FIFA World Cup 2022: ಬ್ರೆಜಿಲ್ ಸೋಲಿಗೆ ಕಾರಣವಾಯ್ತಾ ಬೆಕ್ಕಿನ ಶಾಪ..!

FIFA World Cup 2022: Troll Football ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ‘This cat cursed Brazil’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

Written by - Puttaraj K Alur | Last Updated : Dec 10, 2022, 01:24 PM IST
  • ಬಲಿಷ್ಠ ಬ್ರೆಜಿಲ್ ಸೋಲಿಸುವ ಮೂಲಕ ಕ್ರೊವೇಷಿಯಾ ಸೆಮಿಫೈನಲ್‌ಗೆ ಲಗ್ಗೆ
  • ಫಿಫಾ ವಿಶ್ವಕಪ್ ಗೆಲ್ಲುವ ನೇಮರ್ ಪಡೆ ಕನಸು ನುಚ್ಚುನೂರು ಮಾಡಿದ ಕ್ರೊವೇಷಿಯಾ
  • ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಸೋಲಿಗೆ ಕಾರಣವಾಯ್ತಾ ಬೆಕ್ಕಿನ ಶಾಪ?
FIFA World Cup 2022: ಬ್ರೆಜಿಲ್ ಸೋಲಿಗೆ ಕಾರಣವಾಯ್ತಾ ಬೆಕ್ಕಿನ ಶಾಪ..! title=
ಬ್ರೆಜಿಲ್ ಸೋಲಿಗೆ ಬೆಕ್ಕಿನ ಶಾಪ ಕಾರಣ?

ನವದೆಹಲಿ: ಫಿಫಾ ವಿಶ್ವಕಪ್‍ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ ಪರಾಭವಗೊಳ್ಳುವ ಮೂಲಕ ದೊಡ್ಡ ನಿರಾಸೆ ಅನುಭವಿಸಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ತಂಡವನ್ನು ಸೋಲಿಸುವ ಮೂಲಕ ಕ್ರೊವೇಷಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಕ್ವಾರ್ಟರ್ ಫೈನಲ್‍ನ ಮಹತ್ವದ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಕ್ರೊವೇಷಿಯಾ ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಮಣಿಸಿ ಆಘಾತ ನೀಡಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿದ್ದ ಬ್ರೆಜಿಲ್‍ಗೆ ಈ ಸೋಲಿನಿಂದ ದೊಡ್ಡ ನಿರಾಸೆಯಾಗಿದ್ದು, ತಂಡದ ಆಟಗಾರರ ಕನಸು ನುಚ್ಚುನೂರಾಗಿದೆ. ಸೋಲಿನ ಬಳಿಕ ಬ್ರೆಜಿಲ್ ತಂಡದ ಆಟಗಾರರು ಮೈದಾನದಲ್ಲಿಯೇ ಕಣ್ಣೀರು ಸಹ ಹಾಕಿದ್ದಾರೆ.

ಶುಕ್ರವಾರ ನಡೆದ ಮಹತ್ವದ ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ನೇಮರ್(105+1ನೇ ನಿಮಿಷ) ಗೋಲು ಗಳಿಸಿ ಬ್ರೆಜಿಲ್‌ಗೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಕ್ರೊಯೇಷಿಯಾದ ಬ್ರೂನೋ ಪೆಟ್ಕೊವಿಕ್ (117ನೇ ನಿಮಿಷ) ಭರ್ಜರಿ ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿದಲು ನೆರವಾದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಬ್ರೆಜಿಲ್ ವಿರುದ್ಧ ಕ್ರೊಯೇಷಿಯಾ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತು.

ಇದನ್ನೂ ಓದಿ: FIFA World Cup 2022: ಪೆನಾಲ್ಟಿ ಕಿಕ್ ನಲ್ಲಿ ಕ್ರೊಯೇಷಿಯಾ ಪರಾಕ್ರಮ, ಬ್ರೆಜಿಲ್ ತಂಡದ ಕನಸು ನುಚ್ಚು ನೂರು..!

ಸೋಲಿಗೆ ಕಾರಣವಾಯ್ತಾ ಬೆಕ್ಕಿನ ಶಾಪ!

ಹೌದು, ಇದು ಕೇಳಲು ವಿಚಿತ್ರವಾದರೂ ಸದ್ಯ ಸಖತ್ ಸೌಂಡ್ ಮಾಡುತ್ತಿರುವ ಸಂಗತಿ. ಕ್ರೊಯೇಷಿಯಾ ಎದುರು ಬಲಿಷ್ಠ ಬ್ರೆಜಿಲ್ ಸೋಲಿಗೆ ಕಾರಣವಾಗಿದ್ದು ಬೆಕ್ಕಿನ ಶಾಪ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟಾಕ್ ನಡೆಯುತ್ತಿದೆ. ಈ ಕುರಿತ ವಿಡಿಯೋ ಸಹ ಇಂಟರ್‍ನೆಟ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಇದಕ್ಕೆ ಕಾರಣವೆಂದರೆ ಬ್ರೆಜಿಲ್ ಆಟಗಾರರ ಸುದ್ದಿಗೋಷ್ಠಿ ವೇಳೆ ವೇದಿಕೆ ಮೇಲೆ ಬೆಕ್ಕೊಂದು ಎಂಟ್ರಿ ಕೊಟ್ಟಿತ್ತು. ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ್ದ ಈ ಬೆಕ್ಕನ್ನು ಬ್ರೆಜಿಲ್ ಆಟಗಾರ ತನ್ನ ಕೈಯಲ್ಲಿ ಹಿಡಿದುಕೊಂಡು ಆಚೆಗೆ ಎಸೆದಿದ್ದಾನೆ. ಆ ಬೆಕ್ಕೇ ಬ್ರೆಜಿಲ್‍ ತಂಡಕ್ಕೆ ಶಾಪ ನೀಡಿದ್ದು, ಹೀಗಾಗಿಯೇ ಬಲಿಷ್ಠ ತಂಡ ಸೋಲಬೇಕಾಯಿತು ಅಂತಾ ಹೇಳಲಾಗಿದೆ.

ಇದನ್ನೂ ಓದಿ: FIFAದಿಂದ ಅರ್ಜೆಂಟಿನಾ ಹೊರಬೀಳುವುದು ಜಸ್ಟ್ ಮಿಸ್: ಎದ್ದು ನಿಂತ ಮೆಸ್ಸಿ ಪಡೆ ಸೆಮೀಸ್ ಪ್ರವೇಶ

Troll Football ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ‘This cat cursed Brazil’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋವನ್ನು 50 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News