ನವದೆಹಲಿ: IPL ಹರಾಜಿನಲ್ಲಿ ಕೆಲವು ಆಟಗಾರರು ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆದರೆ ಕೆಲವು ಆಟಗಾರರು ಅನ್ ಸೋಲ್ಡ್ (Unsold Players) ಆಗದೇ ಉಳಿದಿದ್ದಾರೆ.
ಇಶಾನ್ ಕಿಶನ್ (Ishan Kishan) ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂ. ನೀಡಿ ಖರೀದಿಸಿದೆ.
ಕೆಲವು ದೊಡ್ಡ ದೊಡ್ಡ ಆಟಗಾರರ ಹೆಸರುಗಳು ಐಪಿಎಲ್ ಹರಾಜಿನಲ್ಲಿ (IPL Mega Auction 2022) ಯಾವುದೇ ಬಿಡ್ಡಿಂಗ್ ಪಡೆಯದೆ ಹೋಗಿವೆ.
IPL 2022 ರಲ್ಲಿ ಅನ್ ಸೋಲ್ಡ್ ಆದ ಆಟಗಾರರು:
ಸುರೇಶ್ ರೈನಾ (ಮೂಲ ಬೆಲೆ 2 ಕೋಟಿ ರೂ.):
ಐಪಿಎಲ್‌ನಲ್ಲಿ (IPL) ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎಡಗೈ ಆಟಗಾರ ರೈನಾ (Suresh Rain) ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 205 ಪಂದ್ಯಗಳನ್ನು ಆಡಿದ್ದಾರೆ ಮತ್ತು 32.51 ಸರಾಸರಿಯಲ್ಲಿ 5,528 ರನ್ ಗಳಿಸಿದ್ದಾರೆ. ರೈನಾ ರನ್ ಗಳಿಸುವವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹಿಂದಿದ್ದಾರೆ.
ಇದನ್ನೂ ಓದಿ: IPL 2022 Mega Auction : ವಿಕೆಟ್ ಕೀಪರ್ ಖರೀದಿಯಲ್ಲಿ ಎಡವಿದ ಮೂರು ತಂಡಗಳು..!
ಪ್ರಾಸಂಗಿಕವಾಗಿ ರೋಹಿತ್ ಶರ್ಮಾಗಿಂತ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ ಮತ್ತು ಪಟ್ಟಿಯಲ್ಲಿ ಅವರ ಮೇಲಿನ ಎಲ್ಲಾ ಮೂರು ಆಟಗಾರರಿಗಿಂತ ಉತ್ತಮ ಸ್ಟ್ರೈಕ್-ರೇಟ್ ಹೊಂದಿದ್ದಾರೆ.
35 ವರ್ಷ ವಯಸ್ಸಿನ ರೈನಾ ಇನ್ನೂ ಫಿಟ್ ಆಗಿರುವಂತೆ ತೋರುತ್ತಿದೆ. ಆದರೆ ಅವರ ಮೂಲ ಬೆಲೆ ರೂ 2 ಕೋಟಿ. ಅಲ್ಲದೆ, 2021 ರ ಸೀಸನ್ ನಲ್ಲಿ ರೈನಾ ಅವರು 12 ಪಂದ್ಯಗಳಲ್ಲಿ 17.77 ರ ಅಲ್ಪ ಸರಾಸರಿಯಲ್ಲಿ ಕೇವಲ 160 ರನ್ ಗಳನ್ನು ಗಳಿಸಿದರು.
ಸ್ಟೀವ್ ಸ್ಮಿತ್ (ಮೂಲ ಬೆಲೆ 2 ಕೋಟಿ ರೂ.):
ಆಸ್ಟ್ರೇಲಿಯನ್ ರನ್-ಮೆಷಿನ್ ಸ್ಟೀವ್ ಸ್ಮಿತ್ (Steve Smith) ಆಶ್ಚರ್ಯಕರವಾಗಿ ಹರಾಜಾಗದೆ ಉಳಿದಿದ್ದಾರೆ. ಅವರು 2021 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ಗಾಗಿ ಆಡಿದ್ದರು. ಸ್ಮಿತ್ ಎಂಟು ಪಂದ್ಯಗಳಲ್ಲಿ 25.33 ಸರಾಸರಿ ಮತ್ತು 112.59 ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದರು.
ಶಕೀಬ್ ಅಲ್ ಹಸನ್ (ಮೂಲ ಬೆಲೆ 2 ಕೋಟಿ ರೂ.):
ಬಾಂಗ್ಲಾದೇಶದ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ (Shakib Al Hasan) ಐಸಿಸಿಯ ಆಲ್‌ರೌಂಡರ್‌ಗಳಿಗಾಗಿ ODI ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ICC ಯ T20I ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: MS Dhoni ಸೇನೆಗೆ ಮರಳಿದ ಹಳೇ ಹುಲಿಗಳು..! ಮುಂಚಿಗಿಂತಲೂ ಬಲಿಷ್ಟವಾಯಿತು CSK
IPL 2021 ರಲ್ಲಿ KKR ಪರ ಆಡಿದ ಶಕೀಬ್ ಎಂಟು ಪಂದ್ಯಗಳಲ್ಲಿ ಕೇವಲ 47 ರನ್ ಗಳಿಸಿದರು ಮತ್ತು ಕೇವಲ ನಾಲ್ಕು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಅವರ ಈ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣವಾಗಿರಬಹುದು.
ಆದಿಲ್ ರಶೀದ್ (ಮೂಲ ಬೆಲೆ ರೂ 2 ಕೋಟಿ):
ಇಂಗ್ಲೆಂಡ್ ಲೆಗ್ಗಿ ಆದಿಲ್ ರಶೀದ್ (Adil Rashid) ಅಗ್ರ ಬೌಲರ್‌ಗಳಲ್ಲಿ ಒಬ್ಬರು. ಐಸಿಸಿಯ T20I ಆಟಗಾರರ ಶ್ರೇಯಾಂಕದಲ್ಲಿ ಆದಿಲ್ ರಶೀದ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೂ ಅವರು ಅನ್ ಸೋಲ್ಡ್ ಆಗಿದ್ದಾರೆ.
ಇಮ್ರಾನ್ ತಾಹಿರ್ (ಮೂಲ ಬೆಲೆ 2 ಕೋಟಿ ರೂ.):
ದಕ್ಷಿಣ ಆಫ್ರಿಕಾದ 42 ವರ್ಷದ ಅನುಭವಿ ಸ್ಪಿನ್ನರ್ ಮೂಲ ಬೆಲೆ 2 ಕೋಟಿ ರೂ. ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ಇವರನ್ನು ಖರೀದಿಸಲು ಒಅಲ್ವು ತೋರಲಿಲ್ಲ. ಕಳೆದ ವರ್ಷ ಸಹ, ತಾಹಿರ್ (Imran Tahir) ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಕೇವಲ ಒಂದೇ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು. ಇದರಲ್ಲಿ ಅವರು ಎರಡು ವಿಕೆಟ್ ಪಡೆದರು.
ಆರನ್ ಫಿಂಚ್ (ಮೂಲ ಬೆಲೆ ರೂ 1.50 ಕೋಟಿ):
ಆಸ್ಟ್ರೇಲಿಯನ್ ವೈಟ್-ಬಾಲ್ ನಾಯಕ ಆರನ್ ಫಿಂಚ್ (Aaron Finch) ಐಪಿಎಲ್‌ನಲ್ಲಿ ಅವರು ಅನ್ ಸೋಲ್ಡ್ ಆಗಿದ್ದಾರೆ. ಫಿಂಚ್ ಅವರು 2020 ರಲ್ಲಿ RCB ಗಾಗಿ ಆಡಿದ್ದರು. ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. 12 ಪಂದ್ಯಗಳಲ್ಲಿ 268 ರನ್ ಗಳಿಸಿದರು ಆದರೆ ಅವರು IPL 2021 ರಲ್ಲಿ ಹರಾಜಿನ ಮೊದಲು ಬಿಡುಗಡೆಯಾದರು. ಅಲ್ಲಿ ಅವರು ಮಾರಾಟವಾಗಲಿಲ್ಲ.
ಡೇವಿಡ್ ಮಲನ್ (ಮೂಲ ಬೆಲೆ ರೂ 1.50 ಕೋಟಿ):
ICC ಶ್ರೇಯಾಂಕದ ಪ್ರಕಾರ T20I ಗಳಲ್ಲಿ ಡೇವಿಡ್ ಮಲನ್ (Dawid Malan) ಅಗ್ರ ಬ್ಯಾಟರ್ ಆಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಪೆಕಿಂಗ್ ಆರ್ಡರ್ ಕೆಳಗೆ ಬಿದ್ದಿದ್ದಾರೆ. ಅವರು ಪ್ರಸ್ತುತ ICC ಯ T20I ಶ್ರೇಯಾಂಕದಲ್ಲಿ 5 ನೇ ಸ್ಥಾನದಲ್ಲಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ವಿಫಲರಾಗಿದ್ದಾರೆ. ಅವರು ಕಳೆದ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದರು.
ಇಯಾನ್ ಮಾರ್ಗನ್ (ಮೂಲ ಬೆಲೆ ರೂ 1.50 ಕೋಟಿ):
ಇಂಗ್ಲೆಂಡ್ ವೈಟ್-ಬಾಲ್ ನಾಯಕ ಇಯಾನ್ ಮಾರ್ಗನ್ (Eoin Morgan), ಐಪಿಎಲ್ 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಅಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತರು.
ಎಡಗೈ ಆಟಗಾರ 17 ಪಂದ್ಯಗಳಲ್ಲಿ 11.08 ಸರಾಸರಿಯಲ್ಲಿ ಕೇವಲ 133 ರನ್ ಗಳಿಸಿದರು.
ಇದನ್ನೂ ಓದಿ: "ಕಾಂಗ್ರೆಸ್ ಮುಗಿಸಲು ರಾಹುಲ್, ಪ್ರಿಯಾಂಕಾ ಸಾಕು": ಯೋಗಿ ಆದಿತ್ಯನಾಥ್
ಕ್ರಿಸ್ ಲಿನ್ (ಮೂಲ ಬೆಲೆ ರೂ 1.50 ಕೋಟಿ):
ಆಸ್ಟ್ರೇಲಿಯಾದಿಂದ ಹೊರಹೊಮ್ಮಿದ ಅತ್ಯಂತ ಕ್ರೂರ ಹಿಟ್ಟರ್‌ಗಳಲ್ಲಿ ಒಬ್ಬರಾದ ಲಿನ್ (Chris Lynn) IPL ನಲ್ಲಿ ಹರಾಜಾಗಳು ವಿಫಲರಾಗಿದ್ದಾರೆ. ಐಪಿಎಲ್ 2021 ರ ಸೀಸನ್‌ಗೆ ಮುಂಚಿತವಾಗಿ ರೂ 2 ಕೋಟಿಗೆ ಅವರ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಅವರನ್ನು ತೆಗೆದುಕೊಂಡಿತು. ಆದರೆ ಕೇವಲ ಒಂದು ಪಂದ್ಯವನ್ನು ಆಡಲು ಕ್ರಿಸ್ ಲಿನ್ ಗೆ ಅವಕಾಶ ಸಿಕ್ಕಿತು. ಅವರು 140 ರ ಸ್ಟ್ರೈಕ್ ರೇಟ್‌ನಲ್ಲಿ 49 ರನ್ ಗಳಿಸಿದರು.
ತಬ್ರೈಜ್ ಶಮ್ಸಿ (ಮೂಲ ಬೆಲೆ ರೂ 1 ಕೋಟಿ):
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಮ್ಸಿ (Tabraiz Shamsi) ಭಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. T20I ಸ್ವರೂಪದಲ್ಲಿ, ಶಮ್ಸಿ ಎರಡನೇ ಶ್ರೇಯಾಂಕದ ಬೌಲರ್. ಅವರನ್ನು ಖರೀದಿಸುವಲ್ಲಿ ಫ್ರಂಚಿಸಿಗಳು ಶೂನ್ಯ ಆಸಕ್ತಿಯನ್ನು ತೋರಿಸಿದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.