ಕ್ರಿಕೆಟ್ ನಲ್ಲಿ ಇಂತಹ ಶಾಟ್ ನೀವೆಂದಾದರೂ ನೋಡಿದ್ದೀರಾ?

ಕ್ರಿಕೆಟ್ ಅನಿಶ್ಚಿತತೆಗಳ ಆಟ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಆಟದ ವೇಳೆ ನಿತ್ಯ ಹಲವು ವಿಶಿಷ್ಟ ಹಾಗೂ ವಿನೂತನ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇಂತಹುದೇ ಒಂದು ಸನ್ನಿವೇಶಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಸಾಕ್ಷಿಯಾಗಿದೆ.

Last Updated : Dec 22, 2019, 06:49 PM IST
ಕ್ರಿಕೆಟ್ ನಲ್ಲಿ ಇಂತಹ ಶಾಟ್ ನೀವೆಂದಾದರೂ ನೋಡಿದ್ದೀರಾ? title=

ಪರ್ತ್: ಕ್ರಿಕೆಟ್ ಅನಿಶ್ಚಿತತೆಗಳ ಆಟ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಆಟದ ವೇಳೆ ನಿತ್ಯ ಹಲವು ವಿಶಿಷ್ಟ ಹಾಗೂ ವಿನೂತನ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇಂತಹುದೇ ಒಂದು ಸನ್ನಿವೇಶಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಸಾಕ್ಷಿಯಾಗಿದೆ.

ಬಿಗ್ ಬ್ಯಾಶ್ ಲೀಗ್ ನಲ್ಲಿ ಶನಿವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪರ್ತ್​ ಸ್ಕೊರ್ಚರ್ಸ್​ ಮತ್ತು ಮೆಲ್ಬೋರ್ನ್​ ರೆನೆಗೆಡ್ಸ್ ತಂಡಗಳ ಮಧ್ಯೆ ನಡೆದ ಪಂದ್ಯ ಒಂದು ರೋಚಕ ಹಾಗೂ ವಿಲಕ್ಷಣ ಅನುಭವಕ್ಕೆ ಸಾಕ್ಷಿಯಾಗಿದೆ. ಹೌದು, ಬಿಗ್ ಬ್ಯಾಶ್ ಲೀಗ್ ಈ ಕುರಿತಾದ ವಿಡಿಯೋವೊಂದನ್ನು ತನ್ನ ಟ್ವಿಟ್ಟರ್ ಖಾತೆಗೆ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್​ ರೆನೆಗೆಡ್ಸ್ ತಂಡ ನೀಡಿದ್ದ ಗುರಿಯನ್ನು ಪರ್ತ್​ ಸ್ಕೊರ್ಚರ್ಸ್ ತಂಡ ಬೆನ್ನಟ್ಟಿದೆ. ಈ ವೇಳೆ ಪಂದ್ಯದ ನಾಲ್ಕನೇ ಓವರ್ ನಲ್ಲಿ ಜೆ ರಿಚರ್ಡ್ಸನ್, ಸ್ಯಾಮ್ ಹಾರ್ಪರ್ ಅವರಿಗೆ ಬೌಲಿಂಗ್ ಮಾಡಿದ್ದು, ಅವರ ಈ ಬೌಲ್ ಬಳಿಕ ಇಡೀ ಕ್ರೀಡಾಂಗಣ ನಗೆಗಡಲಲ್ಲಿ ತೇಲಾಡಿದೆ. 

ಅಂತದ್ದೇನಿದೆ ಈ ವಿಡಿಯೋದಲ್ಲಿ
ತನ್ನ ಬೌಲಿಂಗ್ ನಲ್ಲಿ ಕ್ರೀಸ್ ಬಿಟ್ಟು ಚಂಡನ್ನು ಹೊಡೆಯಲು ಬಂದ ಮೆಲ್ಬೋರ್ನ್​ ರೆನೆಗೆಡ್ಸ್ ತಂಡದ ಆರಂಭಿಕ ಆಟಗಾರ ಸ್ಯಾಮ್ ಹಾರ್ಪರ್ ಅವರಿಗೆ ಕನ್ಫ್ಯೂಸ್ ಮಾಡಲು ಜೇ ರಿಚರ್ಡ್ಸನ್ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಚೆನನ್ನು ಪಿಚ್ ನಿಂದ ಹೊರಗೆ ಎಸದಿದ್ದಾರೆ. ಆದಾಗ್ಯೂ ಪಟ್ಟು ಬಿಡದ ಬ್ಯಾಟ್ಸ್ ಮ್ಯಾನ್ ಹಾರ್ಪರ್ ಚೆಂಡನ್ನು ಅಟ್ಟಾಡಿಸಿ, ಬೆನ್ನಟ್ಟಿ ಹೊಡೆದಿದ್ದಾರೆ.

ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಹಾರ್ಪರ್ ಅವರ ಈ ಹೊಡೆತಕ್ಕೆ ರನ್ ಬಾರದೆ ಇದ್ದರೂ ಕೂಡ ನಕ್ಕು ನಲಿದಿದ್ದಾರೆ. ಈ ಪಂದ್ಯದಲ್ಲಿ ಗೆಲುವಿಗಾಗಿ ಪರ್ತ್​ ಸ್ಕೊರ್ಚರ್ಸ್ ನೀಡಿದ್ದ 197 ರನ್ ಗಳ ಗುರಿಯನ್ನು ತಲುಪಲು ವಿಫಲವಾಗಿರುವ ಮೆಲ್ಬೋರ್ನ್​ ರೆನೆಗೆಡ್ಸ್ ತಂಡ 11 ರನ್ ಗಳಿಂದ ಸೋಲನ್ನು ಅನುಭವಿಸಿದೆ.

Trending News