ಮದ್ಯಪ್ರಿಯರಿಗೆ ಶಾಕ್ :ಬಿಯರ್ ಬೆಲೆ ಮತ್ತೆ ಏರಿಕೆ ! ಈ ಬಾರಿ ಜೇಬಿಗೆ ಎಷ್ಟು ಹೆಚ್ಚು ಹೊರೆ ತಿಳಿದುಕೊಳ್ಳಿ !

ಮದ್ಯ ಪ್ರಿಯರಿಗೆ ಮತ್ತಿನದು ಶಾಕ್ ಸಿಕ್ಕಿದೆ. ಮತ್ತೆ ಬಿಯರ್ ಬೆಲೆಯಲ್ಲಿ ಏರಿಕೆಯನ್ನು ಕಂಪನಿಗಳು ಪ್ರಕಟಿಸಿವೆ. ಈ ನಿಟ್ಟಿನಲ್ಲಿ ಕಳೆದ ೧೭ ತಿಂಗಳಲ್ಲಿ   ಬಿಯರ್ ಬೆಲೆ ೬೦ ರೂಪಾಯಿಯಷ್ಟು ಏರಿಕೆ ಕಂಡಿದೆ. 

Written by - Ranjitha R K | Last Updated : Jul 30, 2024, 02:04 PM IST
  • ಬಿಯರ್ ಬೆಲೆಯಲ್ಲಿ ಹೆಚ್ಚಳ
  • ಬಿಯರ್ ಕಂಪನಿಗಳ ತೀರ್ಮಾನ
  • 10ರಿಂದ 20 ರೂಪಾಯಿವರೆಗೆ ಏರಿಕೆ
 ಮದ್ಯಪ್ರಿಯರಿಗೆ ಶಾಕ್ :ಬಿಯರ್ ಬೆಲೆ ಮತ್ತೆ ಏರಿಕೆ ! ಈ ಬಾರಿ ಜೇಬಿಗೆ ಎಷ್ಟು ಹೆಚ್ಚು ಹೊರೆ ತಿಳಿದುಕೊಳ್ಳಿ ! title=

ಬೆಂಗಳೂರು : ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೆ 10ರಿಂದ 20 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಬಿಯರ್ ದರ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ. 

ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಕೆ ಮಾಡಿದ್ದ ಕಂಪನಿಗಳು ಹೊಸ ದರ ಜಾರಿಗೆ ತಂದಿತ್ತು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿವೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು 60 ರೂಪಾಯಿವರೆಗೆ ಏರಿಕೆಯಾಗಿದೆ. 

ಇದನ್ನೂ ಓದಿ : Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಮಂಗಳೂರಿನಲ್ಲಿ ಇಂದಿನ ಅಡಿಕೆ ಧಾರಣೆ

ಮದ್ಯ  ಪ್ರಿಯರಿಗೆ ಬಿಯರ್ ಬರೆ :
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್‌ ಸರಕಾರ ಬಿಯರ್‌ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್  ದರ ಅಂದು  ಏರಿಕೆಯಾಗಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು  ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಇದಾದ ನಂತರ ಮತ್ತೆ ಸರ್ಕಾರ ಬಿಯರ್ ಮೇಲಿನ ಸುಂಕ‌ ಹೆಚ್ಚಳ ಮಾಡಿತ್ತು. ಈ ಹಿನ್ನೆಲಯಲ್ಲಿ ಫೆಬ್ರವರಿಯಲ್ಲಿ ಬಿಯರ್ ದರ  ಮತ್ತೆ ಏರಿಕೆ ಕಂಡಿತ್ತು. 

ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 60 ವರೆಗೆ ಹೆಚ್ಚಳವಾದಂತಾಗಿದೆ. 

ಇದನ್ನೂ ಓದಿ : 8ನೇ ತರಗತಿವರೆಗಷ್ಟೇ ಶಾಲೆ !ಪುಟ್ಟದೊಂದು ಗೂಡಿನಲ್ಲಿ ವ್ಯಾಪಾರ !ಆದರೆ ಇಂದು 78,000 ಕೋಟಿಯ ಸಾಮ್ರಾಜ್ಯದ ಒಡೆಯ !40 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News