Hardik Pandya: ಹಾರ್ದಿಕ್ ಪಾಂಡ್ಯ ಮರು ಎಂಟ್ರಿಯಿಂದ ಈ ಬೆಸ್ಟ್ ಪ್ಲೇಯರ್ ಕ್ರಿಕೆಟ್ ಜೀವನ ಅಂತ್ಯ?

Venkatesh Iyer: ಮುಂಬರುವ ಕಿವೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಈ ಪ್ರವಾಸಕ್ಕಾಗಿ ಭಾರತದ ಆಟಗಾರರು ನ್ಯೂಜಿಲೆಂಡ್ ತಲುಪಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಪಾಂಡ್ಯ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ನಾಯಕನಾಗಿ ಮುನ್ನಡೆಸಿ ಕಪ್‌ ಕೊಡುಗೆಯಾಗಿ ನೀಡಿದ್ದರು.

Written by - Bhavishya Shetty | Last Updated : Nov 14, 2022, 12:05 PM IST
    • ಸದ್ಯ ಹಾರ್ದಿಕ್ ಟೀಂ ಇಂಡಿಯಾಗೆ ಮರು ಪ್ರವೇಶಿಸಿದ್ದಾರೆ
    • ಪಾಂಡ್ಯ ತಂಡಕ್ಕೆ ಮರಳಿದ ನಂತರ ವೆಂಕಟೇಶ್ ಅಯ್ಯರ್ ಕಣ್ಮರೆಯಾದಂತಿದೆ
    • ಐಪಿಎಲ್ 2022 ರ ನಂತರ ಅಯ್ಯರ್ ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯ ಆಡಿಲ್ಲ
Hardik Pandya: ಹಾರ್ದಿಕ್ ಪಾಂಡ್ಯ ಮರು ಎಂಟ್ರಿಯಿಂದ ಈ ಬೆಸ್ಟ್ ಪ್ಲೇಯರ್ ಕ್ರಿಕೆಟ್ ಜೀವನ ಅಂತ್ಯ? title=
Hardik Pandya

Venkatesh Iyer: ಟಿ 20 ವಿಶ್ವಕಪ್ 2022 ರ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲಿನ ನಂತರ ಬಿಸಿಸಿಐ ಪರಿಶೀಲನೆ ಮಾಡಲು ಮುಂದಾದಂತೆ ತೋರುತ್ತಿದೆ. ಮುಂಬರುವ ವಿಶ್ವಕಪ್ ದೇಶದಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ಈಗಿನಿಂದಲೇ ಮೈದಾನ ಸಿದ್ಧಗೊಳ್ಳುತ್ತಿದೆ. ಟಿ20ಯಿಂದ ಹಿರಿಯರಿಗೆ ವಿಶ್ರಾಂತಿ ನೀಡಿ ಏಕದಿನ ಪಂದ್ಯಗಳತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದೆ. ಆದರೆ ನ್ಯೂಜಿಲೆಂಡ್ ಪ್ರವಾಸದಿಂದ ಕೆಲವು ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ.

ಮುಂಬರುವ ಕಿವೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಈ ಪ್ರವಾಸಕ್ಕಾಗಿ ಭಾರತದ ಆಟಗಾರರು ನ್ಯೂಜಿಲೆಂಡ್ ತಲುಪಿದ್ದಾರೆ. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಪಾಂಡ್ಯ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ನಾಯಕನಾಗಿ ಮುನ್ನಡೆಸಿ ಕಪ್‌ ಕೊಡುಗೆಯಾಗಿ ನೀಡಿದ್ದರು.

ಇದನ್ನೂ ಓದಿ: “IPL ಬಂದಾಗಿನಿಂದ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ”: ಪಾಕ್ ಮಾಜಿ ವೇಗಿಯ ಈ ಮಾತು ನಿಜವೇ?

ಸದ್ಯ ಹಾರ್ದಿಕ್ ಟೀಂ ಇಂಡಿಯಾಗೆ ಮರು ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಅಬ್ಬರದ ಪ್ರದರ್ಶನದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಳಿದ ಹಿರಿಯರ ನಂತರ ಟೀಂ ಇಂಡಿಯಾದ ನಾಯಕನಾಗುವ ಅವಕಾಶ ಸಿಕ್ಕಿದೆ.

ಆದರೆ ಪಾಂಡ್ಯ ತಂಡಕ್ಕೆ ಮರಳಿದ ನಂತರ ಮತ್ತೊಬ್ಬ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಕಣ್ಮರೆಯಾದಂತಿದೆ. ಐಪಿಎಲ್ 2022 ರ ನಂತರ, ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ವೆಂಕಟೇಶ್ ಅಯ್ಯರ್ ಕೂಡ ಹಾರ್ದಿಕ್ ಪಾಂಡ್ಯ ಅವರಂತೆ ಹೆವಿ ಹಿಟ್ಟರ್ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಅವಕಾಶ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ.

ಗಾಯದ ಕಾರಣ ಹಾರ್ದಿಕ್ ಪಾಂಡ್ಯ 2021 ರ ಟಿ 20 ವಿಶ್ವಕಪ್‌ನಿಂದ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆ ವೇಳೆ ಪಾಂಡ್ಯ ಬದಲು ವೆಂಕಟೇಶ್ ಅಯ್ಯರ್ ತಂಡ ಪ್ರವೇಶಿಸಿದ್ದರು. ಅಯ್ಯರ್ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅಯ್ಯರ್ ಬಂದರೆ ಹಾರ್ದಿಕ್ ಪಾಂಡ್ಯಗೆ ಕಠಿಣ ಪೈಪೋಟಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ವರ್ಷದ ಐಪಿಎಲ್ ನಲ್ಲಿ ಅಯ್ಯರ್ ದಯನೀಯವಾಗಿ ವಿಫಲರಾಗಿದ್ದರು. ಸದ್ಯ ಅವರ ದಾರಿಗಳು ಮುಚ್ಚಲ್ಪಟ್ಟಿವೆ. ಅದೇ ಸಮಯದಲ್ಲಿ ಪಾಂಡ್ಯ ತಮ್ಮ ತಂಡಕ್ಕೆ ಐಪಿಎಲ್ ಕಪ್ ನೀಡಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ: T20 World Cup Final weather update: ವಿಶ್ವಕಪ್ ಫೈನಲ್ ಪಂದ್ಯಕ್ಕೆ ವರುಣನ ಭೀತಿ: ಮಳೆ ಬಂದರೆ ಪ್ರಶಸ್ತಿ ಗೆಲ್ಲೋರ್ಯಾರು ಗೊತ್ತಾ?

ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾ ಪರ 9 ಟಿ20 ಪಂದ್ಯಗಳನ್ನಾಡಿದ್ದು 133 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಂತರ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ಸರಣಿಗೆ ಆಯ್ಕೆಯಾದರೂ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಈ ಯುವ ಆಟಗಾರನನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಗಾರರು ಪರಿಗಣಿಸಿರಲಿಲ್ಲ. ಆದರೆ ಭವಿಷ್ಯದಲ್ಲಿ ಅಯ್ಯರ್ ಖಂಡಿತವಾಗಿಯೂ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಬ್ಯಾಟಿಂಗ್ ಹೊರತಾಗಿ ಬೌಲಿಂಗ್ ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News