ಬ್ಯಾಕ್ ಟು ಬ್ಯಾಕ್ 5 ಬೌಂಡರಿ, 5 ಸಿಕ್ಸರ್: 24 ವರ್ಷದ ಯುವ ಬ್ಯಾಟ್ಸ್ಮನ್ ಅಬ್ಬರಕ್ಕೆ ಕನ್ಫರ್ಮ್ ಆಯ್ತು ವಿಶ್ವಕಪ್ ಎಂಟ್ರಿ!

World Cup in India, Harry Brook batting: ಆರಂಭಿಕ ಜಾನಿ ಬೈರ್‌ ಸ್ಟೋವ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್ ಹ್ಯಾರಿ ಬ್ರೂಕ್ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಿಗದಿತ 20 ಓವರ್‌’ಗಳಲ್ಲಿ 4 ವಿಕೆಟ್‌ಗೆ 198 ರನ್ ಗಳಿಸಿತು.

Written by - Bhavishya Shetty | Last Updated : Sep 2, 2023, 02:20 PM IST
    • ODI ವಿಶ್ವಕಪ್ ಈ ವರ್ಷ ಭಾರತದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ನಡೆಯಲಿದೆ.
    • 24ರ ಹರೆಯದ ಆಟಗಾರನೊಬ್ಬ ಮೈದಾನದಲ್ಲಿ ಅಬ್ಬರಿಸಿ ಸಿಕ್ಸರ್’ಗಳ ಸುರಿಮಳೆಗೈದಿದ್ದಾನೆ
    • ಹ್ಯಾರಿ ಬ್ರೂಕ್ 5 ಬೌಂಡರಿ ಹಾಗೂ 5 ಸಿಕ್ಸರ್‌’ಗಳ ನೆರವಿನಿಂದ 36 ಎಸೆತಗಳಲ್ಲಿ 67 ರನ್ ಗಳಿಸಿದರು
ಬ್ಯಾಕ್ ಟು ಬ್ಯಾಕ್ 5 ಬೌಂಡರಿ, 5 ಸಿಕ್ಸರ್: 24 ವರ್ಷದ ಯುವ ಬ್ಯಾಟ್ಸ್ಮನ್ ಅಬ್ಬರಕ್ಕೆ ಕನ್ಫರ್ಮ್ ಆಯ್ತು ವಿಶ್ವಕಪ್ ಎಂಟ್ರಿ!   title=
Harry Brook

World Cup in India, Harry Brook batting: ODI ವಿಶ್ವಕಪ್ ಈ ವರ್ಷ ಭಾರತದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ನಡೆಯಲಿದೆ. ಈ ಐಸಿಸಿ ಟೂರ್ನಮೆಂಟ್ ಅಕ್ಟೋಬರ್ 5 ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಎಲ್ಲಾ ದೇಶಗಳ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ. ಈ ಬೆನ್ನಲ್ಲೇ 24ರ ಹರೆಯದ ಆಟಗಾರನೊಬ್ಬ ಮೈದಾನದಲ್ಲಿ ಅಬ್ಬರಿಸಿ ಸಿಕ್ಸರ್’ಗಳ ಸುರಿಮಳೆಗೈದಿದ್ದಾನೆ.

ಇದನ್ನೂ ಓದಿ: ಭಾರತ-ಪಾಕ್ ಏಷ್ಯಾಕಪ್ ಪಂದ್ಯಕ್ಕೆ ಮಳೆ ಅಡ್ಡಿ! ರದ್ದಾಗುತ್ತಾ ಹೈವೋಲ್ಟೇಜ್ ಪಂದ್ಯ?

ಆರಂಭಿಕ ಜಾನಿ ಬೈರ್‌ ಸ್ಟೋವ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್ ಹ್ಯಾರಿ ಬ್ರೂಕ್ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಿಗದಿತ 20 ಓವರ್‌’ಗಳಲ್ಲಿ 4 ವಿಕೆಟ್‌ಗೆ 198 ರನ್ ಗಳಿಸಿತು. ಇದಾದ ಬಳಿಕ ನ್ಯೂಜಿಲೆಂಡ್ ತಂಡದ ಇನಿಂಗ್ಸ್ ಕೇವಲ 13.5 ಓವರ್‌’ಗಳಲ್ಲಿ 103 ರನ್‌’ಗಳಿಗೆ ಕುಸಿಯಿತು. ಕೇವಲ 3 ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. 4ನೇ ಕ್ರಮಾಂಕದಲ್ಲಿ ಬಂದ ಹ್ಯಾರಿ ಬ್ರೂಕ್ 67 ರನ್ ಕೊಡುಗೆ ನೀಡಿದರು.

24ರ ಹರೆಯದ ಹ್ಯಾರಿ ಬ್ರೂಕ್ 5 ಬೌಂಡರಿ ಹಾಗೂ 5 ಸಿಕ್ಸರ್‌’ಗಳ ನೆರವಿನಿಂದ 36 ಎಸೆತಗಳಲ್ಲಿ 67 ರನ್ ಗಳಿಸಿದರು. ಬೈರ್‌ ಸ್ಟೋವ್ 86 ರನ್ ಗಳಿಸಿ ಅಜೇಯರಾಗಿ ಮರಳಿದರೆ, ಗಸ್ ಅಟ್ಕಿನ್ಸನ್ ತನ್ನ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್‌’ಗಳನ್ನು ಕಬಳಿಸಿದ್ದರು. ಇದರಿಂದಾಗಿ ನ್ಯೂಜಿಲೆಂಡ್ 95 ರನ್‌’ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇಂತಹ ಬಿರುಸಿನ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಬ್ರೂಕ್ ಮುಂಬರುವ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.  ಇನ್ನು ಇವರಿಬ್ಬರ ನಡುವೆ ಮೂರನೇ ವಿಕೆಟ್‌’ಗೆ 131 ರನ್‌ಗಳ ಜೊತೆಯಾಟ ನಡೆದಿದ್ದು, ನಾಲ್ಕು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಭಾರತ-ಪಾಕ್ ಐತಿಹಾಸಿಕ ಪಂದ್ಯವನ್ನು ಉಚಿತವಾಗಿಯೂ ನೋಡಬಹುದು: ಈ ಸಣ್ಣ ಕೆಲಸ ಮಾಡಿದ್ರೆ ಸಾಕು…

ಡರ್ಹಾಮ್‌’ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌’ಗಳ ಜಯ ಸಾಧಿಸಿದೆ. ಕೇವಲ 3 ನ್ಯೂಜಿಲೆಂಡ್ ಬ್ಯಾಟ್ಸ್‌’ಮನ್‌’ಗಳು ಎರಡಂಕಿಗಳನ್ನು ತಲುಪಿದರು, ಅದರಲ್ಲಿ ಟಿಮ್ ಸೀಫರ್ಟ್ ಅತ್ಯಧಿಕ 39 ರನ್ ಗಳಿಸಿದರು. ವೇಗದ ಬೌಲರ್ ಅಟ್ಕಿನ್ಸನ್ ಇಂಗ್ಲೆಂಡ್ ಪರ ತಮ್ಮ ಮೊದಲ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದು, 20 ರನ್ ನೀಡಿ 4 ವಿಕೆಟ್ ಪಡೆದರೆ, ಸ್ಪಿನ್ನರ್ ಆದಿಲ್ ರಶೀದ್ 18 ರನ್ ನೀಡಿ 2 ವಿಕೆಟ್ ಪಡೆದರು. ಸರಣಿಯ ಮೂರನೇ ಪಂದ್ಯ ಭಾನುವಾರ ಎಜ್‌’ಬಾಸ್ಟನ್‌ನಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News