ರೋಚಕ ಪೆನಾಲ್ಟಿ ಶೂಟ್ ಔಟ್ ನಲ್ಲಿ ಜರ್ಮನಿಗೆ ಒಲಿದ ಹಾಕಿ ವಿಶ್ವಕಪ್

ನಿಗದಿತ ಸಮಯದ ಅಂತ್ಯಕ್ಕೆ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದವು.ಹೀಗಾಗಿ ಪೆನಾಲ್ಟಿ ಶೂಟ್ ಔಟ್ ಗೆ ಮೊರೆ ಹೋಗಲಾಯಿತು.ಈ ಸಂದರ್ಭದಲ್ಲಿ ಜರ್ಮನಿ ತಂಡವು 5-4 ರ ಪೆನಾಲ್ಟಿ ಶೂಟೌಟ್ ಅಂತರದಿಂದ ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಬಗ್ಗುಬಡಿದಿದೆ.

Written by - Zee Kannada News Desk | Last Updated : Jan 30, 2023, 05:44 AM IST
  • ನಿಗದಿತ ಸಮಯದ ಅಂತ್ಯಕ್ಕೆ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದವು
  • ಹೀಗಾಗಿ ಪೆನಾಲ್ಟಿ ಶೂಟ್ ಔಟ್ ಗೆ ಮೊರೆ ಹೋಗಲಾಯಿತು
  • ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ
ರೋಚಕ ಪೆನಾಲ್ಟಿ ಶೂಟ್ ಔಟ್ ನಲ್ಲಿ ಜರ್ಮನಿಗೆ ಒಲಿದ ಹಾಕಿ ವಿಶ್ವಕಪ್  title=
Photo Courtsey: Twitter

ಭುವನೇಶ್ವರ: ಭಾನುವಾರದಂದು ಭುವನೇಶ್ವರದಲ್ಲಿ ನಡೆದ ಹಾಕಿ ವಿಶ್ವಕಪ್ 2023 ರಲ್ಲಿ ಜರ್ಮನಿಯು ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು.

ನಿಗದಿತ ಸಮಯದ ಅಂತ್ಯಕ್ಕೆ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದವು.ಹೀಗಾಗಿ ಪೆನಾಲ್ಟಿ ಶೂಟ್ ಔಟ್ ಗೆ ಮೊರೆ ಹೋಗಲಾಯಿತು.ಈ ಸಂದರ್ಭದಲ್ಲಿ ಜರ್ಮನಿ ತಂಡವು 5-4 ರ ಪೆನಾಲ್ಟಿ ಶೂಟೌಟ್ ಅಂತರದಿಂದ ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಆ ಮೂಲಕ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಬಗ್ಗುಬಡಿದಿದೆ.

ನಿಕ್ಲಾಸ್ ವೆಲ್ಲೆನ್, ಗೊನ್ಜಾಲೊ ಪೆಯ್ಲಾಟ್ ಮತ್ತು ಮ್ಯಾಟ್ಸ್ ಗ್ರಾಮ್‌ಬುಷ್ ಅವರು ಎರಡು ಗೋಲುಗಳ ಹಿನ್ನಡೆಯಿಂದ ಹಿಂತಿರುಗಿ ಬಂದ ಜರ್ಮನ್ನರ ಪರ ಗೋಲುಗಳನ್ನು ಗಳಿಸಿ, ಭುವನೇಶ್ವರದಲ್ಲಿ ಹಾಲಿ ಚಾಂಪಿಯನ್‌ಗಳನ್ನು ಸೋಲಿಸಿದರು.ವಿಶೇಷವೆಂದರೆ 2002 ಮತ್ತು 2006 ರಲ್ಲಿ ವಿಶ್ವಕಪ್ ಗೆದ್ದ ನಂತರ ಜರ್ಮನಿ ಮೂರನೇ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News