ಶ್ರೀಲಂಕಾ ಪ್ರವಾಸಕ್ಕೆ ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ!

India tour of Sri Lanka 2024: ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ. ಹೀಗಿರುವಾಗ ಇತ್ತೀಚೆಗೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನೂತನ ಕೋಚ್ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು.

Written by - Bhavishya Shetty | Last Updated : Jul 9, 2024, 04:25 PM IST
    • ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ
    • ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ.
    • ಹೀಗಿರುವಾಗ ಟಿ20 ಟಿಂ ಇಂಡಿಯಾ ತಂಡಕ್ಕೆ ಕ್ಯಾಪ್ಟನ್ ಕೂಡ ಘೋಷಣೆಯಾಗಬೇಕು
ಶ್ರೀಲಂಕಾ ಪ್ರವಾಸಕ್ಕೆ ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ! title=
Team India

India tour of Sri Lanka 2024: ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಪ್ರಸ್ತುತ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ಧ ಟಿ 20 ಸರಣಿಯನ್ನು ಆಡುತ್ತಿದೆ. ಇದರ ನಂತರ, ಭಾರತವು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ, ಅಲ್ಲಿ ಮೂರು ಟಿ20 ಮತ್ತು ಮೂರು ODI ಸರಣಿಗಳನ್ನು ಆಡಲಿದೆ.

ಇದನ್ನೂ ಓದಿ: 5 ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಒಂದು ತುಂಡು ಇದ್ದಿಲು ಸಾಕು..! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿ

ಇನ್ನೊಂದೆಡೆ ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ. ಹೀಗಿರುವಾಗ ಇತ್ತೀಚೆಗೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನೂತನ ಕೋಚ್ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು. ಮತ್ತೊಂದೆಡೆ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಹೀಗಿರುವಾಗ ಟಿ20 ಟಿಂ ಇಂಡಿಯಾ ತಂಡಕ್ಕೆ ಕ್ಯಾಪ್ಟನ್ ಕೂಡ ಘೋಷಣೆಯಾಗಬೇಕು.

ಸದ್ಯ ಆಪ್ತ ಮೂಲಗಳಿಂದ ಬಂದ ಮಾಹಿತಿ ಅನುಸಾರ, ರೋಹಿತ್ ಶರ್ಮಾ ಮನಗೆದ್ದಿದ್ದ ಕನ್ನಡಿಗ ಕೆ.ಎಲ್ ರಾಹುಲ್’ಗೆ ಶ್ರೀಲಂಕಾ ಟಿ20 ಕ್ಯಾಪ್ಟನ್ಸಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ,  ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಾರ್ದಿಕ್ ಅಥವಾ ರಾಹುಲ್, ಈ ಇಬ್ಬರಲ್ಲಿ ಒಬ್ಬರಿಗೆ ನಾಯಕತ್ವ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಬ್ಯೂಟಿಯಲ್ಲಿ ಅನುಷ್ಕಾಗಿಂತಲೂ ಚಂದ ವಿರಾಟ್ ಅಕ್ಕನ ಮಗಳು! ಕೊಹ್ಲಿ ಸೊಸೆಯ ಅಂದಕ್ಕೆ ನಟಿಯರೂ ಸರಿಸಾಟಿಯಲ್ಲ…

ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಹ ಆಡಲಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ತಂಡವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ ಶ್ರೀಲಂಕಾ ಪ್ರವಾಸದಲ್ಲೂ ತಂಡಕ್ಕೆ ನಾಯಕತ್ವ ವಹಿಸುವ ಸಾಧ್ಯತೆಯೂ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News