Rabada Viral Video: ಸಲ್ಮಾನ್ ಖಾನ್ ಗೊತ್ತಾ? ಎಂದ ನಿರೂಪಕಿಗೆ ರಬಾಡ ಕೊಟ್ಟ ರಿಪ್ಲೇ ನೋಡಿ...

Rabada Viral Video: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವೇಗದ ಬೌಲರ್ ಕಗಿಸೊ ರಬಾಡ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.  

Written by - Chetana Devarmani | Last Updated : May 10, 2022, 05:32 PM IST
  • ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಕಗಿಸೊ ರಬಾಡ
  • ಸಲ್ಮಾನ್ ಖಾನ್ ಗೊತ್ತಾ? ಎಂದ ನಿರೂಪಕಿ
  • ನಿರೂಪಕಿಗೆ ರಬಾಡ ಕೊಟ್ಟ ರಿಪ್ಲೇ ನೋಡಿ
Rabada Viral Video: ಸಲ್ಮಾನ್ ಖಾನ್ ಗೊತ್ತಾ? ಎಂದ ನಿರೂಪಕಿಗೆ ರಬಾಡ ಕೊಟ್ಟ ರಿಪ್ಲೇ ನೋಡಿ...  title=
ಕಗಿಸೊ ರಬಾಡ

Rabada Viral Video: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವೇಗದ ಬೌಲರ್ ಕಗಿಸೊ ರಬಾಡ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ವಾಸ್ತವವಾಗಿ, ಈ ವಿಡಿಯೋದಲ್ಲಿ, ಸಂಭಾಷಣೆಯ ಸಮಯದಲ್ಲಿ ರಬಾಡಾ ಹಿಂದಿ ಚಲನಚಿತ್ರ ಸಂಭಾಷಣೆಗಳನ್ನು ಮಾತನಾಡುತ್ತಿದ್ದಾರೆ. ಈ ವೇಳೆ ಆ್ಯಂಕರ್ ರಬಾಡ ಅವರನ್ನು ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂದು ಕೇಳಿದಾಗ ಪ್ರತಿಕ್ರಿಯೆಯಾಗಿ ಅವರು ಕೊಟ್ಟ ಉತ್ತರಕ್ಕೆ ಆಂಕರ್‌ಗಳು ಆಶ್ಚರ್ಯಚಕಿತರಾದರು.

ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರಲಿದ್ದಾರೆಯೇ ರಾಹುಲ್ ದ್ರಾವಿಡ್..!

ಪಂಜಾಬ್ ಕಿಂಗ್ಸ್  ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಕ್ಕೂ ಮುನ್ನ ವಿದೇಶಿ ಆಟಗಾರರು ಬಾಲಿವುಡ್ ಸಿನಿಮಾದ ಡೈಲಾಗ್ ಹೇಳಿ ಮಿಂಚಿದ್ದಾರೆ. ಇದರಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಆಲ್‌ ರೌಂಡರ್‌ ಕಗಿಸೊ ರಬಾಡ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. ಕಗಿಸೊ ರಬಾಡ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. 

ಐಪಿಎಲ್​ ಆ್ಯಂಕರ್​ ಒಬ್ಬರು ಕೇಳಿದ ಪ್ರಶ್ನೆಗೆ ರಬಾಡ ನೀಡಿರುವ ಎಪಿಕ್‌ ಉತ್ತರ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ರಬಾಡಾ ನೀಡಿದ ಉತ್ತರ ಬೇಸರ ತರಿಸಿದೆ. ಐಪಿಎಲ್‌ ನಿರೂಪಕಿ ರಬಾಡ ಬಳಿ, ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ನೀಡುವ ರಬಾಡ ಗೊತ್ತಿಲ್ಲ, ನನಗೆ ರಶೀದ್​ ಖಾನ್​ ಮಾತ್ರ ಗೊತ್ತು ಎಂದು ಫನ್ನಿಯಾಗಿ ಉತ್ತರಿಸುತ್ತಾರೆ. ಈ ಉತ್ತರ ಕೇಳಿದ ಆ್ಯಂಕರ್​ ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: 5 ಬಾರಿ IPL ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌ ಸತತ ಸೋಲಿಗೆ ಕಾರಣವೇನು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News