ಮುಂದಿನ 10 ವರ್ಷ ಕ್ರಿಕೆಟ್ ಜಗತ್ತನ್ನೇ ಆಳುತ್ತಾನೆ ಪಾಕಿಸ್ತಾನದ ಈ ಆಟಗಾರ: ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದು ಯಾರ ಬಗ್ಗೆ?

Gautam Gambhir on Babar Azam: 2023ರ ODI ವಿಶ್ವಕಪ್‌’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಳಿಕ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಬಾಬರ್ ಕೆಳಗಿಳಿದಿದ್ದರು.

Written by - Bhavishya Shetty | Last Updated : Dec 10, 2023, 06:52 PM IST
    • ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್
    • ಬಾಬರ್ ಅಜಮ್ ಅವರ ಕ್ರಿಕೆಟ್ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ
    • ವಿಶ್ವಕಪ್‌’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಿರಾಶಾದಾಯಕ ಪ್ರದರ್ಶನ
ಮುಂದಿನ 10 ವರ್ಷ ಕ್ರಿಕೆಟ್ ಜಗತ್ತನ್ನೇ ಆಳುತ್ತಾನೆ ಪಾಕಿಸ್ತಾನದ ಈ ಆಟಗಾರ: ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದು ಯಾರ ಬಗ್ಗೆ?  title=
Gautam Gambhir

Gautam Gambhir on Babar Azam: ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಬಾಬರ್ ಅಜಮ್ ಅವರ ಕ್ರಿಕೆಟ್ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ಬಾಬರ್ ಅಜಮ್ ಅವರು ಪಾಕಿಸ್ತಾನದಿಂದ ಇದುವರೆಗೆ ಹೊರಹೊಮ್ಮಿದ ಅನೇಕ ಪ್ರತಿಭೆಗಳಲ್ಲಿ ಅತ್ಯುತ್ತಮ ಬ್ಯಾಟರ್ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: “ಆತ ಮುಸ್ಲಿಂ.. ಧರ್ಮಕ್ಕಾಗಿ ಪ್ರೀತಿ ತ್ಯಾಗ ಮಾಡುತ್ತಿದ್ದೇವೆ”- 4 ವರ್ಷಗಳ ಪ್ರೇಮಕ್ಕೆ ಬ್ರೇಕಪ್ ಹೇಳಿದ ಬಿಗ್’ಬಾಸ್ ಜೋಡಿ

2023ರ ODI ವಿಶ್ವಕಪ್‌’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಳಿಕ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಬಾಬರ್ ಕೆಳಗಿಳಿದಿದ್ದರು.

ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರೊಂದಿಗೆ ಇತ್ತೀಚಿನ  ನಡೆದ ಚರ್ಚೆಯಲ್ಲಿ ಮಾತನಾಡಿದ ಗಂಭೀರ್, “ನಾಯಕತ್ವವನ್ನು ತ್ಯಜಿಸುವುದರಿಂದ ಬಾಬರ್ ತನ್ನ ಶಕ್ತಿ ಮತ್ತು ಗಮನವನ್ನು ಬ್ಯಾಟಿಂಗ್‌ ಕಡೆಗೆ ಹರಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.

"ನೀವು ಇನ್ಮುಂದೆ ಹೊಸ ಮತ್ತು ಸುಧಾರಿತ ಬಾಬರ್ ಅಜಮ್ ಅನ್ನು ನೋಡುತ್ತೀರಿ. ವಿಶ್ವಕಪ್‌’ಗೆ ಮೊದಲು, ಅವರು ಪಂದ್ಯಾವಳಿಯ ಅಗ್ರ ಬ್ಯಾಟರ್ ಆಗುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೆ. ಆದರೆ ನಿಮ್ಮ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ನಾಯಕತ್ವದ ಒತ್ತಡವು ಭಾರವಾಗಿರುತ್ತದೆ. ಈಗ, ನಾಯಕತ್ವದಿಂದ ಮುಕ್ತರಾಗಿದ್ದಾರೆ. ಮುಂದಿನ 10 ವರ್ಷಗಳು ನಾಯಕತ್ವದ ಹೊರೆ ಇಲ್ಲದಿರುವುದರಿಂದ ಪಾಕಿಸ್ತಾನದ ಅತ್ಯುತ್ತಮ ಬ್ಯಾಟರ್ ಆಗಬಹುದು” ಎಂದು ಗಂಭೀರ್ ಹೇಳಿದರು.

ಇದನ್ನೂ ಓದಿ: ಬೆತ್ತಲಾಗಿ ಕಾಡಿನಲ್ಲಿ ಸುತ್ತಾಡುತ್ತಾ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಖ್ಯಾತ ಬಾಲಿವುಡ್ ನಟ! ಫೋಟೋ

ಬಾಬರ್ ಅಜಮ್ ಪ್ರಸ್ತುತ ವಿಶ್ವದ ನಂ. 2 ODI ಬ್ಯಾಟರ್ ಎಂದು ಶ್ರೇಯಾಂಕ ಪಡೆದಿದ್ದಾರೆ. ಟೆಸ್ಟ್ ಮತ್ತು T20I ಗಳಲ್ಲಿ 4 ನೇ ಸ್ಥಾನವನ್ನು ಪಡೆದಿರುವ ಬಾಬರ್ ಈಗಾಗಲೇ ಎಲ್ಲಾ ಮೂರು ಸ್ವರೂಪಗಳಲ್ಲಿ ಗಣ್ಯ ಬ್ಯಾಟರ್‌’ಗಳಲ್ಲಿ ಒಬ್ಬರಾಗಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News