Virat kohli lip kiss : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯುತ್ತಮ ಆಟಗಾರರ ಪೈಕಿ ದಾಖಲೆಗಳ ಕಿಂಗ್ ʼವಿರಾಟ್ ಕೊಹ್ಲಿʼ ಮುಂಚೂಣಿಯಲ್ಲಿದ್ದಾರೆ. ಯಾವುದೇ ಎದುರಾಳಿ, ಯಾವುದೇ ಬೌಲರ್, ಯಾವುದೇ ಪಿಚ್ ಆಗಿರಲಿ, ವಿರಾಟ್ ಕಣಕ್ಕೆ ಇಳಿದರೆ ರನ್‌ಗಳ ಮಹಾಪೂರವೇ ಹರಿಯುತ್ತದೆ. ಈಗಾಗಲೇ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಹಲವು ವಿಜಯಗಳನ್ನು ನೀಡಿದ್ದಾರೆ. ಸ್ಟಾರ್ ಬ್ಯಾಟರ್ ಕೊಹ್ಲಿ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಕೊಹ್ಲಿಗೆ ಮಹಿಳಾ ಡೈ ಹಾರ್ಡ್ ಪ್ಯಾನ್ಸ್‌ಗಳು ಸಹ ಸಾಕಷ್ಟು ಮಂದಿ ಇದ್ದಾರೆ.
ವಿರಾಟ್ ಕೊಹ್ಲಿ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಕೊಹ್ಲಿ ಹೋದಲ್ಲೆಲ್ಲಾ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಕೊಹ್ಲಿ ಪ್ರತಿಮೆಗೆ ಲಿಪ್ ಕಿಸ್ ನೀಡಿದ್ದಾಳೆ. ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿರುವ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಗೆ ಚುಂಬನ ನೀಡಿದ್ದಾಳೆ. ಕೊಹ್ಲಿ ಕಿಸ್ ಕೊಡುತ್ತಿರುವಂತೆ ಈಕೆಯ ಸ್ನೇಹಿತರು ವಿಡಿಯೋ ಮಾಡಿದ್ದಾರೆ.
With a statue... pic.twitter.com/TXU67kSlYz
— Gems of Simps (@GemsOfSimps) February 20, 2023
ಇದನ್ನೂ ಓದಿ: IND vs AUS: ಟೀಂ ಇಂಡಿಯಾವನ್ನು ಸೋಲಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್! ಆಸೀಸ್ ಗೆ ಈ ಅನುಭವಿ ಕೋಚ್?
ಇದೀಗ ವಿರಾಟ್ ಕೊಹ್ಲಿ ಪ್ರತಿಮೆಗೆ ಯುವತಿ ಲಿಪ್ ಕಿಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಣದ ಪ್ರತಿಮೆಯೊಂದಿಗೆ ಯುವತಿ ಪೋಸ್ ನೀಡಿರುವ ಫೋಟೋಗಳು ಕೂಡ ಸದ್ದು ಮಾಡುತ್ತಿವೆ. ಈ ಫೋಟೋಗಳು ಮತ್ತು ವೀಡಿಯೊಗಳಿಗೆ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ.
ವಿರಾಟ್ ಕೊಹ್ಲಿ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿ 2023 ರಲ್ಲಿ ನಿರತರಾಗಿದ್ದಾರೆ. ಈ ಸರಣಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ 12 ರನ್, ಎರಡನೇ ಟೆಸ್ಟ್‌ನಲ್ಲಿ 44 ಮತ್ತು 20 ರನ್ ಗಳಿಸಿದ್ದರು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ವಿರಾಟ್ ಕೊಹ್ಲಿ ಇದುವರೆಗೆ 106 ಟೆಸ್ಟ್, 271 ODI ಮತ್ತು 115 T20I ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 74 ಶತಕ ಪೂರೈಸಿರುವ ಕೊಹ್ಲಿ 25 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.