FIFA WC 2022: ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾದ ಪ್ರತಿಯೊಬ್ಬ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್!

ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ.

Written by - Puttaraj K Alur | Last Updated : Nov 26, 2022, 09:57 AM IST
  • ಬಲಿಷ್ಠ ಅರ್ಜೆಂಟೀನಾ ತಂಡದ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಸೌಧಿ ಅರೇಬಿಯಾ
  • ಲಿಯೊನಲ್ ಮೆಸ್ಸಿ ಪಡೆಗೆ ಸೋಲಿನ ರುಚಿ ತೋರಿಸಿದ ಸೌದಿ ತಂಡದ ಆಟಗಾರರಿಗೆ ಭರ್ಜರಿ ಗಿಫ್ಟ್
  • ತಂಡದ ಪ್ರತಿಯೊಬ್ಬ ಆಟಗಾರನಿಗೂ ರೋಲ್ಸ್ ರಾಯ್ಸ್ ಕಾರು ಗಿಫ್ಟ್ ನೀಡಲಿರುವ ಸೌದಿ ಸರ್ಕಾರ
FIFA WC 2022: ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾದ ಪ್ರತಿಯೊಬ್ಬ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್! title=
ಸೌದಿ ಆಟಗಾರರಿಗೆ ಭರ್ಜರಿ ಗಿಫ್ಟ್

ನವದೆಹಲಿ: ಫಿಫಾ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ತಂಡಗಳು ಮುಖಾಮುಖಿಯಾಗಿದ್ದವು. ಲಿಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಸೌದಿ ತಂಡದ ಕೈಯಲ್ಲಿ ಹೀನಾಯ ಸೋಲು ಕಂಡಿತ್ತು.

ಮೆಸ್ಸಿ ಪಡೆಗೆ ಸೋಲಿನ ಶಾಕ್ ನೀಡಿದ್ದ ಸೌದಿ ಅರೇಬಿಯಾ ತಂಡ 2-1 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಸೌದಿ ತಂಡದ ಪ್ರದರ್ಶನಕ್ಕೆ ಮನಸೋತ ಸೌದಿ ದೇಶದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಇಡೀ ದೇಶಕ್ಕೆ 1 ದಿನ ರಜೆ ಘೋಷಿಸಿದ್ದರು. ಸೌದಿ ತಂಡದ ಐತಿಹಾಸಿಕ ಗೆಲುವಿಗೆ ಇಡೀ ರಾಷ್ಟ್ರವೇ ಸಂಭ್ರಮಿಸಿತ್ತು.

ಇದನ್ನೂ ಓದಿ: Video : ಟೀಂ ಇಂಡಿಯಾಗೆ ಮರಳಲು ಟ್ರೈನಿಂಗ್ ಆರಂಭಿಸಿದ ಈ ಸ್ಟಾರ್ ಬೌಲರ್!

ಸೌದಿ ರಾಜ ಮತ್ತು ಕುಟುಂಬ ಸದಸ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ್ದರು. 1 ದಿನ ರಜೆ ಘೋಷಿಸಿದ ಬಳಿಕ ಸೌದಿ ಸರ್ಕಾರ ಮತ್ತೊಂದು ದೊಡ್ಡ ಘೋಷಣೆಯನ್ನು ಮಾಡಿದೆ. ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೂ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಗಿಫ್ಟ್ ಆಗಿ ನೀಡಲಾಗುವುದು ಅಂತಾ ಸೌದಿ ಸರ್ಕಾರ ಘೋಷಿಸಿದೆ.

ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ 1-0 ಗೋಲುಗಳಿಂದ ಆರಂಭಿಕ ಹಿನ್ನೆಡೆ ಅನುಭವಿಸಿದ್ದ ಸೌದಿ ಅರೇಬಿಯಾ ತಂಡವು ಭರ್ಜರಿ ಪುನರಾಗಮನ ಮಾಡಿ 2-1 ಅಂತರದಲ್ಲಿ ಗೆಲುವು ಸಾಧಿಸಿ ಮೈದಾನದಲ್ಲಿ ಸಂಭ್ರಮಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಏಕೈಕ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ ಮೊದಲು ಯಶಸ್ಸು ತಂದುಕೊಟ್ಟಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸೌದಿ ಆಟಗಾರರು ಅರ್ಜೆಂಟೀನಾ ತಂಡದ ರಕ್ಷಣಾ ವಿಭಾಗವನ್ನು ಭೇದಿಸುವಲ್ಲಿ ಯಶಸ್ವಿಯಾಗಿ 2 ಗೋಲು ಗಳಿಸಿದರು.

ಇದನ್ನೂ ಓದಿ: IND vs NZ: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆ, 2ನೇ ಪಂದ್ಯಕ್ಕೆ ಈ ಆಟಗಾರ ಹೊರಕ್ಕೆ!

ಸೌದಿ ಪರ ಸಲೇಹ್ ಅಲ್-ಶೆಹ್ರಿ 48ನೇ ನಿಷಯದಲ್ಲಿ ಗೋಲು ಗಳಿಸುವ ಮೂಲಕ 1-1ರಿಂದ ಸಮಬಲಗೊಳಿಸಿದರು. ಬಳಿಕ ಸೇಲಂ ಅಲ್-ದವ್ಸಾರಿ 53ನೇ ನಿಮಿಷದಲ್ಲಿ 2ನೇ ಗೋಲು ಗಳಿಸುವ ಮೂಲಕ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ಸೌದಿ ತಂಡವು ಪ್ರಸ್ತುತ ತಮ್ಮ C ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತಮ್ಮ 2ನೇ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಸೆಣಸಾಡಲು ಸಜ್ಜಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News