MS Dhoni Angry Viral Video: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಅಂದ್ರೆ ಶಾಂತ ಸ್ವರೂಪದವರು ಎಂದೇ ಖ್ಯಾತಿ ಪಡೆದಿದ್ದಾರೆ. ಎಂತಹದ್ದೇ ಸಂದರ್ಭವಾದರೂ ಅದನ್ನು ಶಾಂತತೆಯಿಂದ ನಿಭಾಯಿಸುವುದು ಧೋನಿ ಗುಣ. ಅಂತಹ ಧೋನಿ ಇದೀಗ ಮೈದಾನದಲ್ಲಿಯೇ ಕೋಪಗೊಂಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ ಈ ವಿಡಿಯೋ ನೋಡಿದ್ರೆ ನಿಮಗೆ ಶಾಕ್ ಆಗೋದು ಖಚಿತ.
ಇದನ್ನೂ ಓದಿ; CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!
ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಪಂದ್ಯದಲ್ಲಿ ಈ ರೀತಿ ವರ್ತಿಸಿದ್ದಾರೆ. ಪಂದ್ಯದ ಮಧ್ಯೆಯೇ ತನ್ನ ಸಹ ಆಟಗಾರರೊಬ್ಬರ ಮೇಲೆ ತಾಳ್ಮೆ ಕಳೆದುಕೊಂಡು ಕಿರುಚುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಅಂದಿನಿಂದ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಹಿಂದೆಂದೂ ಕಂಡಿರದ ಈ ದೃಶ್ಯವನ್ನು ನೋಡಿದ ಅಭಿಮಾನಿಗಳಿಗೆ ಶಾಕ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಸಿ ಎಸ್ ಕೆ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.
Angry Mahi #MSDhoni pic.twitter.com/0AeK3kAqJs
— T😎mCruise (@KingofAndhra7) April 25, 2023
ವೀಡಿಯೋದಲ್ಲಿ ಎಂಎಸ್ ಧೋನಿ ಮೈದಾನದಲ್ಲಿ ನಡೆದಿರುವ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಹ ಆಟಗಾರನ ಮೇಲೆ ಕಿರುಚಲು ಪ್ರಾರಂಭಿಸಿದ್ದಾರೆ ಧೋನಿ. ಕ್ಯಾಪ್ಟನ್ ಕೂಲ್ ಅವರ ಮುಖ ಮತ್ತು ಹಾವ-ಭಾವ ನೋಡಿದಾಗಲೇ ಕೋಪಗೊಂಡಿದ್ದಾರೆ ಎಂದು ತಿಳಿದುಬರುತ್ತದೆ.
ಐಪಿಎಲ್ 2023ರಲ್ಲಿ ಎಂ ಎಸ್ ಧೋನಿ ಅವರ ಅಸಾಧಾರಣ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಕೌಶಲ್ಯ, ಮೈದಾನದಲ್ಲಿ ಅವರ ಉಪಸ್ಥಿತಿಯು ಅಭಿಮಾನಿಗಳನ್ನು ಆಕರ್ಷಿಸುವ ಕೇಂದ್ರಬಿಂದುವಾಗಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್’ನಿಂದ ದೂರವಿದ್ದರೂ ಮತ್ತು ಸುಮಾರು ಮೂರು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾಗವಹಿಸದಿದ್ದರೂ ಧೋನಿಯ ಮೇಲಿನ ಕ್ರೇಜ್ ಆಗಲಿ, ಅವರ ಆಟದ ಶೈಲಿಯಾಗಲಿ ಕಡಿಮೆಯಾಗಿಲ್ಲ.
ಆದರೆ ಎಂ ಎಸ್ ಧೋನಿ ಸದ್ಯ ಸಿ ಎಸ್ ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಸಾಮಾನ್ಯವಾಗಿ ಇನ್ನಿಂಗ್ಸ್ ನ ಅಂತ್ಯದ ವೇಳೆಗೆ ಮೈದಾನಕ್ಕೆ ಪ್ರವೇಶಿಸುತ್ತಾರೆ. ಇನ್ನೊಂದೆಡೆ ನಿರೀಕ್ಷೆಯಂತೆ ಅವರ ವಿಕೆಟ್ ಕೀಪಿಂಗ್ ಅತ್ಯುತ್ತಮವಾಗಿದೆ.
ಇಂದು ಚೆನ್ನೈ-ರಾಜಸ್ಥಾನ ಮುಖಾಮುಖಿ:
ಗುರುವಾರ ಅಂದರೆ ಏಪ್ರಿಲ್ 27 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ 37 ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವೆ ನಡೆಯಲಿದೆ. ಭಾರೀ ರೋಚಕತೆ ಸೃಷ್ಟಿಸಿದ ಈ ಪಂದ್ಯವು ದಿನಾಂಕ ಮತ್ತು ಸಮಯ: ಸಂಜೆ 7:30 ಕ್ಕೆ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ. ಚೆನ್ನೈ ತಂಡದ ಬ್ಯಾಟಿಂಗ್ ಘಟಕವು ವಿಶೇಷವಾಗಿ ಪ್ರಭಾವಶಾಲಿಯಾಗಿದೆ. ಡೈನಾಮಿಕ್ ಜೋಡಿಗಳಾದ ಡೆವೊನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ಕ್ರಮಾಂಕವು ತಂಡಕ್ಕೆ ಮೇಲುಗೈ ಸಾಧಿಸಲು ಸಹಾಯ ಮಾಡುತ್ತಿದೆ.
ಇಂದಿನ ಪಂದ್ಯದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಪಟ್ಟಿ ಇಲ್ಲಿದೆ:
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್:
ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ), ಡಿ ಸಿ ಜುರೆಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಸಂದೀಪ್ ಶರ್ಮಾ
ಇದನ್ನೂ ಓದಿ; IPL 2023: ಮೈದಾನದಲ್ಲಿಯೇ ಭುವಿ ಕಾಲಿಗೆ ಬಿದ್ದ ಡೇವಿಡ್ ವಾರ್ನರ್! ಯಾಕೆ ಗೊತ್ತಾ? ಈ ವಿಡಿಯೋ ನೋಡಿ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್:
ರುತುರಾಜ್ ಗಾಯಕ್‌ವಾಡ್, ಡೆವೊನ್ ಕಾನ್ವೆ, ಅಂಬಾಟಿ ರಾಯುಡು, ಅಜಿಂಕ್ಯ ರಹಾನೆ, ಎಂ ಎಂ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ (ನಾಯಕ ಮತ್ತು ವಿ ಕೀ), ಟಿಯು ದೇಶಪಾಂಡೆ, ಮತೀಶ ಪತಿರಣ, ಮಹಿಷ್ ತೀಕ್ಷಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ