Danielle Wyatt: ಸಲಿಂಗಿ ಗೆಳತಿ ಜೊತೆ ಎಂಗೇಜ್ಮೆಂಟ್‌ ಮಾಡಿಕೊಂಡ ಮಹಿಳಾ ಕ್ರಿಕೆಟರ್!

Danielle Wyatt Engagement: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ಡೇನಿಯಲ್ ವ್ಯಾಟ್ ತನ್ನ ಸಲಿಂಗಿ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. 

Written by - Chetana Devarmani | Last Updated : Mar 3, 2023, 03:00 PM IST
  • ಇಂಗ್ಲೆಂಡ್ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ
  • ಸಲಿಂಗಿ ಗೆಳತಿ ಜೊತೆ ಎಂಗೇಜ್ಮೆಂಟ್‌ ಮಾಡಿಕೊಂಡ ಮಹಿಳಾ ಕ್ರಿಕೆಟರ್
  • ಮಹಿಳಾ ಆಟಗಾರ್ತಿ ಡೇನಿಯಲ್ ವ್ಯಾಟ್ ಎಂಗೇಜ್ಮೆಂಟ್‌
Danielle Wyatt: ಸಲಿಂಗಿ ಗೆಳತಿ ಜೊತೆ ಎಂಗೇಜ್ಮೆಂಟ್‌ ಮಾಡಿಕೊಂಡ ಮಹಿಳಾ ಕ್ರಿಕೆಟರ್!  title=
Danielle Wyatt

Danielle Wyatt Engagement: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ಡೇನಿಯಲ್ ವ್ಯಾಟ್ ತನ್ನ ಸಲಿಂಗಿ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಡೇನಿಯಲ್ ವ್ಯಾಟ್ ತನ್ನ ಪ್ರೇಯಸಿ ಜಾರ್ಜಿ ಹಾಡ್ಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2014 ರಲ್ಲಿ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಮದುವೆಯಾಗಲು ಇದೇ ಕ್ರಿಕೆಟಿರ್ ಡೇನಿಯಲ್ ವ್ಯಾಟ್ ಪ್ರಸ್ತಾಪಿಸಿದ್ದರು. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಜೊತೆಗೆ ಡೇನಿಯಲ್ ವ್ಯಾಟ್ ಸ್ನೇಹ ಬೆಳೆಸಿದ್ದರೂ ಎಂಬ ವದಂತಿ ಕೂಡ ಇದೆ.

ಇದನ್ನೂ ಓದಿ : IND vs AUS: ಕ್ರಿಕೆಟ್ ನಿಯಮ ಗಾಳಿಗೆ ತೂರಿದ ಸ್ಮಿತ್‌.! ಭಾರತದ ವಿರುದ್ಧ ಮೈದಾನದಲ್ಲಿ ನಡೆದಿದ್ದೇನು?

ಡೇನಿಯಲ್ ವ್ಯಾಟ್ ಇತ್ತೀಚೆಗೆ 2023 ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗಾಗಿ ಕ್ರಿಕೆಟ್ ಆಡಿದ್ದರು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಸೋಲನುಭವಿಸಬೇಕಾಯಿತು. ಡೇನಿಯಲ್ ವ್ಯಾಟ್ ಅವರು ಗುರುವಾರ, ಮಾರ್ಚ್ 2 ರಂದು ತಮ್ಮ Instagram ಖಾತೆಯಲ್ಲಿ ಒಂದು ಅಚ್ಚರಿಯ ಪೋಸ್ಟ್ ಮಾಡಿದ್ದಾರೆ. ತಮ್ಮ ಸಲಿಂಗಿ ಸಂಗಾತಿ ಜಾರ್ಜಿ ಹಾಡ್ಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದರು. ಪೋಸ್ಟ್‌ನಲ್ಲಿ, ಡೇನಿಯಲ್ ವ್ಯಾಟ್ ತನ್ನ ಸಂಗಾತಿಯನ್ನು ಚುಂಬಿಸುತ್ತ ತನ್ನ ಉಂಗುರವನ್ನು ತೋರಿಸಿದ್ದಾರೆ. ಡೇನಿಯಲ್ ವ್ಯಾಟ್ ಇಲ್ಲಿಯವರೆಗೆ 102 ODI ಮತ್ತು 143 T20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಡೇನಿಯಲ್ ಕ್ರಮವಾಗಿ 1776 ಮತ್ತು 2369 ರನ್ ಗಳಿಸಿದ್ದಾರೆ. ಇದಲ್ಲದೇ, ಡೇನಿಯಲ್ ವ್ಯಾಟ್ ಏಕದಿನದಲ್ಲಿ 27 ಮತ್ತು ಟಿ20ಯಲ್ಲಿ 46 ವಿಕೆಟ್ ಪಡೆದಿದ್ದಾರೆ.

 

 

2014 ರಲ್ಲಿ ಡೇನಿಯಲ್ ವ್ಯಾಟ್ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಮದುವೆಗೆ ಪ್ರಸ್ತಾಪಿಸಿದ್ದರು. ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿತ್ತು. ಇದಾದ ನಂತರ ಕೊಹ್ಲಿ ಈ ಇಂಗ್ಲಿಷ್ ಕ್ರಿಕೆಟಿಗರನ್ನು ಭೇಟಿಯಾದಾಗ, 'ನೀವು ಟ್ವಿಟ್ಟರ್‌ನಲ್ಲಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡಬಾರದು. ಭಾರತದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ!' ಎಂದು ಹೇಳಿದ್ದರಂತೆ. ಡೇನಿಯಲ್ ವ್ಯಾಟ್ 2010 ರಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಇದನ್ನೂ ಓದಿ : Rohit Sharma : ಟೀಂ ಇಂಡಿಯಾ ಸೋಲಿನ ನಂತರ ಕೋಪಗೊಂಡ ನಾಯಕ ರೋಹಿತ್ ಶರ್ಮಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News