: ಟೀಮ್ ಇಂಡಿಯಾದ 'ಹಿಟ್ಮ್ಯಾನ್' ರೋಹಿತ್ ಶರ್ಮಾ (Rohit Sharma) ಅವರ ಹೆಸರನ್ನು ಈ ವರ್ಷ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದು ದೇಶದ ಕ್ರೀಡಾಪಟುಗಳಿಗೆ ನೀಡಲಾಗುವ ಅತಿದೊಡ್ಡ ಕ್ರೀಡಾ ಪ್ರಶಸ್ತಿ. ರೋಹಿತ್ ಜೊತೆಗೆ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು 2016ರ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಕೂಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Cricketer Rohit Sharma and wrestler Vinesh Phogat among four sportspersons picked for Rajiv Gandhi Khel Ratna by awards selection committee
— Press Trust of India (@PTI_News) August 18, 2020
ಈ ಶಿಫಾರಸಿನ ನಂತರ ಕೇಂದ್ರ ಕ್ರೀಡಾ ಸಚಿವಾಲಯದ ಅನುಮೋದನೆ ಇನ್ನೂ ಬಂದಿಲ್ಲ, ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಯ್ಕೆಯಾದ ಆಟಗಾರನಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. ರೋಹಿತ್ ಶರ್ಮಾ ಅವರ ಮೊದಲು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಅವರಿಗೆ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿದೆ.
TT player Manika Batra and Paralympic gold-medallist Mariyappan Thangavelu also recommended for Khel Ratna by awards selection committee
— Press Trust of India (@PTI_News) August 18, 2020
2019ರ ವರ್ಷ ರೋಹಿತ್ ಶರ್ಮಾ ಅವರ ಯಶಸ್ಸಿನಿಂದ ತುಂಬಿತ್ತು, ಅದರಲ್ಲೂ ವಿಶೇಷವಾಗಿ ಏಕದಿನ ಕ್ರಿಕೆಟ್‌ನಲ್ಲಿ ಅವರು ಸಾಕಷ್ಟು ಅಬ್ಬರಿಸಿದ್ದಾರೆ. ಕಳೆದ ವರ್ಷ ಅವರು ಏಕದಿನ ಪಂದ್ಯಗಳಲ್ಲಿ 7 ಶತಕಗಳನ್ನು ಒಳಗೊಂಡಂತೆ ಒಟ್ಟು 1,490 ರನ್ ಗಳಿಸಿದ್ದಾರೆ, 2019ರ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯವನ್ನು ಗೆದ್ದರು, ಈ ಮೆಗಾ ಪಂದ್ಯಾವಳಿಯಲ್ಲಿ ಅವರು 5 ಶತಕಗಳನ್ನು ಗಳಿಸಿದರು, ಇದು ಕೂಡ ಒಂದು ದಾಖಲೆಯಾಗಿದೆ.
ಜೀವನದ ಈ ಒಂದು ಹೊಡೆತ ಕೆ.ಎಲ್. ರಾಹುಲ್ ಅವರ ಚಿಂತನೆಯನ್ನೇ ಬದಲಾಯಿಸಿದೆ
2020ರ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಕಳೆದ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಗಳಿಸಿದ ಕ್ರೀಡಾಪಟುಗಳನ್ನು ರಾಷ್ಟ್ರಪತಿಗಳು ಗೌರವಿಸಲಿದ್ದಾರೆ. ಈ ದಿನ ಆಟಗಾರರಿಗೆ ಅರ್ಜುನ ಪ್ರಶಸ್ತಿ ಮತ್ತು ಅತ್ಯುತ್ತಮ ಆಟಗಾರನಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಇದಲ್ಲದೆ ಅತ್ಯುತ್ತಮ ಕೋಚ್‌ಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ.