ನವದೆಹಲಿ: ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿರುವ ದೇಶದ ಅಗ್ರ ಮೂರು ಕ್ರಿಕೆಟಿಗರಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಆಸೀಸ್ ವಿರುದ್ಧದ 50 ಓವರ್ಗಳ ಸ್ವರೂಪದಲ್ಲಿ ಹೆಚ್ಚಿನ ರನ್ ಗಳಿಸಿದ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳನ್ನು ಬಹಿರಂಗಪಡಿಸಿತು.ಸಚಿನ್ ತೆಂಡೂಲ್ಕರ್ ಅವರು ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಿದ 70 ಏಕದಿನ ಪಂದ್ಯಗಳಲ್ಲಿ ಒಟ್ಟು 3,077 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.
Most runs for India against Australia in ODIs:
🥇 3077 – Sachin Tendulkar
🥈 2208 – Rohit Sharma
🥉 1910 – Virat KohliWill the 🇮🇳 captain reach the 2000-run mark against 🇦🇺 in the upcoming #AUSvIND ODI series? 👀 pic.twitter.com/IjKKnTd9ND
— ICC (@ICC) November 22, 2020
ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಯಾರು ಗ್ರೇಟ್...? ವಾಸಿಂ ಜಾಫರ್ ಹೇಳಿದ್ದೇನು ?
ಮಾಸ್ಟರ್ ಬ್ಲಾಸ್ಟರ್ ನಂತರ ಭಾರತೀಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಎಂಟು ಶತಕ ಮತ್ತು ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 2,208 ರನ್ ಗಳಿಸಿದ್ದಾರೆ.ಆಸೀಸ್ ವಿರುದ್ಧದ 50 ಓವರ್ಗಳ ಸ್ವರೂಪದಲ್ಲಿ ಕೊಹ್ಲಿ ಸರಾಸರಿ 54.57 ರಲ್ಲಿ 1,910 ರನ್ ಗಳಿಸಿದ್ದಾರೆ.
ಶೀಘ್ರದಲ್ಲೇ ಸಚಿನ್ ದಾಖಲೆಗೆ ಕುತ್ತು ತರಲಿದ್ದಾರೆ ವಿರಾಟ್ ಕೊಹ್ಲಿ...!
ಈಗ ಕೊಹ್ಲಿ ಆರನ್ ಫಿಂಚ್ ನೇತೃತ್ವದ ತಂಡದ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2000 ರನ್‌ಗಳ ಗಡಿ ದಾಟಲಿದ್ದಾರೆ.50 ಓವರ್‌ಗಳ ಕ್ರಿಕೆಟ್‌ನಲ್ಲಿ 12,000 ರನ್ ಗಳಿಸಿದ ಸಚಿನ್ ಅವರ ವೇಗದ ಬ್ಯಾಟ್ಸ್‌ಮನ್ ದಾಖಲೆಯನ್ನು ಮುರಿಯುವ ಗುರಿಯನ್ನು ಕೊಹ್ಲಿ ಹೊಂದಿದ್ದಾರೆ.ಇದುವರೆಗೆ 239 ಇನ್ನಿಂಗ್ಸ್‌ಗಳಲ್ಲಿ ಒಟ್ಟು11,867 ರನ್ ಗಳಿಸಿರುವ ಕೊಹ್ಲಿ, ಈಗ ಕೇವಲ 133 ರನ್ ಗಳಷ್ಟೇ ಹಿಂದಿದ್ದಾರೆ. ಈ ಮಧ್ಯೆ, ತೆಂಡೂಲ್ಕರ್ 300 ಪಂದ್ಯಗಳಲ್ಲಿ 12,000 ರನ್ ಗಡಿ ದಾಟಿದ್ದಾರೆ.