IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌

Harbhajan Singh: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.  

Written by - Zee Kannada News Desk | Last Updated : Jul 21, 2024, 08:58 AM IST
  • ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ODI ಮತ್ತು ಮೂರು ಪಂದ್ಯಗಳ T20I ಸರಣಿಯು ಮುಂದಿನ ವಾರ ಆರಂಭವಾಗಲಿದೆ.
  • ಭಾರತ ತಂಡದಿಂದ ಸುದೀರ್ಘ ಕಾಲ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ್ದರು.
  • ಈ ಮೂವರು ಆಟಗಾರರತ್ತ ಬೆರಳು ಮಾಡುವ ಮೂಲಕ ಹರ್ಭಜನ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ.
IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌ title=

Harbhajan Singh: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ODI ಮತ್ತು ಮೂರು ಪಂದ್ಯಗಳ T20I ಸರಣಿಯು ಮುಂದಿನ ವಾರ ಆರಂಭವಾಗಲಿದೆ. ಹೀಗಿರುವಾಗ ಮತ್ತೆ ಏಕದಿನ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಭಾರತ ತಂಡದಿಂದ ಸುದೀರ್ಘ ಕಾಲ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ್ದರು. ಹೀಗಾಗಿ ಅವರಿಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಗಲಿದೆ ಎಂದು ಭಾವಿಸಲಾಗಿತ್ತು. ಏತನ್ಮಧ್ಯೆ, ಸಂಜು ಸ್ಯಾಮ್ಸನ್ 2024ರ ಟಿ20 ವಿಶ್ವಕಪ್‌ಗಾಗಿ ಭಾರತೀಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಇದನ್ನೂ ಓದಿ: "ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ..": ತನ್ನ ತಪ್ಪು ನೆನದು ಪಸ್ಚಾತಾಪ ಪಟ್ಟ ಅಕ್ಷರ್‌ ಪಟೇಲ್..!

ಇನ್ನೂ, ಕಳೆದ ಒಂದೂವರೆ ವರ್ಷಗಳಿಂದ ಭಾರತ ತಂಡದಿಂದ ಯಾವುದೇ ಕಾರಣವಿಲ್ಲದೆ ಯುಜುವೇಂದ್ರ ಚಹಾಲ್ ಅವರನ್ನು ಕೈಬಿಡಲಾಗಿದೆ. 2024ರ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಸ್ಥಾನ ನೀಡಲಾಯಿತು. ಮತ್ತೆ ಭಾರತ ತಂಡಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ ವಿಶ್ವಕಪ್ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡದ ಚಹಾಲ್ ಅವರನ್ನು ಮುಂದಿನ ಜಿಂಬಾಬ್ವೆ ವಿರುದ್ಧದ ಟಿ20 ಮತ್ತು ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕೂಡ ಸ್ಥಾನ ಕೊಡಲಿಲ್ಲ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮಾ, ತಮ್ಮ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು. ಅವರಿಗೆ ಟಿ20 ತಂಡದಲ್ಲಿ ನಿಯಮಿತ ಅವಕಾಶ ಸಿಗುವ ನಿರೀಕ್ಷೆಯಿದ್ದರೂ ಟಿ20 ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈ ಮೂವರು ಆಟಗಾರರತ್ತ ಬೆರಳು ಮಾಡುವ ಮೂಲಕ ಹರ್ಭಜನ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News