'ಹಾರ್ದಿಕ್ ಪಾಂಡ್ಯ ಭವಿಷ್ಯದ ಭಾರತ ಕ್ರಿಕೆಟ್ ತಂಡದ ನಾಯಕ'

ಮೊದಲ ಋತುವಿನಲ್ಲಿಯೇ ಗುಜರಾತ್ ಟೈಟಾನ್ಸ ತಂಡಕ್ಕೆ ಐಪಿಎಲ್ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಬಗ್ಗೆ ಈಗ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ, ಹೌದು ಈಗ ಮಾಜಿ ಕ್ರಿಕೆಟ್ ಆಟಗಾರರು ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ.

Written by - Zee Kannada News Desk | Last Updated : May 30, 2022, 06:48 PM IST
  • ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್ರೌಂಡ್ ಪ್ರದರ್ಶನದಿಂದಾಗಿ ಗಮನ ಸೆಳೆದಿದ್ದರು.
  • ಆ ಮೂಲಕ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
'ಹಾರ್ದಿಕ್ ಪಾಂಡ್ಯ ಭವಿಷ್ಯದ ಭಾರತ ಕ್ರಿಕೆಟ್ ತಂಡದ ನಾಯಕ'  title=
file photo

ನವದೆಹಲಿ: ಮೊದಲ ಋತುವಿನಲ್ಲಿಯೇ ಗುಜರಾತ್ ಟೈಟಾನ್ಸ ತಂಡಕ್ಕೆ ಐಪಿಎಲ್ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಬಗ್ಗೆ ಈಗ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ, ಹೌದು ಈಗ ಮಾಜಿ ಕ್ರಿಕೆಟ್ ಆಟಗಾರರು ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ.

ಈಗ ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರು ಪಾಂಡ್ಯ ಅವರನ್ನು ಭವಿಷ್ಯದ ನಾಯಕ ಎಂದು ಪರಿಗಣಿಸಿದ್ದಾರೆ.ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್ರೌಂಡ್ ಪ್ರದರ್ಶನದಿಂದಾಗಿ ಗಮನ ಸೆಳೆದಿದ್ದರು.ಆ ಮೂಲಕ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಇದನ್ನೂ ಓದಿ : Type 2 Diabetes: ಈ ಬೆಳಗಿನ ಪಾನೀಯ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಿದ್ದಂತೆ!

ಈಗಾಗಲೇ ರೋಹಿತ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಮೂರು ಸ್ವರೂಪಗಳಲ್ಲಿ ಮುನ್ನೆಡಿಸುತ್ತಿದ್ದಾರೆ. ಈಗ ಐಪಿಎಲ್ ಟೂರ್ನಿ ಯುದ್ಧಕ್ಕೂ ಹಾರ್ದಿಕ್ ಪಾಂಡ್ಯ ಅವರ ನಡತೆಯಿಂದಾಗಿ ಮಾಜಿ ಆಟಗಾರರ ಗಮನಸೆಳೆದಿದ್ದಾರೆ.ಈ ಹಿನ್ನೆಲೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಏರಿದ ನಂತರ ಟ್ವೀಟ್ ಮಾಡಿರುವ ಮೈಕಲ್ ವಾನ್ ಅವರು "ಹೊಸ ಫ್ರಾಂಚೈಸ್ ಅದ್ಭುತ ಸಾಧನೆಯನ್ನು ಮಾಡಿದೆ. ಭಾರತಕ್ಕೆ ಒಂದೆರಡು ವರ್ಷಗಳಲ್ಲಿ ನಾಯಕನ ಅಗತ್ಯ ಬಿದ್ದರೆ, ಹಾರ್ದಿಕ್ ಪಾಂಡ್ಯ ಅವರ ಈ ಹಿಂದಿನ ಹಿನ್ನೆಲೆಯನ್ನು ನೋಡುವುದಿಲ್ಲ, ವೆಲ್ ಡನ್ ಗುಜರಾತ್' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗುಜರಾತ್ ಟೈಟಾನ್ಸ್‌ನ ಮುಖ್ಯ ಕೋಚ್ ಆಶಿಶ್ ನೆಹ್ರಾ ಕೂಡ ಗುಜರಾತ್ ತಂಡವು ಪ್ರಶಸ್ತಿ ಗೆದ್ದ ನಂತರ ಮಾತನಾಡಿ 'ಯಾವುದೇ ತಂಡವು ತನ್ನ ಮೊದಲ ಋತುವಿನಲ್ಲಿಯೇ ಪ್ರಶಸ್ತಿಯನ್ನು ಗಳಿಸುವುದು ಸುಲಭದ ಸಂಗತಿಯಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡದ ಆಟಗಾರರು ನಿಜವಾಗಿಯೂ ಅದ್ಬುತವಾಗಿ ಗೆದ್ದಿದ್ದಾರೆ' ಎಂದು ಹೇಳಿದರು.

ಇದನ್ನೂ ಓದಿ : ಈ ಅನ್ನವನ್ನು ಸೇವಿಸುವುದರಿಂದ ಹೆಚ್ಚುವುದಿಲ್ಲ ದೇಹ ತೂಕ .! ಕರಗುತ್ತದೆ belly fat

'ಇದು ಸಂತೋಷದ ಭಾವನೆ, ಆದರೆ ಟ್ರೋಫಿಯನ್ನು ಹೊರತುಪಡಿಸಿ, ಹೆಚ್ಚು ಮುಖ್ಯವಾದ ವಿಷಯವೆಂದರೆ ನಾವು ಆಡಿದ ರೀತಿ, ನಾವು ಅರ್ಹತೆ ಗಳಿಸಿದ ರೀತಿ. ಇದು ನೋಡಲು ತುಂಬಾ ಸಂತೋಷಕರವಾಗಿತ್ತು. ಮೊದಲ ವರ್ಷ ಸುಲಭವಲ್ಲ, ಮತ್ತು ಎಲ್ಲಾ ಹುಡುಗರು ನಿಜವಾಗಿಯೂ ಚೆನ್ನಾಗಿ ಆಡಿದರು ಮತ್ತು ಹಾರ್ದಿಕ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಲಾಯಿತು" ಎಂದು ನೆಹ್ರಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News