FIFA U17: ಭಾರತದಲ್ಲಿ ಮೊದಲ ಬಾರಿಗೆ 'ಫೂಟ್ಬಾಲ್ನ ಮಹಾಕ್ರೀಡೆ', ಇದರ ಬಗೆಗಿನ 10 ವಿಶೇಷತೆಗಳು

ಇಂತಹ ದೊಡ್ಡ ಮಟ್ಟದಲ್ಲಿ ಭಾರತೀಯ ಫೂಟ್ಬಾಲ್ ತಂಡ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

Last Updated : Oct 6, 2017, 03:44 PM IST
FIFA U17: ಭಾರತದಲ್ಲಿ ಮೊದಲ ಬಾರಿಗೆ 'ಫೂಟ್ಬಾಲ್ನ ಮಹಾಕ್ರೀಡೆ', ಇದರ ಬಗೆಗಿನ 10 ವಿಶೇಷತೆಗಳು title=
Pic: Youtube

ನವ ದೆಹಲಿ: ಭಾರತವು ಮೊದಲ ಬಾರಿಗೆ ಫಿಫಾ ವಿಶ್ವ ಕಪ್ ಅನ್ನು ಆಯೋಜಿಸುತ್ತಿದೆ. ಪಂದ್ಯಾವಳಿಯು ಅಕ್ಟೋಬರ್ 6 ರಿಂದ ಅಕ್ಟೋಬರ್ 28 ರವರೆಗೆ ನಡೆಯಲಿದ್ದು, ಒಟ್ಟು 52 ಪಂದ್ಯಗಳನ್ನು ಆಯೋಜಿಸಲಾಗಿದೆ. 

ಪಂದ್ಯಗಳು ದೆಹಲಿ, ಮುಂಬೈ, ಕೊಚ್ಚಿ, ಗೋವಾ, ಗುವಾಹಾಟಿ ಮತ್ತು ಕೋಲ್ಕತ್ತಾ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಂತರದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಿರುವ ಐದನೇ ರಾಷ್ಟ್ರ ಭಾರತವಾಗಿದೆ. 

17ವರ್ಷದೊಳಗಿನವರ ಫಿಫಾ ವಿಶ್ವ ಕಪ್ ಗೆ ಸಂಬಂಧಿಸಿದ 10 ಆಸಕ್ತಿದಾಯಕ ಮತ್ತು ವಿಶೇಷ ವಿಷಯಗಳು.

1) ಇತರ ಎಲ್ಲಾ ಖಂಡಗಳಿಗಿಂತಲೂ ಇತರ ಖಂಡಗಳಲ್ಲಿ ಈ ಫಿಫಾ ವಿಶ್ವ ಕಪ್ ಅನ್ನು ಹೆಚ್ಚಾಗಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾಗಿದೆ. ಏಷಿಯನ್ ದೇಶಗಳಲ್ಲಿ, ಚೀನಾ (1985), ಜಪಾನ್ (1993), ದಕ್ಷಿಣ ಕೊರಿಯಾ (2007) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (2013) ರಲ್ಲಿ ಅಲಂಕರಿಸಿದೆ.

2) ಫಿಫಾ U-17 ವಿಶ್ವ ಕಪ್ ರಲ್ಲಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 16 ತಂಡಗಳಿದ್ದು, 1985 ರಿಂದ 2005 ರವರೆಗಿನ ಭಾಗವನ್ನು ಮಾತ್ರ ತೆಗೆದುಕೊಳ್ಳುತ್ತದೆ, ಆದರೆ 2007 ರಲ್ಲಿ  24 ತಂಡಗಳನ್ನು ರಚಿಸಲಾಗಿದ್ದು, ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

3) ನೈಜೀರಿಯಾವನ್ನು ಫಿಫಾ ಅಂಡರ್-17 ವಿಶ್ವಕಪ್ನ ಅತ್ಯಂತ ಬಲಿಷ್ಠ ತಂದವೆಂದೂ ಪರಿಗಣಿಸಲಾಗಿದೆ. ಇದು ಐದು ಬಾರಿ (1985, 1993, 2007, 2013, 2015) ತನ್ನ ಹೆಸರನ್ನು ದಾಖಲಿಸಿದೆ. 1987, 2001, 2009 ಮೂರು ಬಾರಿ ರನ್ನರ್ ಅಪ್ ಆಗಿದೆ. ಆದರೆ ಭಾರತದಲ್ಲಿ ಮೊದಲ ಬಾರಿ ಆಯೋಜನೆಗೊಂಡಿರುವ ಈ ಪಂದ್ಯದಲ್ಲಿ ನೈಜೀರಿಯಾ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.

4) ನೈಗರ್, ನ್ಯೂ ಕ್ಯಾಲೆಡೋನಿಯ ಮತ್ತು ಭಾರತ ಈ ಪಂದ್ಯದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ಮೂರು ತಂಡಗಳು.

5) ಅಂಡರ್ 17 ವಿಶ್ವಕಪ್ ಮತ್ತು ಫಿಫಾ ವಿಶ್ವಕಪ್ನಲ್ಲಿ ಮಾರಿಯೋ ಗೊಟಿಜಿ(2014), ಎಮ್ಯಾನುಯೇಲ್ ಪೆಟಿಟ್ (1998) ಮತ್ತು ಆಂಡ್ರೆಸ್ ಇನಿಯೆಸ್ಟಾ (2010) ಈ ಮೂವರು ವಿಶ್ವಕಪ್ ಅಂತಿಮ ಪಂದ್ಯಗಳಲ್ಲಿ ಹೆಚ್ಚು ಸ್ಕೋರ್ ಗಳಿಸಿದ ಆಟಗಾರರು.

6) ಅಂಡರ್ 17 ವಿಶ್ವಕಪ್ನಲ್ಲಿ 166 ಗೋಲ್ ಗಳ ದಾಖಲೆಯೊಂದಿಗೆ ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. 149 ಗೋಲ್ ಗಳೊಂದಿಗೆ ನೈಜೀರಿಯಾ ಎರಡನೇ ಸ್ಥಾನದಲ್ಲಿದ್ದರೆ, 97 ಗೋಲುಗಳ ದಾಖಲೆಯೊಂದಿಗೆ ಮೆಕ್ಸಿಕೋ ಮೂರನೇ ಸ್ಥಾನದಲ್ಲಿದೆ. 92 ಮತ್ತು 86 ಗೋಲುಗಳನ್ನು ಹೊಂದಿರುವ ಜರ್ಮನಿ ಮತ್ತು ಘಾನಾ ಪಟ್ಟಿಯಲ್ಲಿ ಹೆಚ್ಚು ಗೋಲ್ಕೀಪರ್ಗಳಾಗಿವೆ.

7) ಬ್ರೆಜಿಲ್ ಮತ್ತು ನೈಜೀರಿಯಾಗಳು ವಿಶ್ವಕಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ಎರಡು ಪ್ರಮುಖ ತಂಡಗಳಾಗಿವೆ. ಬ್ರೆಜಿಲ್ನ 1997 ಮತ್ತು 1999 ಮತ್ತು ನೈಜೀರಿಯಾ 2013 ಮತ್ತು 2015ರಲ್ಲಿ ಸತತ ಎರಡು ಬಾರಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ. 

8) ಅಂಡರ್-17 ವಿಶ್ವ ಕಪ್ ಗೋಲ್ಡನ್ ಬಾಲ್ ನ್ನು ಎಲ್ಲರಿಗಿಂತಲೂ ಹೆಚ್ಚಾಗಿ ನೈಜೀರಿಯಾ ನಾಲ್ಕು ಬಾರಿ ಜಯ ಗಳಿಸುವ ಮೂಲಕ ತನ್ನದಾಗಿಸಿಕೊಂಡಿದೆ.   

9) 17 ನೇ ಅಂಡರ್ -17 ವಿಶ್ವ ಕಪ್ಗೆ ಭಾರತವು 18 ನೇ ಏಷ್ಯನ್ ತಂಡವಾಗಿದೆ.

10) ಅಮೇರಿಕಾ ಮತ್ತು ಬೇಜಿಲ್ ಇದುವರೆಗೂ ಎಲ್ಲರಿಗಿಂತಲೂ ಹೆಚ್ಚು ಅಂದರೆ 15 ಬಾರಿ ಅಂಡರ್-17 ವಿಶ್ವ ಕಪ್ ನಲ್ಲಿ ಭಾಗವಹಿಸಿವೆ. ಈ ತಂಡಗಳಿಗೆ ಇದು 16 ನೇ ವಿಶ್ವಕಪ್ ಆಗಿದೆ. 

Trending News