IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!

ಇದರ ಹೊರತಾಗಿ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ಎಂಬ ಎರಡು ಸ್ಥಾನಗಳಿದ್ದು, ಆಟಗಾರರ ನಡುವೆ ಈ ಗರಿಮೆ ಪಡೆದುಕೊಳ್ಳಲು ಪೈಪೋಟಿ ನಡೆಯುತ್ತವೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ಗೆ ಮಹತ್ವದ ಸ್ಥಾನವಿದೆ. ಅಷ್ಟಕ್ಕೂ ಏನಿದು ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌. ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೇಲ್ಸ್‌.

Written by - Bhavishya Shetty | Last Updated : May 23, 2022, 09:13 AM IST
  • ಐಪಿಎಲ್‌ನಲ್ಲಿದೆ ಆರೆಂಜ್‌ ಕ್ಯಾಪ್‌-ಪರ್ಪಲ್‌ ಕ್ಯಾಪ್‌
  • ಆರೆಂಜ್‌ ಕ್ಯಾಪ್‌-ಪರ್ಪಲ್‌ ಕ್ಯಾಪ್‌ನ ಮಹತ್ವ ಇಲ್ಲಿದೆ
  • ಹೆಚ್ಚು ಬಾರಿ ಈ ಗೌರವ ಪಡೆದ ಆಟಗಾರರ ವರದಿ
IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!  title=
Indian Premier League

ಪ್ರಸ್ತುತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹದಿನೈದನೇ ಆವೃತ್ತಿಯು ನಡೆಯುತ್ತಿದೆ. ಕಳೆದ ದಿನ ಲೀಗ್ ಹಂತದ ಅಂತಿಮ ಪಂದ್ಯ ಮುಗಿದಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ಪಂಜಾಬ್‌ ಕಿಂಗ್ಸ್‌ ಗೆಲುವು ಸಾಧಿಸಿದೆ. ಇನ್ನುಮುಂದೆ ಟೂರ್ನಿಯ ಪ್ಲೇ ಆಫ್‌ ಪಂದ್ಯಗಳು ನಡೆಯಲಿದ್ದು, ಫೈನಲ್‌ಗೆ ಲಗ್ಗೆ ಇಡಲು ನಾಲ್ಕು ತಂಡಗಳು ಕಾದಾಟ ನಡೆಸಲಿವೆ. 

ಇದನ್ನು ಓದಿ: RR vs CSK : ಮೊಯಿನ್ ಅಲಿ ಸಿಡಿಸಿದ 6,4,4,4,4,4, ಬೌಂಡರಿ, Video ವೈರಲ್!

ಇದರ ಹೊರತಾಗಿ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ಎಂಬ ಎರಡು ಸ್ಥಾನಗಳಿದ್ದು, ಆಟಗಾರರ ನಡುವೆ ಈ ಗರಿಮೆ ಪಡೆದುಕೊಳ್ಳಲು ಪೈಪೋಟಿ ನಡೆಯುತ್ತವೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ಗೆ ಮಹತ್ವದ ಸ್ಥಾನವಿದೆ. ಅಷ್ಟಕ್ಕೂ ಏನಿದು ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌. ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೇಲ್ಸ್‌. 

ಆರೆಂಜ್‌ ಕ್ಯಾಪ್‌: 
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಸೀಸನ್‌ಗಳಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟ್‌ಮನ್‌ಗೆ ಆರೆಂಜ್‌ ಕ್ಯಾಪ್‌ನ್ನು ನೀಡಲಾಗುತ್ತದೆ. ಈ ಕ್ಯಾಪ್‌ ಗೆದ್ದ ಮೊದಲ ಆಟಗಾರ ನ್ಯೂಜಿಲೆಂಡ್‌ ಕ್ರಿಕೆಟರ್‌ ಬ್ರೆಂಡನ್ ಮೆಕಲಮ್. ಇನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಎಲ್ಲರಿಗಿಂತ ಹೆಚ್ಚು ಆರೆಂಜ್ ಕ್ಯಾಪ್ ಪಡೆದಿರುವ ಆಟಗಾರ. 2015, 2017 ಮತ್ತು 2019 ರಲ್ಲಿ ಮೂರು ಬಾರಿ ಪಡೆದುಕೊಂಡಿದ್ದಾರೆ. 

ಪರ್ಪಲ್‌ ಕ್ಯಾಪ್‌: 
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಟೂರ್ನಿಯಲ್ಲಿ ಯಾರು ಅತೀ ಹೆಚ್ಚು ವಿಕೆಟ್‌ ಪಡೆಯುತ್ತಾರೆಯೋ ಅವರಿಗೆ ಪರ್ಪಲ್‌ ಕ್ಯಾಪ್‌ ನೀಡಿ ಗೌರವಿಸಲಾಗುತ್ತದೆ. ಹರ್ಷಲ್ ಪಟೇಲ್ ಕಳೆದ ವರ್ಷ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್‌ ಗೌರವ ಪಡೆದಿದ್ದರು. ಭುವನೇಶ್ವರ್ ಕುಮಾರ್ ಮತ್ತು ಡ್ವೇನ್ ಬ್ರಾವೋ ಮಾತ್ರ ಎರಡು ಬಾರಿ ಪರ್ಪಲ್‌ ಕ್ಯಾಪ್‌ ಗಳಿಸಿದ್ದಾರೆ.  ಭುವನೇಶ್ವರ್ ಅವರು 2016 ಮತ್ತು 2017 ರಲ್ಲಿ ಕ್ರಮವಾಗಿ 23 ಮತ್ತು 27 ವಿಕೆಟ್‌ಗಳನ್ನು ಪಡೆದಿದ್ದು, ಸತತ ಎರಡು ಟೂರ್ನಿಗಳಲ್ಲಿ ಪರ್ಪಲ್‌ ಕ್ಯಾಪ್‌ ಗೆದ್ದ ಏಕೈಕ ಆಟಗಾರನಾಗಿದ್ದಾರೆ. 

ಈ ಬಾರಿಯ ಐಪಿಎಲ್‌ ಟೂರ್ನಿಯ ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ಯಾರ ಮುಡಿಯೇರಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದೀಗ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆರೆಂಜ್‌ ಕ್ಯಾಪ್‌ನ ಮೊದಲ ಎರಡು ಸ್ಥಾನವನ್ನು ಜೋಸ್‌ ಬಟ್ಲರ್‌ ಹಾಗೂ ಕೆ ಎಲ್‌ ರಾಹುಲ್‌ ಪಡೆದುಕೊಂಡಿದ್ದಾರೆ. ಇಬ್ಬರು ಕ್ರಮವಾಗಿ 623 ರನ್‌ ಮತ್ತು 537 ರನ್‌ ಬಾರಿಸಿದ್ದಾರೆ. ಲೀಗ್‌ ಮುಗಿಯುವಷ್ಟರಲ್ಲಿ ಯಾವ ಆಟಗಾರ ಹೆಚ್ಚು ರನ್‌ ಗಳಿಸುತ್ತಾನೋ ಅವರಿಗೆ ಆರೆಂಜ್‌ ಕ್ಯಾಪ್‌ ಲಭಿಸಲಿದೆ.

ಇದನ್ನು ಓದಿ: IPL 2022: ದೆಹಲಿ ಹೀನಾಯ ಸೋಲಿಗೆ ಕಾರಣ ತಿಳಿಸಿದ ರಿಷಭ್ ಪಂತ್..!

ಇನ್ನೊಂದೆಡೆ ಪರ್ಪಲ್‌ ಕ್ಯಾಪ್‌ ಜಿದ್ದಾಜಿದ್ದಿಯಲ್ಲಿ ಯುಜುವೇಂದ್ರ ಚಹಾಲ್‌ ಮೊದಲ ಸ್ಥಾನದಲ್ಲಿದ್ದು, ವಾನಿಂಡು ಹಸರಂಗಾ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಮವಾಗಿ 26 ಮತ್ತು 24 ವಿಕೆಟ್‌ ಪಡೆದುಕೊಂಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News