ಜಹೀರ್ ಖಾನ್ ಬರ್ತ್ ಡೇ ಗೆ ಕೋರಿದ 'ಹಾರ್ದಿಕ್ 'ಶುಭಾಶಯಕ್ಕೆ ಅಭಿಮಾನಿಗಳು ಗರಂ

 ಹುಟ್ಟುಹಬ್ಬದ ನಿಮಿತ್ತ ಜಹೀರ್ ಖಾನ್ ಗೆ ಆಲ್ ರೌಂಡರ್ ಹಾರ್ದಿಕ್  ಪಾಂಡ್ಯ ಶುಭಾಶಯ ಕೋರಿರುವ ರೀತಿಗೆ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.

Last Updated : Oct 9, 2019, 06:37 PM IST
 ಜಹೀರ್ ಖಾನ್ ಬರ್ತ್ ಡೇ ಗೆ ಕೋರಿದ 'ಹಾರ್ದಿಕ್ 'ಶುಭಾಶಯಕ್ಕೆ ಅಭಿಮಾನಿಗಳು ಗರಂ   title=

ನವದೆಹಲಿ:  ಹುಟ್ಟುಹಬ್ಬದ ನಿಮಿತ್ತ ಜಹೀರ್ ಖಾನ್ ಗೆ ಆಲ್ ರೌಂಡರ್ ಹಾರ್ದಿಕ್  ಪಾಂಡ್ಯ ಶುಭಾಶಯ ಕೋರಿರುವ ರೀತಿಗೆ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ.

ಸೋಮವಾರ 41 ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಎಡಗೈ ವೇಗಿ ಜಹೀರ್ ಖಾನ್, ತಮ್ಮ ಮಾಜಿ ತಂಡದ ಆಟಗಾರರು ಮತ್ತು ಪ್ರಸ್ತುತ ಭಾರತೀಯ ಆಟಗಾರರು, ಪಾಂಡ್ಯ ಅವರ ಆಶಯವನ್ನು ಒಳಗೊಂಡಂತೆ ಟ್ವಿಟ್ಟರ್ನಲ್ಲಿ ಶುಭಾಶಯಗಳನ್ನು ವ್ಯಕ್ತಪಡಿಸಿದರು. 

ಇದೇ ವೇಳೆ ಹಾರ್ದಿಕ್ ಪಾಂಡ್ಯ ಕೂಡ ಶುಭಾಷಯ ಕೋರಿ 'ಜನ್ಮದಿನದ ಶುಭಾಶಯಗಳು ಜಾಕ್... ನಾನು ಇಲ್ಲಿ ಜಹೀರ್ ಖಾನ್ ಮಾಡಿದಂತೆ ನೀವು ಅದನ್ನು ಪಾರ್ಕ್ ಲೈನ್ ನಿಂದ ಹೊಡೆಯುತ್ತಿರಿ ಎಂದು ಭಾವಿಸುತ್ತೇವೆ" ಎಂದು ಪಾಂಡ್ಯ ಟ್ವೀಟ್ ಮಾಡಿದ್ದು, ಈ ಟ್ವೀಟ್ ಜೊತೆ ಅವರು ಪಂದ್ಯವೊಂದರಲ್ಲಿ ಜಹೀರ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಇದಕ್ಕೆ ಹೆಚ್ಚಿನ ಸಂಖ್ಯೆಯ ನೆಟಿಜನ್‌ಗಳು ಪಾಂಡ್ಯ ಅವರ ಶುಭಾಶಯ ಅಗೌರವ ಮತ್ತು ಮುಜುಗರ ತರುವಂತದ್ದು ಕಿಡಿ ಕಾರಿದ್ದಾರೆ. ಅದಾಗ್ಯೂ ಜಹೀರ್ ಖಾನ್ ಇದಕ್ಕೆ ಹಾಸ್ಯಮಯವಾಗಿ ಉತ್ತರಿಸಿ ಶುಭಾಶಯಗಳಿಗೆ ಧನ್ಯವಾದಗಳು ಹಾರ್ದಿಕ್ ಪಾಂಡ್ಯ ನನ್ನ ಬ್ಯಾಟಿಂಗ್ ಕೌಶಲ್ಯವು ಎಂದಿಗೂ ನಿಮ್ಮಂತೆ ಉತ್ತಮವಾಗಿರಲು ಸಾಧ್ಯವಿಲ್ಲ, ಆದರೆ ಹುಟ್ಟುಹಬ್ಬವು ಇದರ ನಂತರ ನಾನು ಎಸೆದ ಎಸೆತದಷ್ಟೇ ಉತ್ತಮವಾಗಿತ್ತು ಎಂದು ಜಹೀರ್ ಉತ್ತರಿಸಿದ್ದಾರೆ. 

ಭಾರತೀಯ ವೇಗಿ ಖಾನ್ ಭಾರತದ ಪರವಾಗಿ 92 ಟೆಸ್ಟ್ ಮತ್ತು 200 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
 

Trending News