Hardik Pandya: 5 ಕೋಟಿ ರೂ. ಬೆಲೆಯ ವಾಚ್‌ಗಳು ವಶಕ್ಕೆ, ಹಾರ್ದಿಕ್ ಪಾಂಡ್ಯ ಹೇಳಿದ್ದೇನು..?

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪಾಂಡ್ಯ, ಕಸ್ಟಮ್ಸ್ ಅಧಿಕಾರಿಗಳು ಕೈಗಡಿಯಾರಗಳನ್ನು ವಶಕ್ಕೆ ಪಡೆದಿರುವುದನ್ನು ಅಲ್ಲಗಳೆದಿದ್ದಾರೆ.

Written by - Puttaraj K Alur | Last Updated : Nov 16, 2021, 12:03 PM IST
  • ಹಾರ್ದಿಕ್ ಪಾಂಡ್ಯರ ದುಬಾರಿ ಬೆಲೆಯ 2 ಕೈಗಡಿಯಾರ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು
  • ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ 5 ಕೋಟಿ ರೂ. ಮೌಲ್ಯದ ವಾಚ್‌ಗಳು ವಶಕ್ಕೆ
  • ನನ್ನ ಬಳಿ ಇದ್ದಿದ್ದು 1.50 ಕೋಟಿ ರೂ. ಮೌಲ್ಯದ ಕೈಗಡಿಯಾರಗಳು ಎಂದು ಹಾರ್ದಿಕ್ ಪಾಂಡ್ಯ ಸ್ಪಷ್ಟನೆ
Hardik Pandya: 5 ಕೋಟಿ ರೂ. ಬೆಲೆಯ ವಾಚ್‌ಗಳು ವಶಕ್ಕೆ, ಹಾರ್ದಿಕ್ ಪಾಂಡ್ಯ ಹೇಳಿದ್ದೇನು..? title=
ಕೈಗಡಿಯಾರಗಳ ಬಗ್ಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ

ನವದೆಹಲಿ: ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya)ರಿಗೆ ಸೇರಿದ ಸುಮಾರು 5 ಕೋಟಿ ರೂ. ಮೌಲ್ಯದ 2 ಕೈಗಡಿಯಾರಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿಗಳನ್ನು ತಳ್ಳಿಹಾಕಿರುವ ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ತಾವಾಗಿಯೇ ಬೆಲೆಬಾಳುವ ವಾಚ್‌ಗಳನ್ನು ಪರಿಶೀಲಿಸಲು ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಲೀಗ್ ಹಂತದಲ್ಲಿಯೇ ಟಿ-20ವಿಶ್ವಕಪ್(T20 World Cup 2021) ಅಭಿಯಾನ ಮುಗಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ. ಅದರಂತೆ ಪಾಂಡ್ಯ ಭಾನುವಾರ ತಡರಾತ್ರಿ ದುಬೈನಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Mumbai Airport)ಕ್ಕೆ ಆಗಮಿಸಿದ್ದರು. ಈ ವೇಳೆ ಪಾಂಡ್ಯರನ್ನು ತಡೆದ ಕಸ್ಟಮ್ಸ್ ಅಧಿಕಾರಿಗಳು 5 ಕೋಟಿ ರೂ. ಮೌಲ್ಯದ 2 ವಾಚ್‌ಗಳನ್ನು ವಶಕ್ಕೆ ಪಡೆದಿದ್ದರು. ಪಾಂಡ್ಯ ಬಳಿ ದುಬಾರಿ ವಾಚ್‌ಗಳ ಬಿಲ್ ಇರಲಿಲ್ಲ. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: 2024 ರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯಕ್ಕೆ ಯುಎಸ್ ಆಯ್ಕೆ ಸಾಧ್ಯತೆ

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪಾಂಡ್ಯ, ಕಸ್ಟಮ್ಸ್ ಅಧಿಕಾರಿಗಳು(Customs Department) ಕೈಗಡಿಯಾರಗಳನ್ನು ವಶಕ್ಕೆ ಪಡೆದಿರುವುದನ್ನು ಅಲ್ಲಗಳೆದಿದ್ದಾರೆ. ‘ದುಬೈ(Dubai)ನಿಂದ ನಾನು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದೆ. ನನ್ನ ಲಗೇಜ್ ತೆಗೆದುಕೊಂಡು ಸ್ವತಃ ನಾನೇ ಕಸ್ಟಮ್ಸ್ ಕೌಂಟರ್ ನತ್ತ ತೆರಳಿದ್ದೆ. ವಿದೇಶದಿಂದ ತಂದಿರುವ ವಸ್ತುಗಳಿಗೆ ಸೀಮಾ ಸುಂಕ ಪಾವತಿಸಲು ನಾನು ಹೋಗಿದ್ದೆ. ದುಬೈನಿಂದ ಖರೀದಿಸಿರುವ ಎಲ್ಲ ವಸ್ತುಗಳ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಅವುಗಳಿಗೆ ಪಾವತಿಸಬೇಕಿರುವ ಸೀಮಾ ಸುಂಕವನ್ನು ಪಾವತಿಸುತ್ತೇನೆ. ವಸ್ತುಗಳ ಖರೀದಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕಸ್ಟಮ್ಸ್ ಅಧಿಕಾರಿಗಳು ಕೇಳಿದ್ದರು, ನಾನು ಒದಗಿಸಿದ್ದೇನೆ’ ಅಂತಾ ಪಾಂಡ್ಯ ಬರೆದುಕೊಂಡಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಬಳಿ 5 ಕೋಟಿ ರೂ. ಮೌಲ್ಯದ 2 ದುಬಾರಿ ವಾಚ್(Watches)ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆಂದು ಸುದ್ದಿಯಾಗಿದೆ. ಆದರೆ ಇದು ಸುಳ್ಳು. ನನ್ನ ಬಳಿ ಇರುವುದು 5 ಕೋಟಿ ರೂ. ಬೆಲೆಯ ಕೈಗಡಿಯಾರಗಳಲ್ಲ, ಒಂದೂವರೆ ಕೋಟಿ ರೂ. ಮೌಲ್ಯದ್ದು’ ಎಂದು ಸ್ಪಷ್ಟನೆ ನೀಡಿದ್ದಾರೆ. ‘ನಾನು ದೇಶದ ಕಾನೂನು ಪಾಲಿಸುವ ಪ್ರಜೆ. ಸರ್ಕಾರದ ಎಲ್ಲ ಏಜೆನ್ಸಿಗಳನ್ನು ನಾನು ಗೌರವಿಸುತ್ತೇನೆ. ಅದರಂತೆ ಮುಂಬೈ ಕಸ್ಟಮ್ಸ್ ಇಲಾಖೆ ಕೇಳಿದ ಸಂಪೂರ್ಣ ಮಾಹಿತಿ ನೀಡಿದ್ದೇನೆ, ಅಧಿಕಾರಿಗಳು ಕೂಡ ನನಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ನನ್ನ ವಿರುದ್ಧದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ’ ಎಂದು ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿICC Mens T20 World Cup 2021: ಕಿವೀಸ್ ಕನಸು ಭಗ್ನ, ಆಸೀಸ್ ಗೆ ವಿಶ್ವ ಚಾಂಪಿಯನ್ ಪಟ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News