ನವದೆಹಲಿ : ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಲಂಡನ್ ನಡುವಿನ 2ನೇ ಟೆಸ್ಟ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಹೆಚ್ಚಿನ ರನ್ ಗಳಿಸಿದ್ದು. ಹಿಟ್ ಮ್ಯಾನ್ 83 ರನ್ ಗಳಿಸಿದರೆ, ಕೆಎಲ್ ರಾಹುಲ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಶತಕ ಬಾರಿಸಿದರು.
ಆದಾಗ್ಯೂ, ಇಂಗ್ಲೆಂಡ್ ಪ್ರೇಕ್ಷಕರು ಮೂರನೇ ದಿನದ ಆಟದ ಸಮಯದಲ್ಲಿ ಕೆಎಲ್ ರಾಹುಲ್(KL Rahul) ಶ್ರಮವನ್ನು ಮೆಚ್ಚಿಲ್ಲವೆಂದು ತೋರುತ್ತದೆ. ಫೀಲ್ಡಿಂಗ್ ಮಾಡುವಾಗ ಅಭಿಮಾನಿಗಳು ರಾಹುಲ್ ಮೇಲೆ ಬಿಯರ್ ಕಾರ್ಕ್ ಎಸೆದಿರುವ ಘಟನೆ ನಡೆದಿದೆ.
ಇದನ್ನೂ ಓದಿ : IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!
ಕಾಮೆಂಟೇಟರ್ಗಳು ಈ ಬಗ್ಗೆ ಮಾತನಾಡುತ್ತಿರುವುದು ಕಂಡು ಬಂದಿದೆ. ಅವರು ಎರಡು ಸಂದರ್ಭಗಳಲ್ಲಿ ಆಂಗ್ಲ ಪ್ರೇಕ್ಷಕರು ಕೆಎಲ್ ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದ ಸ್ಥಳದ ಸುತ್ತಲೂ ವಸ್ತುಗಳನ್ನು(Bottle Cork) ಎಸೆದಿದ್ದಾರೆ ಎಂದು ಹೇಳಿದರು.
68 ನೇ ಓವರ್ ಸಮಯದಲ್ಲಿ ಒಬ್ಬ ಪ್ರೇಕ್ಷಕ ಬಾಟಲಿಯ ಕಾರ್ಕ್ ಅನ್ನು ಬೌಂಡರಿಯಲ್ಲಿರುವ ರಾಹುಲ್ ಬಳಿ ಎಸೆದ ಘಟನೆ ನಡೆಯಿತು. ನಂತರ ಕ್ಯಾಪ್ಟನ್ ವಿರಾಟ್ ಕೊಹ್ಲಿ(Virat Kohli) ಅದನ್ನ ಪ್ರಶ್ನಿಸಿದರು.
ಬ್ಯಾಟ್ಸ್ಮನ್(Batsman) ತನ್ನ ಶಾಂತತೆಯನ್ನು ಕಾಪಾಡಿಕೊಂಡು, ಕೊಹ್ಲಿ ಅವರನ್ನು ಕೇಳಿದಾಗ ಅದು ನೋಡುಗರನ್ನ ನಗಿಸಿತು. ಟೀಕಾಕಾರರು ಹೇಳಿದಂತೆ, ಕೊಹ್ಲಿಯು ಐಟಂಗಳನ್ನು ಮತ್ತೆ ಜನಸಮೂಹಕ್ಕೆ ಎಸೆಯುವಂತೆ ಕೇಳಿದ್ದರು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಒಳಗಾಗಿದೆ. ಈ ಕುರಿತು ಕೆಲವು ಟ್ವಿಟ್ ಇಲ್ಲಿದೆ ನೋಡಿ.
England crowds throw beer corks in the ground near KL Rahul at 3rd man , Virat Kohli said Rahul to throw it away from the ground. #ENGvIND
— Diwakar Kumar¹⁸ (@diwakarkumar47) August 14, 2021
ಇದನ್ನೂ ಓದಿ : KL Rahul: ಲಾರ್ಡ್ಸ್ನಲ್ಲಿ ಶತಕ ಗಳಿಸಿ 31 ವರ್ಷಗಳ ಹಳೆಯ ದಾಖಲೆ ಮುರಿದ ಕೆ.ಎಲ್. ರಾಹುಲ್
ಮ್ಯಾಚ್ ಗೆ ಸಂಬಂಧಿಸಿದಂತೆ, 3 ನೇ ದಿನವು ಪ್ರಗತಿಯಲ್ಲಿದೆ ಮತ್ತು ಇಂಗ್ಲೆಂಡ್ ಯಾವುದೇ ವಿಕೆಟ್(Wicket) ಕಳೆದುಕೊಂಡಿಲ್ಲ. ಜೋ ರೂಟ್ ಮತ್ತು ಜಾನಿ ಬೈರ್ಸ್ಟೊ ಇಬ್ಬರೂ ಅರ್ಧ ಶತಕ ಗಳಿಸಿದ್ದಾರೆ. ಊಟದ ವಿರಾಮದವರೆಗೂ ಇಂಗ್ಲೆಂಡ್ 216 ರನ್ ಗಳಿಸಿದೆ.
English Crowds have thrown Beer Corks at Indian Players 😬😳#ENGvIND #ENGvsIND #INDvENG #KLRahul #Cricket #INDvsENG #Joeroot #Yaari@sports_tak @YaariSports @mohsinaliisb pic.twitter.com/GnIRLX88Sl
— Ishaan (@Ishaan13891693) August 14, 2021
ಭಾರತದ ಮಟ್ಟಿಗೆ, ಅವರು 2 ನೇ ದಿನದಂದು 364 ರನ್ ಗಳಿಗೆ ಆಲೌಟ್(All Out) ಆದರು. ಅದೇ ದಿನ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ ಮತ್ತು ಹಸೀಬ್ ಹಮೀದ್ ಅವರನ್ನು ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಪೆವಿಲಿಯನ್ ಗೆ ಕಳುಹಿಸಿದ ಇಂಗ್ಲೆಂಡ್ ಮೂರು ವಿಕೆಟ್ ಕಳೆದುಕೊಂಡಿತು.
This is Unacceptable. England crowd was throwing something towards KL Rahul. #INDvENG pic.twitter.com/6EeCdF0mHF
— SillyTweets (@SillyTweets13) August 14, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.