ಗಾಯಗೊಂಡ ಶಿಖರ್ ಧವನ್ ವಿಶ್ವಕಪ್ ತಂಡದಿಂದ ಹೊರಕ್ಕೆ, ರಿಷಬ್ ಪಂತ್ ಗೆ ಬುಲಾವ್

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಡಗೈ ಹೆಬ್ಬೆರಳಿಗೆ ಗಾಯವಾದ ಪರಿಣಾಮ ಶಿಖರ್ ಧವನ್ ಅವರು ಈಗ 2019 ರ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ. 

Last Updated : Jun 19, 2019, 05:04 PM IST
 ಗಾಯಗೊಂಡ ಶಿಖರ್ ಧವನ್ ವಿಶ್ವಕಪ್ ತಂಡದಿಂದ ಹೊರಕ್ಕೆ, ರಿಷಬ್ ಪಂತ್ ಗೆ ಬುಲಾವ್   title=
Photo courtesy: afp

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಡಗೈ ಹೆಬ್ಬೆರಳಿಗೆ ಗಾಯವಾದ ಪರಿಣಾಮ ಶಿಖರ್ ಧವನ್ ಅವರು ಈಗ 2019 ರ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ. 

ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರ ಎಸೆತದಲ್ಲಿ  ಕೈಗೆ ಬಿದ್ದು ಗಾಯವಾಗಿತ್ತು. ಆ ಪಂದ್ಯದಲ್ಲಿ ಅವರು 109 ಎಸೆತಗಳಲ್ಲಿ 117 ರನ್  ಗಳನ್ನು ಗಳಿಸಿದ್ದರು.ಅಂದು ಗಾಯಗೊಂಡ ಕಾರಣ ಅವರು ಕ್ಷೇತ್ರರಕ್ಷಣೆಗೆ ಇಳಿದಿರಲಿಲ್ಲ ಅಲ್ಲದೆ ನ್ಯೂಜಿಲೆಂಡ್ ಹಾಗೂ ಪಾಕ್ ವಿರುದ್ಧದ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು.

ಶಿಖರ್ ಧವನ್ ಗಾಯಗೊಂಡಿರುವ ಕುರಿತಾಗಿ ಮಾತನಾಡಿದ್ದ ವಿರಾಟ್ ಕೊಹ್ಲಿ  "ಅವರು ಒಂದೆರಡು ವಾರಗಳ ಕಾಲ ಪ್ಲ್ಯಾಸ್ಟರ್‌ನಲ್ಲಿರುತ್ತಾರೆ ಮತ್ತು ನಂತರ ಅವರ ಸ್ಥಿತಿಯನ್ನು ನಿರ್ಣಯಿಸುತ್ತೇವೆ" ಎಂದು ಹೇಳಿದ್ದರು. ಈಗ ಅವರು ವಿಶ್ವಕಪ್ ಟೂರ್ನಿಯಿಂದ  ಹೊರಗುಳಿಯಬೇಕಾದ ಅನಿವಾರ್ಯತೆ ಬಂದಿರುವ ಹಿನ್ನಲೆಯಲ್ಲಿ ಅವರ ಬದಲಾಗಿ ರಿಶಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ.

Trending News